ಮಡಿಕೇರಿ, ಅ. 25: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಗಳಿಗೆ ಅತಿಥಿ ಉಪನ್ಯಾಸಕರ ಸಂಘ ಮನವಿ ಸಲ್ಲಿಸಿದೆ.
ಅಲ್ಲದೆ ಸೇವಾ ಭದ್ರತೆ ಹಾಗೂ ಮುಂದುವರಿಕೆ, ವೇತನ ತಾರತಮ್ಯವನ್ನು ಹೋಗಲಾಡಿಸಿ ಪ್ರಸ್ತುತ ಮಾಸಿಕ ರೂ. 11,000 ದಿಂದ 30,000 ರೂ.ಗಳಿಗೆ ವೇತನ ಹೆಚ್ಚಿಸಬೇಕೆಂದು, ನೇಮಕಾತಿ ಪ್ರಕ್ರಿಯೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿ ಅತಿಥಿ ಉಪನ್ಯಾಸಕರಿಗೆ ಮೊದಲ ಆದ್ಯತೆ ನೀಡುವದು ಸೇರಿದಂತೆ ಕೊಡಗಿನಲ್ಲಿ ಪ್ರತ್ಯೇಕ ಮೌಲ್ಯಮಾಪನ ಕೇಂದ್ರ ತೆರೆಯುವಂತೆ ಬೇಡಿಕೆಗಳನ್ನು ಸರಕಾರ ಮತ್ತು ವಿವಿ ಕುಲಪತಿಗಳನ್ನು ಸಂಘ ಒತ್ತಾಯಿಸಿದೆ.