ಗೋಣಿಕೊಪ್ಪ ವರದಿ, ಅ. 23 : ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಸತತ ಮೂರು ಅವಧಿಯಲ್ಲಿ ಈ ಸಾಧನೆ ಮಾಡಿದಂತಾಗಿದೆ.
ಒಟ್ಟು 13 ಸ್ಥಾನಗಳಿಗೆ ನಡೆದ ಚುಣಾವಣೆಯಲ್ಲಿ 13 ಸ್ಥಾನವನ್ನು ಬಿಜೆಪಿ ಬೆಂಬಲಿತರು ಚುನಾಯಿತರಾದರು. ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಚೆಪ್ಪುಡೀರ ರಾಮಕೃಷ್ಣ, ಚೆಕ್ಕೇರ ಎಂ. ಅಚ್ಚಯ್ಯ, ಪಾಲೇಂಗಡ ಮನು ನಂಜಪ್ಪ, ಬೊಳ್ತಂಡ ಬಿ. ಚೆಂಗಪ್ಪ, ಮನೆಯಪಂಡ ಎಂ. ಮಹೇಶ್, ಎಸ್. ವಿ. ಚಂದ್ರಶೇಖರ್, ಕೆ. ಕೆ. ಪದ್ಮನಾಭ, ಹೆಚ್. ಬಿ. ಗಣೇಶ್, ಹೆಚ್. ಎಸ್. ಗೋವಿಂದ, ಹೆಚ್. ಡಿ. ಲಕ್ಷ್ಮಣ, ಜಿ.ಎಸ್. ಜಯಮ್ಮ, ಎಂ.ಎಸ್. ಮಂಜುಳ, ಎ. ಆರ್. ಸವಿತಾ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಪ್ರಭಾಕರ್ ಕಾರ್ಯನಿರ್ವಹಿಸಿದರು.