ಸೋಮವಾರಪೇಟೆ, ಅ. 21: ಹಳ್ಳದಿಣ್ಣೆ-ಕುಸುಬೂರು ಗ್ರಾಮದ ಶ್ರೀ ಮುನೇಶ್ವರ ಸನ್ನಿಧಿಯಲ್ಲಿ ವಿಜಯದಶಮಿ ಅಂಗವಾಗಿ ದುರ್ಗಾ ಹೋಮ ನಡೆಯಿತು. ಬೆಳಿಗ್ಗೆ ಗ್ರಾಮದ ಮುನೇಶ್ವರ, ಸೊಪ್ಪಿನ ಬಸವಣ್ಣ, ಚೌಡೇಶ್ವರಿ ಹಾಗೂ ಗುಳಿಗಪ್ಪ ದೇವರುಗಳಿಗೆ ವಿಶೇಷ ಪೂಜೆಗಳು ನೆರವೇರಿದವು. ಅರ್ಚಕರುಗಳಾದ ಶಾಂತಳ್ಳಿ ಗಣೇಶ್ ಭಟ್, ರಮೇಶ್ ಭಟ್ ಹಾಗೂ ಕಿರಣ್ ಶಾಸ್ತ್ರಿ ಪೌರೋಹಿತ್ಯದಲ್ಲಿ ದುರ್ಗಾ ಹೋಮ ನಡೆಯಿತು.