ಶನಿವಾರಸಂತೆ, ಅ. 21: ಶ್ರೀ ಮುದ್ದಮ್ಮ ಕ್ರಿಯೇಷನ್ ವತಿಯಿಂದ ಶನಿವಾರಸಂತೆ ಪಟ್ಟಣದ ಕಾವೇರಿ ವಿದ್ಯಾಸಂಸ್ಥೆ ಕ್ರೀಡಾ ಮೈದಾನ, ಭಾರತಿ ವಿದ್ಯಾಸಂಸ್ಥೆ ಕ್ರೀಡಾಂಗಣ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ದೇವರಗುಡ್ಡ, ಹೊನ್ನಮ್ಮನ ಕೆರೆ, ಹೊಸಳ್ಳಿಗುಡ್ಡ, ಉಚ್ಚಂಗಿ, ಮೂಡಳ್ಳಿ ಗ್ರಾಮದಲ್ಲಿ ‘ಲಡ್ಡು’ ಚಲನಚಿತ್ರದ ಚಿತ್ರೀಕರಣ ನಡೆಯಿತು.
ನಿರ್ಮಾಪಕಿ ಮೇಘನಾ, ನಿರ್ದೇಶಕ ಆರ್. ರಾಮ್, ಕಲಾವಿದರಾದ ಹರ್ಷಿತಾ, ನವೀನ್, ಬಿಂದು, ಪವಿತ್ರಾ, ವಿಶಾಲ್, ಸಮೀರ್, ಆಚಾರ್ಯ ಹಾಗೂ ಕ್ಯಾಮರಮ್ಯಾನ್ ಪುರುಷೋತ್ತಮ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ನೂತನ ಕಲಾವಿದರ ‘ಲಡ್ಡು’ ಚಲನಚಿತ್ರ ಡಿಸೆಂಬರ್ - ಜನವರಿಯಲ್ಲಿ ತೆರೆ ಕಾಣಲಿದೆ ಎಂದು ಮೇಘನಾ ತಿಳಿಸಿದರು.