ಚೆಟ್ಟಳ್ಳಿ, ಅ. 23: ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ಕಾಡಾನೆಗಳು ದಾಟದಂತೆ ಅರಣ್ಯದ ಸುತ್ತಲು ಆನೆÉ ಕಂದಕವನ್ನು ತೆಗೆಯಲಾಗಿತ್ತು. ಆದರೆ ಅವೆಲ್ಲವನ್ನೂ ಕಾಡಾನೆಗಳು ಮುಚ್ಚಿ ನಿರಂತರವಾಗಿ ತೋಟ ಗದ್ದೆಗಳನ್ನೆ ಧಾಳಿ ಮಾಡಿ ನಾಶಪಡಿಸುತ್ತಿವೆ. ಆನೆಕಂದಕವನ್ನು ದುರಸ್ತಿಪಡಿಸಿ ಅರಣ್ಯ ಇಲಾಖೆ ಕಾಡಾನೆಗಳು ಬರದಂತೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ ಮೇರೆಗೆ ಅರಣ್ಯಧಿಕಾರಿಗಳು ಕಳೆದೆರಡು ದಿನಗಳಿಂದ ಆನೆÉ ಕಂದಕ ದುರಸ್ತಿಗೆ ಮುಂದಾಗಿದ್ದಾರೆ.
ಚೆಟ್ಟಳ್ಳಿ ಸಮೀಪದ ಮೀನುಕೊಲ್ಲಿ ಅರಣ್ಯದಲ್ಲಿನ ಕಾಡಾನೆಗಳ ದಂಡು ಪಕ್ಕದ ತೋಟ ಗದ್ದೆ ಗಳಿಗೆಲ್ಲ ನುಗ್ಗಿ ಬೆಳೆಗಳನ್ನು ನಾಶ ಪಡಿಸುತ್ತಿದ್ದು ಆನೆಗಳು ಬರದಂತೆ ಕಂದಕಗಳನ್ನು ತೆಗೆದರೂ ಕಾಡಾನೆಗಳು ದಾಟಿ ಬರುತ್ತಿದ್ದು ಅವನ್ನು ಕಾಡಿನೊಳಕ್ಕೆ ಓಡಿಸಲು ಅರಣ್ಯ ಸಿಬ್ಬಂದಿ ನಿತ್ಯವೂ ಕಾವಲು ಕಾಯುತ್ತಿದ್ದಾರೆ. ಆದರೆ ಆನೆಗಳು ದಿನಕ್ಕೊಂದು ಜಾಗದಲ್ಲಿ ದಾಟಿ ಅರಣ್ಯದೊಳಗೆ ಹಿಂದಿರುಗಲು ದಾರಿ ಇಲ್ಲದೆ ತೊಂದರೆಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಬ್ಬಿಣ ಸಲಾಖೆಯ ಮುಳ್ಳು ಬೇಲಿಯ ಗೇಟನ್ನು ಮಾಡಿ ಆನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿತ್ತು.
ಆನೆ ದಾರಿಗೆ ತೊಂದರೆಯಾಗುವ ಮುಳ್ಳು ಬೇಲಿಗಳನ್ನು ತೆರವು ಗೊಳಿಸ ಬೇಕು ಹಾಗೂ ಪಟಾಕಿ ಸಿಡಿಸಿ ಆನೆಗಳಿಗೆ ತೊಂದರೆ ನೀಡಬಾರದೆಂದು ಸುಪ್ರೀಂಕೋರ್ಟ್ ಆದೇಶದನ್ವಯ ಕಬ್ಬಿಣದ ಮುಳ್ಳು ಬೇಲಿಗಳನ್ನೆಲ್ಲ ತೆರವುಗೊಳಿಸಬೇಕಾಯಿತು. ಪರಿಣಾಮ ಅರಣ್ಯ ಇಲಾಖೆಯ ಪ್ರಯತ್ನ ಫಲಕಾರಿಯಾಗದೆÀ ಆನೆಗಳೆಲ್ಲ ತೋಟಗದ್ದೆಗಳಿಗೆ ನುಗ್ಗಿ ಬೀಡುಬಿಟ್ಟು ಫಸಲನ್ನೆಲ್ಲ ನಾಶ ಮಾಡತೊಡಗಿದವು.
ಇದೀಗ ಹಿಟಾಚಿ ಯಂತ್ರದ ಮೂಲಕ ಅರಣ್ಯದ ಸುತ್ತಲು ಹಲವು ತಿಂಗಳ ಹಿಂದೆ ತೆಗೆದ ಆನೆ ಕಂದಕಗಳ ಮೂಲಕ ದುರಸ್ತಿ ಕಾರ್ಯ ನಡೆಯುತ್ತಿದೆ. ಮೇಲಧಿüಕಾರಿಗಳೊಂದಿಗೆ ಚರ್ಚಿಸಿ ಅತೀ ಶೀಘದಲ್ಲಿ ಸೋಲಾರ್ ಬೇಲಿಗಳನ್ನು ನಿರ್ಮಿಸಿ ಕಾಡಾನೆಗಳಿಂದ ಆಗುವ ತೊಂದರೆಗೆ ಕಡಿವಾಣ ಹಾಕುವ ಬಗ್ಗೆ ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆಂದು ಸ್ಥಳೀಯರಾದ ಪೇರಿಯನ ಉದಯ ತಿಳಿಸಿದ್ದಾರೆ.
-ಕರುಣ್