ಮೂರ್ನಾಡು, ಅ. 23 : ಮೂರ್ನಾಡು ಪದವಿ ಕಾಲೇಜಿನ ಮೂರು ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪದವಿ ಕಾಲೇಜಿನ ಪ್ರಥಮ ಬಿ.ಕಾಂನ ಜೆ. ಪ್ರಸಾದ್, ದ್ವಿತೀಯ ಬಿ.ಕಾಂನ ಎಂ.ಪಿ. ಅಯ್ಯಣ್ಣ ಮತ್ತು ಕೆ.ಜಿ. ಭವನ್ ನವೆಂಬರ್ 9 ರಿಂದ 15 ರವರೆಗೆ ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಅಂತರ ವಿಶ್ವವಿದ್ಯಾನಿಲಯದ ಹಾಕಿ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಕಾಲೇಜಿನ ಆಂತರಿಕ ಗುಣಮಟ್ಟ ಮೌಲ್ಯಮಾಪನ ಸಮಿತಿ ಸಂಚಾಲಕ ನಾಟೋಳಂಡ ನವೀನ್, ದೈಹಿಕ ನಿರ್ದೇಶಕ ಕಂಬೀರಂಡ ಬೋಪಣ್ಣ ಚಿತ್ರದಲ್ಲಿದ್ದಾರೆ. ತಾ. 24 ರಿಂದ 7 ರವರೆಗೆ ಮೂರ್ನಾಡು ಪದವಿ ಕಾಲೇಜಿನ ಮೈದಾನದಲ್ಲಿ ಹಾಕಿ ತರಬೇತಿ ಶಿಬಿರ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ವಿವಿಧ ಕಾಲೇಜಿನ 18 ಹಾಕಿ ಪಟುಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಕಾಲೇಜಿನ ದೈಹಿಕ ನಿರ್ದೇಶಕ ಕಂಬೀರಂಡ ಬೋಪಣ್ಣ ಹಾಕಿ ಆಟದ ತರಬೇತುದಾರರಾಗಿದ್ದು ಶಿಬಿರದಲ್ಲಿನ ಹಾಕಿ ಆಟಗಾರರಿಗೆ ತರಬೇತಿ ನೀಡಲಿದ್ದಾರೆ.