ಭಾಗಮಂಡಲ, ಅ. 23: ಭಜರಂಗದಳ ಕೊಡಗು ಜಿಲ್ಲಾ ಘಟಕದಿಂದ ಬ್ರಹ್ಮ ಗಿರಿ ಬೆಟ್ಟ ಹಾಗೂ ತಲಕಾವೇರಿಯಿಂದ ಭಾಗಮಂಡಲವರೆಗೆ ಮತ್ತು ತ್ರಿವೇಣಿ ಸಂಗಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ತಲಕಾವೇರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಭಜರಂಗದಳದ ರಾಷ್ಟೀಯ ಸಂಯೋಜಕ ಸೂರ್ಯನಾರಾಯಣ, ತಾಯಿ ಕಾವೇರಿ ಸನ್ನಿಧಿಯಲ್ಲಿ ಸ್ವಚ್ಛತೆ ಕಾರ್ಯ ನಡೆಸುತ್ತಿರುವದು ನಮ್ಮ ಸೌಭಾಗ್ಯವಾಗಿದ್ದು ಸ್ವಚ್ಛತೆ ನಮ್ಮ ಸಂಘಟನೆಯ ಒಂದು ಭಾಗವಾಗಿದೆ ಮುಂದೆ ಪ್ರತಿ ವರ್ಷವೂ ತೀರ್ಥೋದ್ಭವ ಸಮಯದಲ್ಲಿ ಈ ಸ್ವಚ್ಛತಾ ಕಾರ್ಯ ನಡೆಸಲಾಗುವದು ಎಂದರು.

ವಿಶ್ವ ಹಿಂದೂ ಪರಿಷತ್‍ನ ನರಸಿಂಹ, ರಮೇಶ, ಪ್ರದೀಪ್ ಭಜರಂಗದಳ ಜಿಲ್ಲಾ ಸಂಚಾಲಕ ಚೇತನ, ಸಹ ಸಂಚಾಲಕ ಪ್ರದೀಪ್ ಹಾಗೂ ಇತರರು ಹಾಜರಿದ್ದರು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಉಪಹಾರ ಹಾಗೂ ಭೋಜನ ವ್ಯವಸ್ಥೆ ಮಾಡಿಸಿದ್ದರು. -ಸುನಿಲ್