ಮಡಿಕೇರಿ, ಅ. 23: ಜಿಲ್ಲೆಯಲ್ಲಿನ ಮೂರು ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಮತ ಕದನಕ್ಕೆ ದಿನಗಣನೆ ಆರಂಭವಾಗಿದೆ.ಈ ಬಾರಿಯ ಚುನಾವಣೆಯಲ್ಲಿ ಸೋಮವಾರಪೇಟೆ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ವೀರಾಜಪೇಟೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಹೊಂದಾಣಿಕೆ ಮಾಡಿ ಕೊಂಡಿದ್ದರೂ ಕೂಡ ಜೆಡಿಎಸ್ ಕೇವಲ 4 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಪಡೆದು ತೃಪ್ತಿ ಪಟ್ಟು ಕೊಂಡಿದೆ. ಕುಶಾಲನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿದೆ. ಆದರೆ ಭಾರತೀಯ ಜನತಾ ಪಾರ್ಟಿ ಮಾತ್ರ ಮೂರು ಪಟ್ಟಣ ಪಂಚಾಯಿತಿಗಳಲ್ಲಿ ಏಕಾಂಗಿ ಯಾಗಿ ಚುನಾವಣೆ ಎದುರಿಸಲು ಮುಂದಾಗಿದೆ. ಕುಶಾಲನಗರ, ಸೋಮವಾರಪೇಟೆ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗಳ ಒಟ್ಟು 45 ಸ್ಥಾನಗಳಿಗೆ ಈ ಬಾರಿ 145 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 18 ಸ್ಥಾನಗಳಿಗೆ 55 ಮಂದಿ ಸ್ಪರ್ಧಿಸಿದ್ದು, ಭಾರತೀಯ ಜನತಾ ಪಾರ್ಟಿಯಿಂದ 18 ಮಂದಿ 18 ಸ್ಥಾನಗಳಿಗೂ ಸ್ಪರ್ಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿ ಕೊಂಡಿದ್ದು, 14 ಸ್ಥಾನಗಳಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ, ಜೆಡಿಎಸ್ ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಸಿಪಿಐಎಂನಿಂದ ಒಂದು ಅಭ್ಯರ್ಥಿ ಹಾಗೂ 18 ಮಂದಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆ ಬಯಸಿ ಸ್ಪರ್ಧೆಗಿಳಿದಿದ್ದಾರೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 11 ಸ್ಥಾನಗಳಿಗೆ 26 ಅಭ್ಯರ್ಥಿಗಳು ಆಯ್ಕೆ ಬಯಸಿ ಸ್ಪರ್ಧೆಗಿಳಿದಿದ್ದಾರೆ. ಇಲ್ಲಿ ಕೂಡ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ - ಜೆಡಿಎಸ್ ಇಲ್ಲಿಯೂ ಕೂಡ ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ನಿಂದ 6, ಜೆಡಿಎಸ್ನಿಂದ 5 ಮಂದಿ ಸ್ಪರ್ಧೆ ಗಿಳಿದಿದ್ದಾರೆ. ಬಿಜೆಪಿಗೆ ಬಂಡಾಯ ವಾಗಿ 3 ಮಂದಿ, ಕಾಂಗ್ರೆಸ್ಗೆ ಬಂಡಾ ಯವಾಗಿ ಒಬ್ಬರು ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಕುಶಾಲನಗರ ಪಟ್ಟಣ ಪಂಚಾಯಿತಿಗೆ 16 ಸ್ಥಾನಗಳಿಗೆ 64 ಮಂದಿ ಕಣದಲ್ಲಿದ್ದಾರೆ. ಬಿಜೆಪಿಯಿಂದ 16 ಸ್ಥಾನಗಳಿಗೂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಜೆಡಿಎಸ್ - ಕಾಂಗ್ರೆಸ್ ಹೊಂದಾಣಿಕೆ ಮಾಡಿ ಕೊಳ್ಳದೆ ಎರಡೂ ಪಕ್ಷಗಳೂ ಕೂಡ 16 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಸ್ಡಿಪಿಐ ಬೆಂಬಲಿತ 2 ಹಾಗೂ ಪಕ್ಷೇತರರಾಗಿ 14 ಮಂದಿ ಸ್ಪರ್ಧೆಗಿಳಿದಿದ್ದಾರೆ.
ಸೋಮವಾರಪೇಟೆ ಸ್ಪರ್ಧೆ ಯಲ್ಲಿರುವ ಅಭ್ಯರ್ಥಿಗಳು: 1ನೇ ವಾರ್ಡ್ (ಬಸವೇಶ್ವರ ರಸ್ತೆ) ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್ನಿಂದ ಉದಯಶಂಕರ್, 2ನೇ ವಾರ್ಡ್ (ಬಾಣಾವಾರ ರಸ್ತೆ) ಬಿಜೆಪಿಯಿಂದ ಪಿ.ಕೆ. ಚಂದ್ರು, ಕಾಂಗ್ರೆಸ್ನಿಂದ ಮಂಜುನಾಥ್, ಪಕ್ಷೇತರರಾಗಿ ರಘುನಾಥ್ ಕಣದಲ್ಲಿ ಉಳಿದಿದ್ದಾರೆ.
3ನೇ ವಾರ್ಡ್ (ವೆಂಕಟೇಶ್ವರ ಬ್ಲಾಕ್) ಬಿಜೆಪಿಯಿಂದ ನಳಿನಿ ಗಣೇಶ್, ಜೆಡಿಎಸ್ನಿಂದ ಕೆ.ಎಂ. ಪುಷ್ಪ, ಪಕ್ಷೇತರರಾಗಿ
(ಮೊದಲ ಪುಟದಿಂದ) ನೀಲಾವತಿ, 4ನೇ ವಾರ್ಡ್ (ರೇಂಜರ್ ಬ್ಲಾಕ್-1ನೇ ಹಂತ) ಬಿಜೆಪಿಯಿಂದ ಎನ್.ಎಸ್. ಮೂರ್ತಿ, ಕಾಂಗ್ರೆಸ್ನಿಂದ ಸಂಜೀವ, 5ನೇ ವಾರ್ಡ್ (ದೇವಸ್ಥಾನ ರಸ್ತೆ) ಬಿಜೆಪಿಯಿಂದ ಬಿ.ಎಂ. ಸುರೇಶ್, ಕಾಂಗ್ರೆಸ್ನಿಂದ ಬಿ.ಸಿ. ವೆಂಕಟೇಶ್, 6ನೇ ವಾರ್ಡ್ (ವಿಶ್ವೇಶ್ವರಯ್ಯ ಬ್ಲಾಕ್) ಬಿಜೆಪಿಯಿಂದ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್ನಿಂದ ಶೀಲಾ ಡಿಸೋಜ, 7ನೇ ವಾರ್ಡ್ (ರೇಂಜರ್ ಬ್ಲಾಕ್ 2ನೇ ಹಂತ) ಬಿಜೆಪಿಯಿಂದ ದಾಕ್ಷಾಯಿಣಿ, ಜೆಡಿಎಸ್ನಿಂದ ಜೀವನ್, 8ನೇ ವಾರ್ಡ್ (ಜನತಾ ಕಾಲೋನಿ) ಬಿಜೆಪಿಯಿಂದ ಪ್ರಮೋದ್, ಜೆಡಿಎಸ್ನಿಂದ ವೆಂಕಟೇಶ್, ಪಕ್ಷೇತರರಾಗಿ ಶುಭಕರ್ ಅವರುಗಳು ಸ್ಪರ್ಧಾ ಕಣದಲ್ಲಿದ್ದಾರೆ.
9ನೇ ವಾರ್ಡ್ (ಸಿದ್ಧಲಿಂಗೇಶ್ವರ ಬ್ಲಾಕ್) ಬಿಜೆಪಿಯಿಂದ ಅನಿತಾ, ಜೆಡಿಎಸ್ನಿಂದ ನಾಗರತ್ನ, 10ನೇ ವಾರ್ಡ್ (ಮಹದೇಶ್ವರ ಬ್ಲಾಕ್) ಬಿಜೆಪಿಯಿಂದ ದಿವ್ಯಾ ಮೋಹನ್, ಜೆಡಿಎಸ್ನಿಂದ ಜಯಂತಿ ಶಿವಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಗೀತಾ ಹರೀಶ್, 11ನೇ ವಾರ್ಡ್ (ಸಿ.ಕೆ. ಸುಬ್ಬಯ್ಯ ರಸ್ತೆ) ಬಿಜೆಪಿಯಿಂದ ಬಿ.ಆರ್. ಮಹೇಶ್, ಕಾಂಗ್ರೆಸ್ನಿಂದ ಕೆ.ಎ. ಆದಂ ಚುನಾವಣೆ ಎದುರಿಸಲಿದ್ದಾರೆ.
11 ವಾರ್ಡ್ಗಳ ಪೈಕಿ ಬಿಜೆಪಿಗೆ 3 ಹಾಗೂ ಕಾಂಗ್ರೆಸ್ಗೆ 1 ವಾರ್ಡ್ನಲ್ಲಿ ಬಂಡಾಯದ ಬಿಸಿ ತಟ್ಟಿದೆ. ವಾರ್ಡ್ 2ರಲ್ಲಿ ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಮೀನಾಕುಮಾರಿ ಅವರ ಪತಿ ರಘುನಾಥ್ ಕಣದಲ್ಲಿ ಉಳಿದಿದ್ದರೆ, ವಾರ್ಡ್ 3, 8 ಮತ್ತು 10ರಲ್ಲಿ ಬಿಜೆಪಿಗೆ ಬಂಡಾಯವಾಗಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಕಾಂಗ್ರೆಸ್ ಪರ ಎಸ್ಸಿ ಎಸ್ಟಿ ಘಟಕದ ರಾಜ್ಯ ಸಮಿತಿ ಸದಸ್ಯ ಜಯೇಂದ್ರ, ಜೆಡಿಎಸ್ ಪರ ನಗರಾಧ್ಯಕ್ಷ ಜಯಾನಂದ್, ಬಿಜೆಪಿ ಪರ ಶಾಸಕ ರಂಜನ್, ಸುನಿಲ್ ಸುಬ್ರಮಣಿ, ನಗರಾಧ್ಯಕ್ಷ ಸೋಮೇಶ್ ಪ್ರಚಾರದಲ್ಲಿ ತೊಡಗಿದ್ದಾರೆ.
ಕುಶಾಲನಗರ ಅಭ್ಯರ್ಥಿಗಳು: ಕುಶಾಲನಗರ ಪಟ್ಟಣ ಪಂಚಾಯ್ತಿಯ 1ನೇ ವಾರ್ಡ್ ಹಿಂ.ವ.ಎ ಗೆ ಮೀಸಲಾಗಿದ್ದು ಶರತ್ ಕೆ.ಪಿ(ಬಿಜೆಪಿ), ಮಂಜುನಾಥ್ ಬಿ.ಎಸ್(ಜೆಡಿಎಸ್), ಕೆ.ಖಲೀಮುಲ್ಲಾ(ಕಾಂಗ್ರೆಸ್), 2ನೇ ವಾರ್ಡ್ (ಅನುಸೂಚಿತ ಜಾತಿ ಮಹಿಳೆ) ಹೆಚ್.ಎಂ.ಹೇಮಲತಾ(ಬಿಜೆಪಿ), ಎಂ.ಜೆ.ಭುವನೇಶ್ವರಿ(ಜೆಡಿಎಸ್), ಪುಟ್ಟಲಕ್ಷ್ಮಿ(ಕಾಂಗ್ರೆಸ್), ಮೀನಾ(ಪಕ್ಷೇತರ), 3ನೇ ವಾರ್ಡ್ (ಸಾಮಾನ್ಯ) ಕೆ.ಎನ್.ದೇವರಾಜ್(ಬಿಜೆಪಿ), ಕೆ.ಪ್ರಮೋದ್(ಕಾಂಗ್ರೆಸ್), ಎಂ.ಇ.ಮುಸ್ತಾಫ(ಪಕ್ಷೇತರ), ಸಂತೋಷಕುಮಾರ್(ಜೆಡಿಎಸ್) 4ನೇ ವಾರ್ಡ್ (ಸಾಮಾನ್ಯ ಮಹಿಳೆ) ಮೀಸಲಾತಿಯಾಗಿದ್ದು ವಿ.ಪುಷ್ಪ(ಬಿಜೆಪಿ), ಮೆಹರುನ್ನೀಸಾ(ಕಾಂಗ್ರೆಸ್), ಸುರಯ್ಯಭಾನು(ಜೆಡಿಎಸ್), 5ನೇ ವಾರ್ಡ್ ಅನುಸೂಚಿತ ಜಾತಿ ಜಯವರ್ಧನ ಬಿ(ಬಿಜೆಪಿ), ಹೆಚ್.ಡಿ.ಚಂದ್ರ(ಜೆಡಿಎಸ್), ಹೆಚ್.ವಿ.ಮಹದೇವ(ಕಾಂಗ್ರೆಸ್), 6ನೇ ವಾರ್ಡ್ (ಹಿಂ.ವ.ಎ) ಡಿ.ಕೆ.ತಿಮ್ಮಪ್ಪ(ಬಿಜೆಪಿ), ಡಿ.ಎಂ.ಆನಂದ(ಕಾಂಗ್ರೆಸ್), ಡಿ.ಕೆ.ಚಂದ್ರಶೇಖರ್(ಪಕ್ಷೇತರ), ಕೆ.ಎಂ.ಜಕ್ರಿಯ(ಜೆಡಿಎಸ್) ಶರವಣಕುಮಾರ್(ಪಕ್ಷೇತರ), ಶ್ರೀಧರ ಸಿ.ವೈ(ಪಕ್ಷೇತರ)7ನೇ ವಾರ್ಡ್ ಸಾಮನ್ಯ ಮೀಸಲಾತಿಯಾಗಿದ್ದು ಮಧುಸೂದನ್ ಹೆಚ್.ಎಂ.(ಬಿಜೆಪಿ), ಸುರೇಶ ಎಂ.ಬಿ(ಜೆಡಿಎಸ್), ನವೀನ್ಕುಮಾರ್ ವಿ.ಜೆ.(ಕಾಂಗ್ರೆಸ್), ಜಿ.ದಿನೇಶ್ (ಪಕ್ಷೇತರ), ಎಸ್.ಸುಬ್ರಮಣಿ (ಪಕ್ಷೇತರ), ಕೆ.ಎಸ್.ಮೂರ್ತಿ(ಪಕ್ಷೇತರ), 8ನೇ ವಾರ್ಡ್ (ಸಾಮಾನ್ಯ ಮಹಿಳೆ) ಆರ್.ಸುಷ್ಮಾ(ಕಾಂಗ್ರೆಸ್), ಯು.ರೂಪಾ(ಬಿಜೆಪಿ), ಕೆ.ಆರ್.ಚಿತ್ರಾ(ಜೆಡಿಎಸ್), ಪದ್ಮಾವತಿ(ಪಕ್ಷೇತರ), ಕುಸುಮ ಎಸ್ ರಾಜ್ (ಪಕ್ಷೇತರ), 9ನೇ ವಾರ್ಡ್ (ಸಾಮಾನ್ಯ ವರ್ಗ)ಕ್ಕೆ ಮೀಸಲಾಗಿದ್ದು ಕೆ.ಎಸ್.ಮಹೇಶ್ (ಜೆಡಿಎಸ್), ಕೆ.ಎನ್.ಸುರೇಶ್(ಪಕ್ಷೇತರ), ಟಿ.ಎನ್.ಗೌತಮ್ (ಕಾಂಗ್ರೆಸ್), ಅಮೃತ್ರಾಜ್ (ಬಿಜೆಪಿ), ನಯಾಜ್ ಅಹಮ್ಮದ್ (ಪಕ್ಷೇತರ), 10ನೇ ವಾರ್ಡ್ ಸಾಮಾನ್ಯ ಅಬ್ದುಲ್ ರಶೀದ್(ಕಾಂಗ್ರೆಸ್), ಎಂ.ಎಂ.ಚರಣ್(ಬಿಜೆಪಿ), ವಿ.ಎಸ್.ಆನಂದಕುಮಾರ್(ಜೆಡಿಎಸ್), ಆರ್.ರಾಜೀವ್(ಪಕ್ಷೇತರ), 11ನೇ ವಾರ್ಡ್ (ಹಿಂ.ವ,ಎ.ಮಹಿಳೆ) ಜಯಲಕ್ಷ್ಮಿ (ಕಾಂಗ್ರೆಸ್), ಬಿ.ಎಸ್.ವಿಶಾಲಿ (ಬಿಜೆಪಿ) ನಸೀಮ(ಜೆಡಿಎಸ್) ಫೌಸಿಯ (ಎಸ್ಡಿಪಿಐ), 12ನೇ ವಾರ್ಡ್ (ಪರಿಶಿಷ್ಟ ಪಂಗಡ) ಕೆ.ಎನ್.ಅಶೋಕ್ (ಕಾಂಗ್ರೆಸ್), ಬಿ.ಎಲ್.ಜಗದೀಶ್ (ಜೆಡಿಎಸ್), ಜಗದೀಶ್ (ಬಿಜೆಪಿ), 13ನೇ ವಾರ್ಡ್ (ಹಿಂ.ವ.ಎ ಮಹಿಳೆ) ಜಯಲಕ್ಷ್ಮಮ್ಮ (ಕಾಂಗ್ರೆಸ್), ಆಶಾರಾಣಿ (ಜೆಡಿಎಸ್), ಎಸ್.ಸಿ.ಪ್ರೇಮಕುಮಾರ್(ಬಿಜೆಪಿ), 14ನೇ ವಾರ್ಡ್ ಸಾಮಾನ್ಯ ಮಹಿಳೆ-ಡಿ.ಆರ್.ಶಾರದಾ(ಕಾಂಗ್ರೆಸ್), ಶೈಲಾ(ಬಿಜೆಪಿ), ಕೆ.ವಿ.ನೇತ್ರವತಿ (ಜೆಡಿಎಸ್), 15ನೇ ವಾರ್ಡ್ (ಹಿಂ.ವ.ಬಿ)-ಎಂ.ಕೆ.ಸುಂದರೇಶ್ (ಕಾಂಗ್ರೆಸ್), ಎನ್.ಸಿ.ಗಣೇಶ್(ಜೆಡಿಎಸ್), ಕೆ.ಜಿ.ಮನು (ಬಿಜೆಪಿ), 16ನೇ ವಾರ್ಡ್ (ಸಾಮಾನ್ಯ ಮಹಿಳೆ)ಗೆ ಮೀಸಲಾಗಿದ್ದು ಕೆ.ಆರ್.ರೇಣುಕಾ ಬಿಜೆಪಿ, ಪಾರ್ವತಿ ಕಾಂಗ್ರೆಸ್, ಮೈಮುನ (ಜೆಡಿಎಸ್), ಸಬೀನ ಬೇಗಂ (ಎಸ್ ಡಿಪಿಐ), ಶೋಭಾ (ಪಕ್ಷೇತರ), ಅಭ್ಯರ್ಥಿಗಳಾಗಿದ್ದು
ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ 3 ಪಕ್ಷಗಳ ನಾಯಕರುಗಳು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕಂಡುಬಂದಿದೆ. ಕುಶಾಲನಗರ ಬ್ಲಾಕ್ ಅಧ್ಯಕ್ಷ ವಿ.ಪಿ. ಶಶಿಧರ್ ಕಾಂಗ್ರೆಸ್ ಪರ, ಜೆಡಿಎಸ್ನಿಂದ ರಾಜ್ಯ ಯುವ ಘಟಕದ ಪ್ರಮುಖ ಪ್ರಜ್ವಲ್ ರೇವಣ್ಣ, ಬಿಜೆಪಿಯಿಂದ ಶಾಸಕ ಅಪ್ಪಚ್ಚು ರಂಜನ್ ಪ್ರಚಾರದಲ್ಲಿ ತೊಡಗಿದ್ದಾರೆ.
ವೀರಾಜಪೇಟೆಯ ಸ್ಪರ್ಧಿಗಳು
ವಾರ್ಡ್ ಸಂಖ್ಯೆ 1 ಚರ್ಚ್ರಸ್ತೆ ಹಾಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ (ಬಿಜೆಪಿ), ಬಿ.ಪಿ. ಗೀತಾ (ಪಕ್ಷೇತರ) ಫಸಿಹಾ ತಬಸಮ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 2 ದೇವಾಂಗ ಬೀದಿ ಪಿ.ಎ ರಂಜಿ ಪೂಣಚ್ಚ (ಕಾಂಗ್ರೆಸ್), ಸಿ.ಆರ್ ಅನೀಶ್ ಕುಮಾರ್ (ಪಕ್ಷೇತರ), ಪಿ. ವಿಷ್ಣು (ಬಿಜೆಪಿ), ವಾರ್ಡ್ ಸಂಖ್ಯೆ 3 ಅರಸುನಗರ ಡಿ.ಪಿ ರಾಜೇಶ್ (ಕಾಂಗ್ರೆಸ್), ಸಚಿನ್ ಕುಟ್ಟಯ್ಯ (ಬಿಜೆಪಿ), ವಾರ್ಡ್ ಸಂಖ್ಯೆ 4 ತೆಲುಗರಬೀದಿ, ಸುಶ್ಮಿತಾ ಟಿ.ಆರ್. (ಬಿಜೆಪಿ), ಹೆಚ್.ಪಿ. ಅನಿತಾ (ಕಾಂಗ್ರೆಸ್), ಹೆಚ್.ಎಂ ಪೂವಿ (ಪಕ್ಷೇತರ), ವಾರ್ಡ್ ಸಂಖ್ಯೆ 5 ಮೊಗರಗಲ್ಲಿ ದರ್ಶನ್ ಎನ್. (ಬಿಜೆಪಿ), ಅಲ್ತಾಫ್ (ಪಕ್ಷೇತರ), ಎಸ್.ಎಚ್. ಮತೀನ್ (ಜೆಡಿಎಸ್), ಏಜಾಜ್ ಅಹಮದ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 6 ಹರಿಕೇರಿ ಗಜೇಂದ್ರ ಹೆಚ್ಆರ್ (ಬಿಜೆಪಿ), ಆರ್ಮುಗಂ (ಜೆಡಿಎಸ್), ಹೆಚ್. ಆರ್. ಶಿವಪ್ಪ (ಸಿಪಿಐಎಂ), ವಾರ್ಡ್ ಸಂಖ್ಯೆ 7 ನೆಹರುನಗರ (1) ಎಂ.ಕೆ. ದೇಚಮ್ಮ (ಪಕ್ಷೇತರ), ಬಿ.ಡಿ ಸುನೀತಾ (ಬಿಜೆಪಿ), ನಸೀಮಾ ಬಾನು (ಪಕ್ಷೇತರ), ಸುರಯ್ಯ (ಪಕ್ಷೇತರ), ರೆಹನಾ ಷಾ (ಎಸ್ಡಿಪಿಐ), ವಾರ್ಡ್ ಸಂಖ್ಯೆ 8 ನೆಹರುನಗರ (2) ಜೂಡಿವಾಝ್ (ಪಕ್ಷೇತರ), ಮೇರಿರಾಣಿ (ಬಿಜೆಪಿ), ಲೈಲಾ ಜೋಸೇಫ್ (ಪಕ್ಷೇತರ), ಅಗಸ್ಟಿನ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 9 ಸುಭಾಷ್ನಗರ ಪ್ರತೀಪ್ (ಬಿಜೆಪಿ), ವಿ.ಆರ್ ರಜನಿಕಾಂತ್ (ಪಕ್ಷೇತರ), ಅಬ್ದುಲ್ ಖಾದರ್ (ಪಕ್ಷೇತರ), ರಫೀಕ್ ಕೆ.ಎ(ಕಾಂಗ್ರೆಸ್), ಅಬ್ದುಲ್ ಶಾಕೀಲ್(ಎಸ್ಡಿಪಿಐ), ವಾರ್ಡ್ ಸಂಖ್ಯೆ 10 ನಿಸರ್ಗ ಬಡಾವಣೆ ಸ್ಯೆನಾಭ ರೆಹಮಾನ್ (ಪಕ್ಷೇತರ), ಅನಿತಾ(ಬಿಜೆಪಿ), ಪಿ ಸಿಂಧು(ಕಾಂಗ್ರೆಸ್), ವಾರ್ಡ್ ಸಂಖ್ಯೆ 11 ಪಂಜುರುಪೇಟೆ ಹೆಚ್,ಪಿ ಮಹಾದೇವ್ (ಬಿಜೆಪಿ), ಕೆ.ಬಿ. ಪ್ರತಾಪ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 12 ಮೀನುಪೇಟೆ (1) ಸಲೀಂ (ಬಿಜೆಪಿ), ಎಸ್.ಎಚ್. ಮ್ಯೆನುದ್ದಿನ್ (ಜೆಡಿಎಸ್), ಅಬ್ದುಲ್ ಜಲೀಲ್ (ಪಕ್ಷೇತರ), ವಾರ್ಡ್ ಸಂಖ್ಯೆ 13 ಮೀನುಪೇಟೆ (2) ಕೆ.ಬಿ ಹರ್ಷವರ್ಧನ್ (ಬಿಜೆಪಿ), ಸಿ.ಎಂ. ದಿನೇಶ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 14 ಗೌರಿಕೆರೆ ಮಾಜಿ ಅಧ್ಯಕ್ಷ ಇ.ಸಿ ಜೀವನ್(ಬಿಜೆಪಿ),ಕೆ.ಕೆ. ಸುರೇಶ್ (ಪಕ್ಷೇತರ), ಸಿ.ಕೆ ಪ್ರಥ್ವಿನಾಥ್ (ಕಾಂಗ್ರೆಸ್), ವಾರ್ಡ್ಸಂಖ್ಯೆ 15 ಗಾಂಧಿನಗರ ಪಿ.ಎಂ ಸುನೀತಾ (ಬಿಜೆಪಿ), ಅಂತೋಣಿ Â(ಪಕ್ಷೇತರ), ಪಿ.ಎ ಮಂಜುನಾಥ್ (ಜೆಡಿಎಸ್), ವಾರ್ಡ್ ಸಂಖ್ಯೆ 16 ಚಿಕ್ಕಪೇಟೆ ಆಶಾ ಸುಬ್ಬಯ್ಯ (ಬಿಜೆಪಿ), ಅನಿತಾ ಥೇರೆಸಾ (ಕಾಂಗ್ರೆಸ್), ವಾರ್ಡ್ಸಂಖ್ಯೆ 17 ಮ್ಯೆಕ್ರೊವೇವ್ ಪೂರ್ಣಿಮಾ (ಬಿಜೆಪಿ), ಗಾಯತ್ರಿ ನರಸಿಂಹ (ಕಾಂಗ್ರೆಸ್), ಸುಮಿತ್ರ ಹೆಚ್.ಸಿ. (ಪಕ್ಷೇತರ). ವಾರ್ಡ್ಸಂಖ್ಯೆ 18 ಶಿವಕೇರಿ ಟಿ.ಇ. ಯಶೋದ (ಬಿಜೆಪಿ), ನವೀನ್ ಕೆ.ಟಿ. (ಕಾಂಗ್ರೆಸ್), ಕಣದಲ್ಲಿದ್ದಾರೆ.
ವೀರಾಜಪೇಟೆ ವಿಭಾಗದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಬಿಜೆಪಿ ಪರ, ಜೆಡಿಎಸ್ ಪರವಾಗಿ ಸಂಕೇಶ್ ಪೂವಯ್ಯ, ಕಾಂಗ್ರೆಸ್ ಪರವಾಗಿ ಶಾಸಕಿ ವೀಣಾ ಅಚ್ಚಯ್ಯ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಮತ್ತಿತರರು ಪ್ರಚಾರದಲ್ಲಿ ತೊಡಗಿದ್ದಾರೆ.
-ಚಿತ್ರ, ವರದಿ: ವಿಜಯ್, ಸಿಂಚು, ಡಿಎಂಆರ್