*ಸಿದ್ದಾಪುರ, ಅ. 22: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 4ನೇ ಬಾರಿ ಗೆಲವು ಸಾಧಿಸಿದ್ದ, ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ತಂಡ ಮತ್ತೊಮ್ಮ ಕೃಷಿ ಪತ್ತಿನ ಆಡಳಿತದ ಚುಕ್ಕಾಣಿ ಹಿಡಿದಿದೆ.

ಚೆÀಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ನರೇಂದ್ರ ಮೋದಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ಮಣಿ ಉತ್ತಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಇದೇ ಸಂದರ್ಭ ಉಪಾಧ್ಯಕ್ಷರಾಗಿ ಮರದಾಳು ಉಲ್ಲಾಸ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಹೆಚ್.ಎಸ್. ತಿಮ್ಮಪಯ್ಯ, ಬಟ್ಟೀರ ಅಪ್ಪಣ್ಣ, ಪುತ್ತೇರೀರ ಸೀತಮ್ಮ, ಕೊಂಗೆಟೀರ ವಾಣಿ ಕಾಳಪ್ಪ, ಧನಂಜಯ, ಶಾಂತಪ್ಪ, ಹೆಚ್.ಜೆ. ಸೀತಮ್ಮ, ಕಣಂಜಾಲು ಪೂವಯ್ಯ, ಪೇರಿಯನ ಪೂಣಚ್ಚ ಆಯ್ಕೆಗೊಂಡರು. ನಾಮ ನಿರ್ದೇಶಕರಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಹರಿಣಿ ನೇಮಕಗೊಂಡರು. ಸಹಕಾರ ಸಂಘದ ಕಾರ್ಯನಿರ್ವಹಣಾಧಿ ಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಂಜುಳ ಕಾರ್ಯನಿರ್ವಹಿಸಿದರು.

- ಸುಧಿ