ಕರಿಕೆ, ಅ. 21: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಬೆಂಬಲಿತ ಅಭ್ಯರ್ಥಿಗಳು ಹನ್ನೆರಡು ಸ್ಥಾನಗಳಲ್ಲಿ ಹನ್ನೊಂದು ಸ್ಥಾನಗಳಿಸಿ ಮತ್ತೆ ಅಧಿಕಾರವನ್ನು ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿ ಒಂದು ಸ್ಥಾನ ಪಡೆದಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.
ಹಿರಿಯ ಮುಖಂಡ ಕೋಡಿ ಪೊನ್ನಪ್ಪ ಸ್ವತಂತ್ರವಾಗಿ ತನ್ನ ಬೆಂಬಲಿಗರೊಂದಿಗೆ ಸ್ಪರ್ಧಿಸಿ ಎಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಎಂಟರಲ್ಲಿಯೂ ಪೊನ್ನಪ್ಪ ಸೇರಿದಂತೆ ಎಲ್ಲರೂ ಸೋಲನ್ನನುಭವಿಸಿದರು. ಒಟ್ಟು ಹನ್ನೆರಡು ನಿರ್ದೇಶಕ ಸ್ಥಾನಗಳ ಪೈಕಿ ಸಾಲಗಾರರ ಕ್ಷೇತ್ರದಿಂದ ಹನ್ನೊಂದು ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಐದು ಸಾಮಾನ್ಯ, ಎರಡು ಮಹಿಳೆ, ಪರಿಶಿಷ್ಟ ಜಾತಿ ಒಂದು, ಪರಿಶಿಷ್ಟ ಪಂಗಡ ಒಂದು, ಬಿಸಿಎಂಎ ಎರಡು ಸ್ಥಾನಕ್ಕೆ ಚುನಾವಣೆಯಲ್ಲಿ ಮೈತ್ರಿ ಕೂಟದ ಕಟ್ಟಕೋಡಿ ರಘುರಾಮ, ಬೇಕಲ್ ಶರಣ್ ಕುಮಾರ್, ಹೊದ್ದೆಟ್ಟಿ ಮಿತ್ರ ಕುಮಾರ್, ರೆಲ್ಸನ್, ಕುಂಞಣ್ಣ, ಅಭಿಷ್ಗೋಕುಲ್, ಗಂಗಾಧರ, ವರುಣ, ಕೋಡಿ ಭಾರ್ಗವ, ಜಯಪ್ರಕಾಶ್, ಗುಣಶೀಲ, ಮೀನಾಕ್ಷಿ ಹಾಗೂ ಬಿಜೆಪಿಯ ಹರೀಶ್ ಹೊಸಮನೆ ಗೆಲವು ಸಾಧಿಸಿದ್ದಾರೆ.
ಹೊದ್ದೂರು: ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೆರವಂಡ ಸಂಜಯ್ ಪೂಣಚ್ಚ ತಂಡ ಗೆಲವು ಸಾಧಿಸಿತು.
ಸಂಘದ ನಿರ್ದೇಶಕರ ಸ್ಥಾನಕ್ಕೆ 21 ಸದಸ್ಯರು ನಾಮಪತ್ರ ಸಲ್ಲಿಸಿದ್ದು, ಮೂವರು ನಾಮಪತ್ರ ಹಿಂಪಡೆದುಕೊಂಡರು. ಪರಿಶಿಷ್ಟ ಜಾತಿ ಮೀಸಲು ಅಭ್ಯರ್ಥಿಯಾಗಿ ಹೆಚ್. ಹರೀಶ್ ಕುಮಾರ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದ 10 ಸ್ಥಾನಕ್ಕೆ ಸಾಮಾನ್ಯ ವರ್ಗದ ಸಾಲಗಾರರ ಕ್ಷೇತ್ರದಿಂದ ನೆರವಂಡ ಸಂಜಯ್ ಪೂಣಚ್ಚ, ನೆರವಂಡ ಅನೂಪ್ ಉತ್ತಯ್ಯ, ವಾಂಚೀರ ಅಜಯ್ ಕಾವೇರಪ್ಪ, ಚೌರೀರ ಸುರೇಶ್ ಅಯ್ಯಣ್ಣ, ಚೌರೀರ ಪ್ರಕಾಶ್ ಪಳಂಗಪ್ಪ, ಕರ್ಣಯ್ಯನ ರಾಧಕೃಷ್ಣ ಗೆಲವು ಸಾಧಿಸಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಕರ್ಣಯ್ಯನ ಪ್ರಭಾಕರ್ ಆಯ್ಕೆಗೊಂಡಿದ್ದಾರೆ. ಮಹಿಳಾ ಮೀಸಲು ಅಭ್ಯರ್ಥಿಗಳಾಗಿ ಅಚ್ಚಪಂಡ ಭವಾನಿ ಲೋಕನಂದ, ಚೆಟ್ಟಿಮಾಡ ಹೇಮಾಮಾಲಿನಿ ಉತ್ತಪ್ಪ ಗೆಲುವು ಸಾಧಿಸಿದ್ದಾರೆ. ಬಿಸಿಎಂ(ಎ) ಅಭ್ಯರ್ಥಿಗಳಾಗಿ ಐರೀರ ಜಾಬು ಪೂಣಚ್ಚ, ಮೇಕಂಡ ಎಸ್. ಸುಬ್ರಮಣಿ ಗೆಲವು ಸಾಧಿಸಿದ್ದಾರೆ.
*ಸಿದ್ದಾಪುರ: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಬಿಜೆಪಿಯ ಮಹೇಶಚಂದ್ರ ನೇತೃತ್ವದ ತಂಡ ಬಹುಮತದಿಂದ ಅಧಿಕಾರಕ್ಕೆ ಏರಿದೆ.
ಬಿಜೆಪಿ ಬೆಂಬಲಿತರಾದ ಮಹೇಶಚಂದ್ರ ಮುರುಳಿ ಮಾದಯ್ಯ ಪಳಂಗನ ದಾದಪ್ಪ, ಕೆಮ್ಮೊರನ ಲೋಕನಾಥ, ರಾಜಪ್ಪ, ಬಿ.ಎಸ್. ಧನಫಾಲ, ಎಸ್.ಟಿ. ಕೃಷ್ಣ, ಆರ್.ಕೆ. ಚಂದ್ರ ಹಾಗೂ ಜೆಡಿಎಸ್ ಬೆಂಬಲಿತರಾದ ಎ.ವಿ. ಶಾಂತಕುಮಾರ್,ಅನಿತಾ ಮಿಲ್ಲುಕಾಶಿ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಪರ್ಲಕೋಟಿ ಅಶೋಕನಂದ, ಎನ್. ಕಮಲಮ್ಮ ಜಯಗಳಿಸಿದ್ದಾರೆ.
ಚೇರಂಬಾಣೆ: ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ತಾ. 15 ರಂದು ಚುನಾವಣೆ ನಡೆಯಿತು. ಈ ಸಂಘದಲ್ಲಿ 13 ಮಂದಿ ನಿರ್ದೇಶಕರನ್ನು ಒಳಗೊಂಡಿರುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ 2 ಸ್ಥಾನ, ಬಿ.ಸಿ.ಎಂ. ಕ್ಷೇತ್ರದಿಂದ 2 ಸ್ಥಾನ, ಎಸ್.ಸಿ.-ಎಸ್.ಟಿ. ಕ್ಷೇತ್ರದಿಂದ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ 6 ಸ್ಥಾನಗಳಿಗೆ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ ಚುನಾವಣೆಯಲ್ಲಿ ಬಾಚರಣಿಯಂಡ ಸುಮನ್, ಅಯ್ಯಂಡ ಸತೀಶ್ ಬೆಳ್ಳಿಯಪ್ಪ, ಕೇಕಡ ಸುಗುಣ, ಬಾಚರಣಿಯಂಡ ದಿನೇಶ್ ಗಣಪತಿ, ಕೂರನ ಕಿಶೋರ್ ಕುಮಾರ್, ಪೊಡನೋಳನ ಶ್ರೀನಿವಾಸ್ ಜಯಗಳಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ 1 ಸ್ಥಾನಕ್ಕೆ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ತೊತ್ತಿಯನ ಚೇತಕ್ ಜಯಗಳಿಸಿದ್ದಾರೆ.
ನಾಪೋಕ್ಲು: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಅಪ್ಪಚ್ಚು ತಂಡ ಗೆಲವು ಸಾಧಿಸಿತು.
ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ 11 ಅಭ್ಯರ್ಥಿಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಓರ್ವ ಅಭ್ಯರ್ಥಿ ಗೆಲವು ಸಾಧಿಸಿದರು. ಸಾಲಗಾರರ ಕ್ಷೇತ್ರದಿಂದ 425 ಮತದಾರರ ಪೈಕಿ 396 ಮತದಾರರು ಮತ ಚಲಾಯಿಸಿದರು. ಸಾಲಗಾರರಲ್ಲದ ಕ್ಷೇತ್ರದಿಂದ 9 ಮಂದಿ ಮತ ಚಲಾಯಿಸಿದರು.
ಸಾಲಗಾರರ ಕ್ಷೇತ್ರದಿಂದ ಸಂಘದ ಮಾಜಿ ಅಧ್ಯಕ್ಷ ಚಿಯಕಪೂವಂಡ ಅಪ್ಪಚ್ಚು (272), ಮಾಳೆಯಂಡ ವಿಜು (229), ಮಣವಟ್ಟಿರ ಎಂ. ಚಂಗಪ್ಪ (205), ಮಣವಟ್ಟೀರ ಹರೀಶ್ ಕುಶಾಲಪ್ಪ (201), ಬದಂಜೆಟ್ಟೀರ ಎ. ತಿಮ್ಮಯ್ಯ (190), ತೆಕ್ಕಡ ಪೊನ್ನಪ್ಪ (173), ಪಾಲೇರ ಎಂ. ಬೆಳ್ಳಿಯಪ್ಪ (199), ಚೀಯಕಪೂವಂಡ ರೀನಾ ವಿಠಲ (231), ಕೈಬುಲಿರ ಯಶೋಧ ಚಂಗಪ್ಪ (230), ಚೋಕೀರ ಯು. ಭೀಮಯ್ಯ (240), ಐರೀರ ಟಿಂಶ (ವೇಣು)(199) ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಜಿ. ಸುರೇಶ್ ಆಯ್ಕೆಯಾದರು.
ಚುನಾವಣೆಯಲ್ಲಿ 11 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಕಾಂಗ್ರೆಸ್ ಬೆಂಬಲಿತ ಓರ್ವ ಅಭ್ಯರ್ಥಿ ಮಾತ್ರ ಗೆಲವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಪಿಡಿಓ ವೀಣಾಕುಮಾರಿ ಕಾರ್ಯನಿರ್ವಹಿಸಿದರು.
ಮಾದಾಪುರ: ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಈ ಹಿಂದೆ ಕೃಷಿ ಪತ್ತಿನ ಸಹಕಾರ ಸಂಘವು ಬಿಜೆಪಿ ಆಡಳಿತದಲ್ಲಿದ್ದು, ಸಾಲಗಾರರ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಬಿ.ಎ. ಮೊಣ್ಣಪ್ಪ, ಮಾಜಿ ಉಪಾಧ್ಯಕ್ಷ ತಿಲಕ್ ಕುಮಾರ್, ಮಾಜಿ ನಿರ್ದೇಶಕರುಗಳಾದ ಪಿ.ಪಿ. ಕಾಳಪ್ಪ, ಎಂ.ಸಿ. ಬೆಳ್ಯಪ್ಪ, ಎನ್.ಎಸ್. ದೂಮಪ್ಪ, ಪಕ್ಷೇತರರಾಗಿ ಕೆ.ಎ. ಲತೀಫ್, ಸಿ.ಎ. ತಮ್ಮಯ್ಯ, ಮಹಿಳಾ ವಿಭಾಗದಿಂದ ನಳಿನಿ ತಮ್ಮಯ್ಯ, ಬಿಜೆಪಿಯ ಮಾಜಿ ನಿರ್ದೇಶಕಿ ಎಂ.ಪಿ. ಪೊನ್ನವ್ವ, ಪರಿಶಿಷ್ಟ ಜಾತಿಗೆ ಅವಿರೋಧವಾಗಿ ಬಿಜೆಪಿಯಿಂದ ಜೆ.ಆರ್. ಕೃಷ್ಣಪ್ಪ, ಪರಿಶಿಷ್ಟ ಪಂಗಡದಿಂದ ರೇಣುಕಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ವೈ. ಕೇಶವ, ಅವರುಗಳು ಆಯ್ಕೆಯಾಗಿದ್ದಾರೆ.
ಕಳೆದ ಬಾರಿಯೂ ಬಿಜೆಪಿ ಆಡಳಿತ ನಡೆಸಿ ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈ ಬಾರಿ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸಿ.ಎ. ತಮ್ಮಯ್ಯ ಹಾಗೂ ಮಹಿಳಾ ಕ್ಷೇತ್ರಕ್ಕೆ ಪತ್ನಿ ನಳಿನಿ ತಮ್ಮಯ್ಯ ಮುನ್ನಡೆಯೊಂದಿಗೆ ಪತಿ-ಪತ್ನಿ ಗೆಲವು ಸಾಧಿಸಿರುವದು ವಿಶೇಷವಾಗಿದೆ.