ಮಡಿಕೇರಿ, ಅ. 21: ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಒಳ್ಳೆಯ ಇಳುವರಿ ಪಡೆಯಬಹುದು ಎಂದು ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಅವರು ಹೇಳಿದ್ದಾರೆ. ಸೋಮವಾಪೇಟೆ ತಾಲೂಕು ಭುವನಮಂದಾರ ರೈತ ಉತ್ಪಾದಕರ ಕಂಪೆನಿಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕೃಷಿಗೆ ಪೂರಕ ವಾತಾವರಣವಿರುವ ಪ್ರಪಂಚದ ಹತ್ತು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಆದರೂ ದೇಶದಲ್ಲಿ ಉತ್ಪಾದನೆಯಾಗುವ ಮಡಿಕೇರಿ, ಅ. 21: ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಒಳ್ಳೆಯ ಇಳುವರಿ ಪಡೆಯಬಹುದು ಎಂದು ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಅವರು ಹೇಳಿದ್ದಾರೆ. ಸೋಮವಾಪೇಟೆ ತಾಲೂಕು ಭುವನಮಂದಾರ ರೈತ ಉತ್ಪಾದಕರ ಕಂಪೆನಿಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕೃಷಿಗೆ ಪೂರಕ ವಾತಾವರಣವಿರುವ ಪ್ರಪಂಚದ ಹತ್ತು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಆದರೂ ದೇಶದಲ್ಲಿ ಉತ್ಪಾದನೆಯಾಗುವ 185 ಹಾಗೂ ಜಿಲ್ಲೆಯಲ್ಲಿ ಮೂರು ಕಂಪೆನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮುಂಡಂಡ ಸಿ. ನಾಣಯ್ಯ ಮಾಹಿತಿ ನೀಡಿದರು. ರೈತ ಉತ್ಪಾದಕರ ಕಂಪೆನಿಗಳಲ್ಲಿ ರೈತರು ಷೇರುದಾರರಾಗಿ ರುತ್ತಾರೆ. ಇಂತಹ ಕಂಪೆನಿಗಳಲ್ಲಿ ಕೃಷಿಕರು ತೊಡಗಿಸಿಕೊಳ್ಳಬೇಕು. ತಮ್ಮ ಕೃಷಿಗೆ ಬೇಕಾದ ಕೃಷಿ ಸಲಕರಣೆ, ಶಿಲೀಂಧ್ರ ನಾಶಕಗಳನ್ನು ಖರೀದಿಸ ಬೇಕು. ಆಡಳಿತ ಮಂಡಳಿಯವರು ಗುಣಮಟ್ಟವನ್ನು ಖಾತರಿ ಪಡಿಸಿ ಕೊಂಡು ನಂತರ ವಿತರಣೆ ಮಾಡಬೇಕು ಎಂದು ಸಲಹೆ ನೀಡಿದರು. ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷ ಎಸ್.ಎಂ.ಡಿ’ಸಿಲ್ವ, ಪದಾಧಿಕಾರಿ ಗಳಾದ ಖಾಲಿಸ್ತಾ ಡಿಸಿಲ್ವ, ಪಿ.ಡಿ. ಮೋಹನ್ ದಾಸ್, ಕೆ.ಪಿ. ರಮೇಶ್, ಎನ್.ಎ. ಚಂದ್ರಶೇಖರ್, ಕೆ.ಸಿ. ಸೂರ್ಯ ಕುಮಾರ್, ಪಿ.ಜೆ. ವಿನ್ಸೆಂಟ್, ಎಂ.ಡಿ. ಲೋಕೇಶ್, ಕೆ.ಜಿ. ಗುಂಡಪ್ಪ, ಕವಿತಾ ವಿರೂಪಾಕ್ಷ, ಚಂದ್ರಿಕಾ ಕುಮಾರ್, ಕಂಪೆನಿಯ ಸಿಇಒ ಕೆ.ಟಿ. ದಯಾನಂದ್ ಮತ್ತಿತರರು ಇದ್ದರು.