ಸೋಮವಾರಪೇಟೆ, ಅ. 25: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ತಾ. 27ರಂದು ವೀರಶೈವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಮಹಾಸಭಾದ ಕಾರ್ಯದರ್ಶಿ ಕಾಂತರಾಜು ತಿಳಿಸಿದ್ದಾರೆ.

ತಾ. 27ರಂದು ಬೆಳಿಗ್ಗೆ 10.30ಕ್ಕೆ ಕೊಡ್ಲಿಪೇಟೆಯ ಕಿರಿಕೊಡ್ಲಿ ಶಾಲೆಯ ಆವರಣದಲ್ಲಿರುವ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಮಹಾಸಭಾದಿಂದ ಆಯ್ಕೆಯಾಗಿರುವ 2017-18ನೇ ಸಾಲಿನ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ ವಿಭಾಗದಲ್ಲಿ ಶೇ 90% ಕ್ಕಿಂತ ಹೆಚ್ಚಿನ ಅಂಕಗಳಿಸಿರುವ ದೀಪಿಕಾ ಮೂರ್ತಿ, ಎಸ್.ಎಸ್. ಗೌತಮ್, ಟಿ.ಎಮ್. ಪೂಜಾ, ಹೆಚ್.ಜಿ. ಸೌಂದರ್ಯ, ಎ.ವಿ. ಆಕಾಶ್, ಮಣಿಕಂಠ ಅಮರೇಶ್, ಓಂಕಾರಿಣಿ, ಎಸ್.ಎಸ್.ಎಲ್.ಸಿ.ಯಲ್ಲಿ ಜಿ. ರಿಶಾ, ಎಸ್. ಸರಿತಾ, ಸಿ. ಚಂದು, ಎಸ್.ಎಮ್. ಚರಣ್, ಕೆ.ಎನ್. ತನುಶ್ರಿ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು.

ನೆರೆ ಸಂತ್ರಸ್ತರಿಗೆÀ ನೆರವು: ಇದೇ ಸಂದರ್ಭ ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಮೇಘತ್ತಾಳು ಗ್ರಾಮದ 13 ವೀರಶೈವ ಲಿಂಗಾಯತ ಕುಟುಂಬಗಳಿಗೆ ವೀರಾಜಪೇಟೆ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ನೆರವು ನೀಡಲಾಗುವದು ಎಂದು ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್ ತಿಳಿಸಿದ್ದಾರೆ.