ಮಡಿಕೇರಿ, ಅ. 24: ಇಂಟರ್‍ನ್ಯಾಷನಲ್ ಹಾಕಿ ಫೆಡರೇಷನ್‍ಗೆ ಮಾನ್ಯತೆ ಪಡೆದ ಟೆಕ್ನಿಕಲ್ ಅಫಿಷಿಯಲ್ ಆಗಿ ಕೊಡಗಿನವರಾದ ಪುಳ್ಳಂಗಡ ರೋಹಿಣಿ ಬೋಪಣ್ಣ (ಸೌಮ್ಯ) ಅವರು ಬಡ್ತಿ ಪಡೆದಿದ್ದಾರೆ. ಈ ತನಕ ಏಷ್ಯನ್ ಹಾಕಿ ಫೆಡರೇಷನ್‍ನ ಟೆಕ್ನಿಕಲ್ ಅಫಿಷಿಯಲ್ ಆಗಿ ಕಾರ್ಯನಿರ್ವಹಿಸುವ ಅರ್ಹತೆ ಹೊಂದಿದ್ದ ರೋಹಿಣಿ (ತಾಮಲೆ ನೆಲ್ಲಮಕ್ಕಡ) ಅವರು ಇದೀಗ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್‍ನ ಪಂದ್ಯಾವಳಿಗಳಲ್ಲೂ ಪಾಲ್ಗೊಳ್ಳಬಹುದಾಗಿದೆ. ಇವರು ಅಂತರ ರಾಷ್ಟ್ರೀಯ ಹಾಕಿ ಆಟಗಾರ ಪುಳ್ಳಂಗಡ ಬೋಪಣ್ಣ ಅವರ ಪತ್ನಿ.