ವೀರಾಜಪೇಟೆ, ಅ: 25 ಪಟ್ಟಣ ಪಂಚಾಯಿತಿ ಚುನಾವಣೆಗೆ ಕೇವಲ ಎರಡು ದಿನಗಳು ಮಾತ್ರ ಉಳಿದಿರುವಾಗ ಕೊಡಗು ಕೇರಳದ ಗಡಿ ಭಾಗದ ವೀರಾಜಪೇಟೆ ಪಟ್ಟಣದಲ್ಲಿ ಈಗ ಬಿರುಸಿನ ರಾಜಕೀಯ ಚಟುವಟಿಕೆಗಳು ಮುಂದುವರೆದಿವೆ. ಮತದಾರರಲ್ಲಿ ಹಾಗೂ ಈಗಲೇ ಉಮೇದುವಾರರ ಸೋಲು-ಗೆಲುವಿನ ಲೆಕ್ಕಾಚಾರ ಉಂಟಾಗಿದೆ.

ನಗರದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಕೆಯ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದಿನ ಸಾಲಿನಂತೆ ಅಧಿಕಾರದ ಚುಕ್ಕಾಣಿ ಮರಳಿ ಪಡೆಯುವ ಹಂಬಲದಲ್ಲಿರುವ ಬಿ.ಜೆ.ಪಿ. ಪಕ್ಷ ಎಲ್ಲಾ 18 ವಾರ್ಡ್‍ಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 16 ವಾರ್ಡ್‍ಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ವೀರಾಜಪೇಟೆ, ಅ: 25 ಪಟ್ಟಣ ಪಂಚಾಯಿತಿ ಚುನಾವಣೆಗೆ ಕೇವಲ ಎರಡು ದಿನಗಳು ಮಾತ್ರ ಉಳಿದಿರುವಾಗ ಕೊಡಗು ಕೇರಳದ ಗಡಿ ಭಾಗದ ವೀರಾಜಪೇಟೆ ಪಟ್ಟಣದಲ್ಲಿ ಈಗ ಬಿರುಸಿನ ರಾಜಕೀಯ ಚಟುವಟಿಕೆಗಳು ಮುಂದುವರೆದಿವೆ. ಮತದಾರರಲ್ಲಿ ಹಾಗೂ ಈಗಲೇ ಉಮೇದುವಾರರ ಸೋಲು-ಗೆಲುವಿನ ಲೆಕ್ಕಾಚಾರ ಉಂಟಾಗಿದೆ.

ನಗರದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಕೆಯ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದಿನ ಸಾಲಿನಂತೆ ಅಧಿಕಾರದ ಚುಕ್ಕಾಣಿ ಮರಳಿ ಪಡೆಯುವ ಹಂಬಲದಲ್ಲಿರುವ ಬಿ.ಜೆ.ಪಿ. ಪಕ್ಷ ಎಲ್ಲಾ 18 ವಾರ್ಡ್‍ಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 16 ವಾರ್ಡ್‍ಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಎದುರಿಸುತ್ತಿದೆ. ಕಳೆದ ಎರಡು ಅವಧಿಯಲ್ಲಿ ಬಿ.ಜೆ.ಪಿ. ಯ ಪ್ರಭಾವೀ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಎಂ.ಕೆ.ದೇಚಮ್ಮ 7ನೇ ವಾರ್ಡ್‍ನಿಂದ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದು ಬಿಜೆಪಿಯ ಬಿ.ಡಿ. ಸುನಿತಾರವರಿಗೆ ತೀವ್ರ ಸವಾಲನ್ನು ಒಡ್ಡುತ್ತಿದ್ದಾರೆ. ಬಿ.ಜೆ.ಪಿ.ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದಿಂದ ಜೆ.ಡಿ.ಎಸ್.ಹಾಗೂ ಕಾಂಗ್ರೆಸ್ ಪಕ್ಷಗಳು ಈ ವಾರ್ಡ್‍ನಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ಪಂಚಾಯಿತಿಯಲ್ಲಿ ಖಾತೆ ತೆರೆಯುವ ನಿರೀಕ್ಷೆಯಲ್ಲಿರುವ ಎಸ್.ಡಿ.ಪಿ.ಐ.ಪಕ್ಷ ವಾರ್ಡ್‍ನಲ್ಲಿ ಅಧಿಕವಿರುವ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿರಿಸಿ ಯುವÀ ವಕೀಲೆ ರೆಹನಾ ಷಾರವರನ್ನು ಕಣಕ್ಕಿಳಿಸುವದರ ಮೂಲಕ ಇವರಿಬ್ಬರಿಗೂ ಪೈಪೋಟಿ ನೀಡಿದೆ.

ವಾರ್ಡ್ ನಂ. 14 (ಗೌರಿಕೆರೆ)ರಲ್ಲಿ ಕಳೆದ ಪಂಚಾಯಿತಿಯ ಕೊನೆಯ ಅವಧಿಯ ಅಧ್ಯಕ್ಷರಾಗಿದ್ದ ಇ.ಸಿ. ಜೀವನ್‍ರವರು ಸ್ಪರ್ಧಿಸುತ್ತಿದ್ದು , ಈ ಹಿಂದೆ ಕಾಂಗ್ರೆಸ್‍ನ ಪ್ರಭಾವೀ ಸದಸ್ಯರಾಗಿದ್ದ ಸಿ.ಕೆ. ಪ್ರಥ್ವಿನಾಥ್‍ರವರನ್ನು ಎದುರಿಸುತ್ತಿದ್ದಾರೆ. ಮತ್ತೊಬ್ಬ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ವಾರ್ಡ್ ನಂ 3 (ಅರಸುನಗರ)ರಲ್ಲಿ ಸ್ಪರ್ಧಿಸುತ್ತಿದ್ದು, ಟಿಕೆಟ್ ಹಂಚಿಕೆ ವಿಷಯದಲ್ಲಿ ಪಕ್ಷದೊಂದಿಗೆ ಮುನಿಸಿಕೊಂಡು ಬಂಡಾಯದ ಬಾವುಟ ಬೀಸಿದ ಬಿ.ಜೆ.ಪಿ. ತಾಲೂಕು ವಕ್ತಾರ ಟಿ.ಪಿ. ಕೃಷ್ಣನವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಹಿಂದಕ್ಕೆ ಪಡೆದು ಕಾಂಗ್ರೆಸ್ ಅಭ್ಯರ್ಥಿ ಡಿ.ಪಿ.ರಾಜೇಶ್‍ರವರ ಪರ ಬಹಿರಂಗವಾಗಿ ರಂಗಕ್ಕಿಳಿದಿರುವದು ಈ ವಾರ್ಡ್‍ನ ಫಲಿತಾಂಶದ ಮೇಲೆ ಎಲ್ಲರ ಕಣ್ಣು ಬೀಳುವಂತೆ ಮಾಡಿದೆ.

ಕಳೆದ ಅವಧಿಯಲ್ಲಿ ನಾಮ ನಿರ್ದೇಶಿತ ಸದಸ್ಯರಾಗಿದ್ದ ಪಟ್ಟಡ ರಂಜಿ ಪೂಣಚ್ಚ ವಾರ್ಡ್ ನಂ. 2 (ದೇವಾಂಗಬೀದಿ)ರಲ್ಲಿ, ಮೊಹಮ್ಮದ್ ರಾಫಿ ವಾರ್ಡ್ ನಂ. 9 (ಸುಭಾಶ್‍ನಗರ)ರಲ್ಲಿ ಸ್ಪರ್ಧಿಸುತ್ತಿದ್ದು ಮಹಮ್ಮದ್ ರಾಫಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಇ.ಎಂ. ಅಬ್ದುಲ್ ಖಾದರ್‍ರವರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ಬಿ.ಜೆ.ಪಿ. ಪಕ್ಷದ ಯುವ ಕಾರ್ಯಕರ್ತ ಪ್ರದೀಪ್, ಎಸ್.ಡಿ.ಪಿ.ಐ ಪಕ್ಷದ ಅಬ್ದುಲ್ ಸಾಬಿತ್‍ರವರು ಕಣದಲ್ಲಿ ಇದ್ದಾರೆ. ಅಲ್ಪಸಂಖ್ಯಾತ ಮತಗಳ ವಿಭಜನೆಯ ಲಾಭ ಮುಂದಿರಿಸಿ ಬಿ.ಜೆ.ಪಿ ಪಕ್ಷದ ಯುವ ಕಾರ್ಯಕರ್ತ ಪ್ರದೀಪ್‍ರವರನ್ನು ಕಣಕ್ಕೆ ಇಳಿಸಿದೆ. ವಾರ್ಡ್ ನಂ.2ರಲ್ಲಿ ಪಟ್ಟಡ ರಂಜಿಯವರಿಗೆ ಬಿ.ಜೆ.ಪಿಯ ವಿಷ್ಣು ಹಾಗೂ ಪಕ್ಷೇತರ ಸಿ.ಆರ್. ಅನೀಶ್ ಕುಮಾರ್ ಅವರು ಪ್ರತಿಸ್ಫರ್ಧಿಯಾಗಿದ್ದಾರೆ. ಹಿಂದಿನ ಕೊನೆಯ ಅವಧಿಯ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ವಾರ್ಡ್ ನಂ. 1 (ಚರ್ಚ್ ರಸ್ತೆ)ಯಲ್ಲಿ ಬಿ.ಜೆ.ಪಿಯ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಬಿ.ಜೆ.ಪಿ. ಟಿಕೆಟ್ ವಂಚಿತೆ ಬಿ.ಪಿ. ಗೀತಾ ಸತೀಶ್ ಹಾಗೂ ಜೆ.ಡಿ.ಎಸ್.-ಕಾಂಗ್ರೆಸ್ ಮೈತ್ರಿಕೂಟದ ಫಸೀಹಾ ತಬಸ್ಸುಮ್‍ರವರಿಂದ ಪೈಪೋಟಿಯನ್ನು ಎದುರಿಸುತ್ತಿದ್ದಾರೆ.

ಪಟ್ಟಣ ಪಂಚಾಯ್ತಿಯ ಮತ್ತೊಬ್ಬ ಪ್ರಭಾವಿ ಜೆ.ಡಿ.ಎಸ್ ಸದಸ್ಯ ಎಸ್.ಹೆಚ್ ಮೊಯಿನುದ್ದೀನ್ ವಾರ್ಡ್ ನಂ.12ರ(ಮೀನುಪೇಟೆ-1)ರಲ್ಲಿ ಸ್ಪರ್ಧಿಸುತ್ತಿದ್ದು ಅಬ್ದುಲ್ ಜಲೀಲ್(ಪಕ್ಷೇತರ)ರವರಿಂದ ಹಿಂದೆಂದಿಗಿಂತಲೂ ತೀವ್ರ ರೀತಿಯ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.

ನೇರ ಸ್ಪರ್ಧೆಯ ಐದು ವಾರ್ಡ್‍ಗಳು

ಉಳಿದಂತೆ ವಾರ್ಡ್ ನಂ.11ರ ವಿಜಯನಗರದಲ್ಲಿ ಕಾಂಗ್ರೆಸ್ ಪಕ್ಷದ ಕೆ.ಬಿ. ಪ್ರತಾಪ್ ಹಾಗೂ ಬಿ.ಜೆ.ಪಿಯ ಮಹದೇವ್, ವಾರ್ಡ್ ನಂ.13ರ ಮೀನುಪೇಟೆ-2ರಲ್ಲಿ ಬಿ.ಜೆ.ಪಿ.ಯ ಕೆ.ಬಿ. ಹರ್ಷವರ್ಧನ್ ಮತ್ತು ಕಾಂಗ್ರೆಸ್ಸಿನ ಸಿ.ಎಂ. ದಿನೇಶ್ ನಡುವೆ, ವಾರ್ಡ್ ನಂ. 16ರ ಚಿಕ್ಕಪೇಟೆಯಲ್ಲಿ ಕಾಂಗ್ರೆಸ್ಸಿನ ಅನಿತಾ ತೆರೆಸಾ ಹಾಗೂ ಬಿ.ಜೆ.ಪಿ.ಯ ಆಶಾ ಸುಬ್ಬಯ್ಯ, ವಾರ್ಡ್ ನಂ. 18ರ ಶಿವಕೇರಿಯಲ್ಲಿ ಕಾಂಗ್ರೆಸ್ಸಿನ ನವೀನ್ ಕೆ.ಟಿ. ಮತ್ತು ಬಿ.ಜೆ.ಪಿ.ಯ ಟಿ.ಇ. ಯಶೋಧ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಫಲಿತಾಂಶದ ಮೇಲೆ ಜನರ ಕುತೂಹಲ ಕೆರಳಿಸಿದೆ.

ವಾರ್ಡ್ ನಂ. 4ರ ತೆಲುಗರ ಬೀದಿಯಲ್ಲಿ ಬಿ.ಜೆ.ಪಿ.ಯ ಸುಶ್ಮಿತಾ ಟಿ.ಆರ್. ಹಾಗೂ ಮೈತ್ರಿಕೂಟದ ಹೆಚ್.ಪಿ. ಅನಿತಾ ಮತ್ತು ಪಕ್ಷೇತರ ಹೆಚ್.ಎಂ. ಪೂವಿ ಸ್ಪರ್ಧೆಯಲ್ಲಿದ್ದಾರೆ. ವಾರ್ಡ್ ನಂ. 6ರ ಹರಿಕೇರಿಯಲ್ಲಿ ಬಿ.ಜೆ.ಪಿ.ಯ ಗಜೇಂದ್ರ ಹೆಚ್.ಆರ್ ಹಾಗೂ ಜೆ.ಡಿ.ಎಸ್. ಮೈತ್ರಿಕೂಟದ ಆರ್ಮುಗಂ ಸ್ಪರ್ಧೆಯಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಿ.ಪಿ.ಐ.ಎಂ ಕೇವಲ ಒಂದು ವಾರ್ಡ್‍ನಲ್ಲಿ ಸ್ಪರ್ಧಿಸುತ್ತಿದ್ದು, ಹೆಚ್.ಆರ್. ಶಿವಪ್ಪ ಸ್ಪರ್ಧೆಯಲ್ಲಿದ್ದಾರೆ. ವಾರ್ಡ್ ನಂ.7ರ ನೆಹರುನಗರ-2ರಲ್ಲಿ ಬಿ.ಜೆ.ಪಿಯ ಮೇರಿ ರಾಣಿ, ಕಾಂಗ್ರೆಸ್ಸಿನ ಅಗಸ್ಟಿನ್‍ರವರನ್ನು ಎದುರಿಸುತ್ತಿದ್ದಾರೆ. ಪಕ್ಷೇತರರಾದ ಲೈಲಾ ಜೋಸೆಫ್ ಹಾಗೂ ಜೂಡಿ ವಾಝ್ ಕಣದಲ್ಲಿದ್ದಾರೆ.

ವಾರ್ಡ್ ನಂ. 10ರ ನಿಸರ್ಗ ಬಡಾವಣೆಯಲ್ಲಿ ಮೂವರು ಮಹಿಳೆಯರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕುತೂಹಲ ಕೆರಳಿಸಿದೆ. ಬಿ.ಜೆ.ಪಿ. ಪಕ್ಷದ ಅನಿತಾ ಕುಮಾರಿ, ಕಾಂಗ್ರೆಸ್ ಪಕ್ಷದ ಪಿ. ಸಿಂಧೂ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪಿ.ಎ. ಝೈನಬಾ ರೆಹ್ಮಾನ್ ಸ್ಪರ್ಧೆಯಲ್ಲಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರ ಪ್ರತಿಷ್ಠಿತ ವೀರಾಜಪೇಟೆ ಪಟ್ಟಣ ಪಂಚಾಯಿತಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯೊಂದೇ ಇದ್ದು ಉಳಿದೆಲ್ಲ ಗ್ರಾಮ ಪಂಚಾಯಿತಿ ಗಳಾಗಿವೆ. ಕಳೆದ ಅವಧಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಆಡಳಿತ ಬಿಜೆಪಿ ಕೈಯಲ್ಲಿತ್ತು. ಈಗಲೂ ಈ ಪ್ರತಿಷ್ಠೆಯ ಪಟ್ಟಣ ಪಂಚಾಯಿತಿಯನ್ನು ಉಳಿಸಿಕೊಳ್ಳಲು ಬಿಜೆಪಿ ಭಾರೀ ಪ್ರಯತ್ನ ನಡೆಸುತ್ತಿದೆ. ಪಟ್ಟಣ ಪಂಚಾಯಿತಿಯ ಹದಿನೆಂಟು ವಾರ್ಡ್‍ಗಳ ಮತದಾರರ ಮನವೊಲಿಸಲು ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಬಿಜೆಪಿಯ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಪಕ್ಷದ ಇತರ ಸ್ಥಳೀಯ ನಾಯಕರುಗಳು ಹಗಲಿರುಳೆನ್ನದೆ ಪ್ರಚಾರದಲ್ಲಿ ತೊಡಗಿದ್ದಾರೆ. ಶಾಸಕ ಬೋಪಯ್ಯ ಅವರಂತು ಕಳೆದ ನಾಲ್ಕು ದಿನಗಳಿಂದಲೂ ವೀರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಪರ ಮತದಾರರ ಒಲವಿಗೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಪಟ್ಟಣ ಪಂಚಾಯಿತಿಯಲ್ಲಿ ಸೋಲು ಗೆಲುವು ಪ್ರತಿಷ್ಠೆಯಾಗಿ ಪರಿಣಮಿಸಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ಮೈತ್ರಿ ಕೂಟ ಪಟ್ಟಣ ಪಂಚಾಯಿತಿಯ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬ ಶತಾಯ ಗತಾಯ ಪ್ರಯತ್ನದ ಹಂಬಲದಲ್ಲಿದ್ದು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಸಿಗದೆ ಬಿಜೆಪಿ ಪಕ್ಷವನ್ನು ತೊರೆದಿರುವ ಅನೇಕ ಮಂದಿ ಕಾಂಗ್ರೆಸ್ ಪಕ್ಷದ ಮೈತ್ರಿಯನ್ನು ಬೆಂಬಲಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸದಸ್ಯ ಅರುಣ್ ಮಾಚಯ್ಯ, ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್‍ನ ಆರ್.ಕೆ. ಅಬ್ದುಲ್ ಸಲಾಂ, ಇತರ ಸ್ಥಳೀಯ ನಾಯಕರುಗಳು ಪ್ರಚಾರದಲ್ಲಿ ತೊಡಗಿದ್ದಾರೆ.

ಸಮೀಕ್ಷಾ ವರದಿ: ಡಿ.ಎಂ.ಆರ್, ರೆಹಮಾನ್