ವೀರಾಜಪೇಟೆ, ಅ. 21: ವೀರಾಜಪೇಟೆ ಪಟ್ಟಣ ಪಂಚಾಯಿತಿ ಹದಿನೆಂಟು ಸ್ಥಾನಗಳಿಗೆ 55ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದರೆ, ಕಾಂಗ್ರೆಸ್, ಜನತಾ ದಳ ಮೈತ್ರಿ ಕೂಟವು ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದ್ದು, ಸಿಪಿಐ (ಎಂ) ಪಕ್ಷ ಒಂದು ಸ್ಥಾನಕ್ಕೆ, ಉಳಿದಂತೆ 18 ಮಂದಿ ಪಕ್ಷೇತರರು ಎಲ್ಲ ವಾರ್ಡ್‍ಗಳಲ್ಲಿಯೂ ಸ್ಪರ್ಧಿಸಿರುವದು ಕಂಡು ಬಂದಿದೆ.
ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದೆ ವಂಚಿತರಾದವರು ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಇವರುಗಳು ಪಕ್ಷಕ್ಕೆ ರಾಜೀನಾಮೆ ನೀಡಿರುವದರಿಂದ ಬಂಡಾಯವಾಗಿ ಸ್ಪರ್ಧೆಯ ಪರಿಗಣನೆಗೆ ಬರುವದಿಲ್ಲವೆನ್ನಲಾಗಿದೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಮರು ಆಯ್ಕೆಗಾಗಿ ವಾರ್ಡ್ ನಂ ಒಂದರಿಂದ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಮರು ಆಯ್ಕೆಗಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಾ ಕಣದಲ್ಲಿದ್ದಾರೆ. ವಾರ್ಡ್ ನಂ ಮೂರರಲ್ಲಿ ಮಾಜಿ ಅಧ್ಯಕ್ಷ ಸಚಿನ್ ವೀರಾಜಪೇಟೆ, ಅ. 21: ವೀರಾಜಪೇಟೆ ಪಟ್ಟಣ ಪಂಚಾಯಿತಿ ಹದಿನೆಂಟು ಸ್ಥಾನಗಳಿಗೆ 55ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದರೆ, ಕಾಂಗ್ರೆಸ್, ಜನತಾ ದಳ ಮೈತ್ರಿ ಕೂಟವು ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದ್ದು, ಸಿಪಿಐ (ಎಂ) ಪಕ್ಷ ಒಂದು ಸ್ಥಾನಕ್ಕೆ, ಉಳಿದಂತೆ 18 ಮಂದಿ ಪಕ್ಷೇತರರು ಎಲ್ಲ ವಾರ್ಡ್‍ಗಳಲ್ಲಿಯೂ ಸ್ಪರ್ಧಿಸಿರುವದು ಕಂಡು ಬಂದಿದೆ.
ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದೆ ವಂಚಿತರಾದವರು ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಇವರುಗಳು ಪಕ್ಷಕ್ಕೆ ರಾಜೀನಾಮೆ ನೀಡಿರುವದರಿಂದ ಬಂಡಾಯವಾಗಿ ಸ್ಪರ್ಧೆಯ ಪರಿಗಣನೆಗೆ ಬರುವದಿಲ್ಲವೆನ್ನಲಾಗಿದೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಮರು ಆಯ್ಕೆಗಾಗಿ ವಾರ್ಡ್ ನಂ ಒಂದರಿಂದ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಮರು ಆಯ್ಕೆಗಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಾ ಕಣದಲ್ಲಿದ್ದಾರೆ. ವಾರ್ಡ್ ನಂ ಮೂರರಲ್ಲಿ ಮಾಜಿ ಅಧ್ಯಕ್ಷ ಸಚಿನ್ ಕಾರ್ಯಕರ್ತರುಗಳು ಮನೆ ಮನೆಗೆ ತೆರಳಿ ಮತಯಾಚಿಸುತ್ತಿರುವದು ಕಂಡು ಬಂದಿದೆ.
ಭಾರತೀಯ ಜನತಾ ಪಾರ್ಟಿಯ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಪಟ್ಟಣದ ಬಿಜೆಪಿಯ ಪ್ರಮುಖ ಹಾಗೂ ಹಿರಿಯ ಕಾರ್ಯಕರ್ತರ ಮನೆ ಮನೆಗೆ ತೆರಳಿ ಪಟ್ಟಣ ಪಂಚಾಯಿತಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿರುವದಾಗಿ ತಿಳಿದು ಬಂದಿದೆ.
ಈ ಹಿಂದಿನ ಸಾಲಿನಲ್ಲಿ ಉಪಾಧ್ಯಕ್ಷೆಯಾಗಿದ್ದ ತಸ್ನೀಂ ಅಕ್ತರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಾಗಿ ಒಂದನೇ ವಾರ್ಡ್‍ನಿಂದ ಸ್ಪರ್ಧಿಸಿದ್ದು ಕಾಂಗ್ರೆಸ್ ಪಕ್ಷದ ಫಸಿಹಾ ತಬಸಮ್‍ಗೆ ನೇರ ಪೈಪೋಟಿ ನೀಡಿದ್ದರೆ, ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿರುವ ಬಿ.ಜಿ. ಗೀತಾ ಇಬ್ಬರಿಗೂ ಸವಾಲಾಗಿ ಇವರ ಮಧ್ಯೆ ನುಗ್ಗಿದ್ದಾರೆ.
ಎರಡನೇ ವಾರ್ಡ್‍ನಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕಾಗಿ ಅಸಮಧಾನಗೊಂಡ ಬಿಜೆಪಿ ಕಾರ್ಯಕರ್ತರು ಪರೋಕ್ಷವಾಗಿ ಬೆಂಬಲಿಸಿದರೆ ಇನ್ನೂ ಕೆಲವರು ಕಾಂಗ್ರೆಸ್ ಪರವಾಗಿ ನೇರ ಪ್ರಚಾರಕ್ಕೆ ಇಳಿದು ಬಿಜೆಪಿ ಕಾರ್ಯಕರ್ತರಿಗೆ ಕುತೂಹಲ ಮೂಡಿಸಿದ್ದಾರೆ.
ಮೂರನೇ ವಾರ್ಡ್‍ನಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತ ಟಿ.ಪಿ.ಕೃಷ್ಣ ಅವರು ಟಿಕೆಟ್‍ನಿಂದ ವಂಚಿತಗೊಂಡಿದ್ದರಿಂದ ತನ್ನ ಸಾಕಷ್ಟು ಬೆಂಬಲಿಗರೊಂದಿಗೆ ನೇರವಾಗಿ ಕಾಂಗ್ರೆಸ್ ಪಕ್ಷದ ಡಿ.ಪಿ. ರಾಜೇಶ್‍ಗೆ ಪ್ರಚಾರ ಆರಂಭಿಸಿದ್ದಾರೆ. ಮಾಜಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರೊಂದಿಗೆ ನೇರ ಹಣಾಹಣಿಗೆ ಇಳಿದಿದ್ದಾರೆ.
ವಾರ್ಡ್ ನಂ 5ರಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳ ಅಭ್ಯರ್ಥಿಗಳು ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದರಿಂದ ಇಬ್ಬರಿಗೂ ಟಿಕೆಟ್ ನೀಡಲಾಗಿದ್ದು ಜೆ.ಡಿಎಸ್. ಪಕ್ಷದಿಂದ ಮಾಜಿ ಸದಸ್ಯ ಎಸ್.ಎಚ್. ಮತೀನ್, ಕಾಂಗ್ರೆಸ್ ಪಕ್ಷದಿಂದ ಏಜಾಜ್ ಅಹಮ್ಮದ್ ಸ್ಪರ್ಧಿಸಿದರೆ ಈ ಇಬ್ಬರ ಮಧ್ಯೆ ಬಿಜೆಪಿಯ ದರ್ಶನ್ ಪ್ರಯತ್ನದಲ್ಲಿದ್ದಾರೆ.
ಏಳನೇ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಅವರಿಗೆ ಬಿಜೆಪಿಯ ಬಿ.ಡಿ.ಸುನೀತಾ ನೇರ ಸ್ಪರ್ಧೆ ನೀಡಿದ್ದರೂ ಈ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್. ದೇಚಮ್ಮ ಅವರಿಗೆ ಬೆಂಬಲ ನೀಡಿದ್ದು ಪ್ರಚಾರದಲ್ಲಿ ತೊಡಗಿವೆ.
ಎಂಟನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದಿಂದ ಅಗಸ್ಟಿನ್ ಸ್ಪರ್ಧಿಸಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಎಂಬಂತೆ ಭಾರತೀಯ ಜನತಾ ಪಾರ್ಟಿಯಿಂದ ಎರಡು ಅವಧಿಗಳ ಹಿಂದೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಆಗಿದ್ದ ಮೇರಿ ರಾಣಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಇತರ ಪಕ್ಷೇತರ ಅಭ್ಯರ್ಥಿಗಳು ಹೊಸ ಮುಖಗಳಾಗಿದ್ದರೂ ಪಕ್ಷೇತರರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆಯುವ ಪ್ರಯತ್ನದಲ್ಲಿದ್ದಾರೆ.
ಒಂಭತ್ತನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ಮಹಮ್ಮದ್ ರಾಫಿ ಹಾಗೂ ಬಿಜೆಪಿಯ ಪ್ರತೀಪ್ ನಡುವೆ ನೇರ ಸ್ಪರ್ಧೆಗೆ ಅವಕಾಶವಾಗಿದೆ.
ಹತ್ತನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ಪಿ.ಸಿಂಧೂ ಹಾಗೂ ಬಿಜೆಪಿ ಪಕ್ಷದ ಅನಿತಾ ನಡುವೆ ಸ್ಪರ್ಧೆ ಏರ್ಪಟ್ಟಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿರುವ ಸೈನಭ ರೆಹಮಾನ್ ಎರಡು ರಾಜಕೀಯ ಪಕ್ಷಗಳಿಗೂ ಸಮ ಬಲವಾದ ಸ್ಪರ್ಧೆ ನೀಡುತ್ತಿದ್ದಾರೆ.
ಹನ್ನೊಂದನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಕೆ.ಬಿ. ಪ್ರತಾಪ್ ಹಾಗೂ ಬಿಜೆಪಿಯ ಎಚ್.ಪಿ. ಮಹಾದೇವ್ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಹನ್ನೆರಡನೇ ವಾರ್ಡ್‍ನಲ್ಲಿ ಮಾಜಿ ಸದಸ್ಯ ಎಸ್.ಎಚ್. ಮೈನುದ್ದೀನ್ ಮರು ಆಯ್ಕೆ ಬಯಸಿದ್ದು, ಇವರ ವಿರುದ್ಧ ಬಿಜೆಪಿ ಪಕ್ಷದ ಸಲೀಂ ಸ್ಪರ್ಧೆ ನೀಡಿದ್ದಾರೆ. ಹದಿಮೂರನೇ ವಾರ್ಡ್ ಬಿಜೆಪಿಯ ಕೆ.ಬಿ. ಹರ್ಷವರ್ಧನ್, ಕಾಂಗ್ರೆಸ್ ಪಕ್ಷದಿಂದ ದಿನೇಶ್ ಸ್ಪರ್ಧೆ ನೀಡಿದ್ದು ಇಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಹದಿನಾಲ್ಕನೇ ವಾರ್ಡ್‍ನಿಂದ ಬಿಜೆಪಿಯಿಂದ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಇ.ಸಿ. ಜೀವನ್ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದ ಸಿ.ಕೆ. ಪ್ರಥ್ವಿನಾಥ್ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದಾರೆ. ಹದಿನೈದನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಪಿ.ಎಂ. ಸುನೀತಾಳ ವಿರುದ್ಧ ಜೆ.ಡಿ.ಎಸ್. ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಸ್ಪರ್ಧಿಸಿದ್ದಾರೆ. ವಾರ್ಡ್ ಹದಿನಾರರಲ್ಲಿ ಬಿ.ಜೆ.ಪಿ.ಯ ಆಶಾ ಸುಬ್ಬಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಅನಿತಾ ಥೆರೇಸಾ ನಡುವೆ ನೇರ ಸ್ಪರ್ಧೆ ಉಂಟಾಗಿದೆ. ಹದಿನೇಳನೇ ವಾರ್ಡ್‍ನಲ್ಲಿಯೂ ಕಾಂಗ್ರೆಸ್ ಪಕ್ಷದ ಗಾಯಿತ್ರಿ ನರಸಿಂಹ ಬಿಜೆಪಿಯ ಪೂರ್ಣಿಮಾ ಅವರಿಗೆ ನೇರ ಸ್ಪರ್ಧೆ ನೀಡಿದ್ದಾರೆ. ಹದಿನೆಂಟನೇ ವಾರ್ಡ್ ನಲ್ಲಿಯೂ ಕಾಂಗ್ರೆಸ್ ಪಕ್ಷದ ಕೆ.ಟಿ. ನವೀನ್ ಬಿಜೆಪಿ ಪಕ್ಷದಿಂದ ಟಿ.ಇ. ಯಶೋಧ ಸ್ಪರ್ಧಿಸಿದ್ದಾರೆ.
ಈ ಬಾರಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮೂರು ಮಂದಿ ಮಾಜಿ ಅಧ್ಯಕ್ಷರುಗಳು ಸ್ಪರ್ಧಿಸಿರುವದು ವಿಶೇಷವೆನಿಸಿದೆ.