ಕುಶಾಲನಗರ, ಅ. 21: ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಪುಷ್ಪಾಂಜಲಿ ಲೇಡಿಸ್ ಕ್ಲಬ್ ವತಿಯಿಂದ ಪ.ಪಂ. ಮಾಜಿ ಸದಸ್ಯೆ ರಶ್ಮಿ ಅಮೃತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ರಥಬೀದಿ ವಾರ್ಡ್‍ನಿಂದ ಚುನಾಯಿತರಾಗಿದ್ದ ರಶ್ಮಿ ಮತದಾರರ ಬೇಡಿಕೆಗಳಿಗೆ ಉತ್ತಮವಾಗಿ ಸ್ಪಂದಿಸಿ ಎಲ್ಲರ ಮನಗೆಲ್ಲುವ ರೀತಿ ಸೇವೆ ನೀಡಿರುವ ಬಗ್ಗೆ ಕ್ಲಬ್‍ನ ವಿನುತಾ ಪೂವಯ್ಯ ಮತ್ತು ರೋಹಿಣಿ ಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಶ್ಮಿ ಅಮೃತ್, ಮತದಾರರ ನಿರೀಕ್ಷೆಗಳಿಗೆ ಅನುಗುಣವಾಗಿ ತಾನು ಕೆಲಸ ನಿರ್ವಹಿಸಿದ ತೃಪ್ತಿ ಇರುವದಾಗಿ ತಿಳಿಸಿದರು.

ಈ ಸಂದರ್ಭ ಕ್ಲಬ್ ಸದಸ್ಯರಾದ ಸುನಂದ, ರಶ್ಮಿ ನಾರಾಯಣ, ಮಾಲತಿ ಶಶಾಂಕ್, ಶಮೀಮ್, ಸನಾ, ವಿಜಯಕಣ್ಣನ್, ಗಾಯತ್ರಿ, ಯಶೋಧ ಮಂದಣ್ಣ, ಈಶ್ವರಿ ಮತ್ತಿತರರು ಇದ್ದರು.