ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ನಂತರ ಅತ್ಯಂತ ಹೆಚ್ಚು ವ್ಯವಹಾರವಾಗುತ್ತಿರುವ ಸರಕು ಕಾಫಿ. 2017-18 ರಲ್ಲಿ 316,000 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿದೆ. ಇದರಲ್ಲಿ ರೋಬಸ್ಟಾ 221,000 ಮೆಟ್ರಿಕ್ ಟನ್ (ಶೇ. 70) ಮತ್ತು ಅರೇಬಿಕಾ 95,000 ಮೆಟ್ರಿಕ್ ಟನ್ (ಶೇ. 30) ಜಗತ್ತಿನಲ್ಲಿ ಕಾಫಿ ಬೆಳೆಯಲ್ಲಿ 7ನೇ ಸ್ಥಾನದಲ್ಲಿರುವ ಭಾರತದಲ್ಲಿ ಜಗತ್ತಿನ ಉತ್ಪಾದನೆಯ ಶೇ. 3.3 ರಷ್ಟು ಕಾಫಿ ಬೆಳೆಯುತ್ತಿದ್ದು ಜಾಗತಿಕ ರಫ್ತಿನ ಶೇ. 5.4 ಭಾರತದ ಭಾಗವಾಗಿದೆ. ಬೆಳೆಯುವ ಕಾಫಿಯ ಶೇ. 80 ರಷ್ಟನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದು, 2017-18ರಲ್ಲಿ ದೇಶದಿಂದ 395,014 ಮೆಟ್ರಿಕ್ ಟನ್ ಕಾಫಿ ರಫ್ತಾಗಿದ್ದು , ರೂ. 6210.23 ಕೋಟಿ ಆದಾಯ ದೇಶಕ್ಕೆ ದೊರೆತಿದೆ.
ನಮ್ಮ ದೇಶದಿಂದ 45 ರಾಷ್ಟ್ರಗಳಿಗೆ ಕಾಫಿ ರಫ್ತಾಗುತ್ತಿದ್ದು ಇಟಲಿ ಮೊದಲ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕಾಫಿಯನ್ನು ಮುಖ್ಯವಾಗಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬೆಳೆಸಲಾಗುತ್ತಿದ್ದು, ಈ ಪ್ರದೇಶಗಳನ್ನು ಪರಂಪರಾಗತವಾಗಿ ಕಾಫಿ ಬೆಳೆಯುವ ಪ್ರದೇಶಗಳೆಂದು ಕರೆಯುತ್ತಾರೆ. ಆಂಧ್ರ ಪ್ರದೇಶ, ಅಸ್ಸಾಂಗಳನ್ನು ಕಾಫಿ ಬೆಳೆಯುವ ಪರಂಪರಾಗತವಲ್ಲದ ಪ್ರದೇಶವೆನ್ನುತ್ತಾರೆ. ನಮ್ಮ ದೇಶದ ಈಶಾನ್ಯ ದಿಕ್ಕಿನಲ್ಲಿರುವ ಒರಿಸ್ಸಾ, ಮಿಸೋರಂ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ, ಮಣಿಪುರ ಮೊದಲಾದೆಡೆಯೂ ಕಾಫಿಯನ್ನು ಬೆಳೆಸುತ್ತಿದ್ದಾರೆ.
ನಮ್ಮ ದೇಶದಲ್ಲಿ ಕಾಫಿ ಶೇ. 74 ರಷ್ಟನ್ನು ಕರ್ನಾಟಕದಲ್ಲಿ ಬೆಳೆಸಲಾಗುತ್ತಿದೆ. ಕೇರಳದ ಭಾಗ ಶೇ. 7 ತಮಿಳುನಾಡು ಶೇ. 1.8 ಬೆಳೆಸುತ್ತಿದೆ. ಕರ್ನಾಟಕದಲ್ಲಿ ಕೊಡಗು ಮೊದಲ ಸ್ಥಾನದಲ್ಲಿದ್ದು ಅನಂತರ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದ ಭಾಗಗಳಲ್ಲಿ ಬೆಳೆಯಲಾಗುತ್ತಿದೆ.ಕಾಫಿಯಲ್ಲಿ ಅರೇಬಿಕ ಮತ್ತು ರೋಬಸ್ಟಾ ಎಂಬ ಎರಡು ತಳಿಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಒಟ್ಟಾಗಿ ರೋಬಸ್ಟಾವನ್ನು ಹೆಚ್ಚಾಗಿ ಬೆಳೆಯುತ್ತಿದ್ದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಒಟ್ಟಾಗಿ ಅರೇಬಿಕಾವನ್ನು ಹೆಚ್ಚಾಗಿ ಬೆಳೆಯುತ್ತಿವೆ.
ನಮ್ಮ ದೇಶದಲ್ಲಿ 3 ಲಕ್ಷದ 72 ಸಾವಿರ ಹಿಡುವಳಿದಾರರಿದ್ದಾರೆ. ಇವರಲ್ಲಿ 3 ಲಕ್ಷದ 50 ಸಾವಿರ ಹಿಡುವಳಿದಾರರು ಸಣ್ಣ ಹಿಡುವಳಿದಾರರು. 6 ಲಕ್ಷ ಜನರು ಈ ಬೆಳೆಯನ್ನವಲಂಬಿಸಿ ಜೀವಿಸುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ. ಈ ಬೆಳೆಗಾರರಲ್ಲಿ ಶೇ. 98.5 gಷ್ಟು ಸಣ್ಣ ಬೆಳೆಗಾರರಿದ್ದಾರೆ. ಅವರಲ್ಲೂ ಶೇ. 87 ರಷ್ಟು 2 1/2 ಹೆಕ್ಟೆರ್ ಮತ್ತು ಅದಕ್ಕಿಂತ ಕಡಿಮೆ ಹಿಡುವಳಿ ಇರುವವರಾಗಿದ್ದಾರೆ.
ಸಣ್ಣ ಬೆಳೆಗಾರರ ಸಂಖ್ಯೆ
ಚಿಕ್ಕಮಗಳೂರು - 20,513, ಹಾಸನ - 13,751, ಕೊಡಗು - 42,696. ಒಟ್ಟು ಕರ್ನಾಟಕದಲ್ಲಿ- 76,960. ಕೇರಳ - 77,370 ಪರಂಪರಾಗತವಲ್ಲದ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ನಂತರ ಅತ್ಯಂತ ಹೆಚ್ಚು ವ್ಯವಹಾರವಾಗುತ್ತಿರುವ ಸರಕು ಕಾಫಿ. 2017-18 ರಲ್ಲಿ 316,000 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿದೆ. ಇದರಲ್ಲಿ ರೋಬಸ್ಟಾ 221,000 ಮೆಟ್ರಿಕ್ ಟನ್ (ಶೇ. 70) ಮತ್ತು ಅರೇಬಿಕಾ 95,000 ಮೆಟ್ರಿಕ್ ಟನ್ (ಶೇ. 30) ಜಗತ್ತಿನಲ್ಲಿ ಕಾಫಿ ಬೆಳೆಯಲ್ಲಿ 7ನೇ ಸ್ಥಾನದಲ್ಲಿರುವ ಭಾರತದಲ್ಲಿ ಜಗತ್ತಿನ ಉತ್ಪಾದನೆಯ ಶೇ. 3.3 ರಷ್ಟು ಕಾಫಿ ಬೆಳೆಯುತ್ತಿದ್ದು ಜಾಗತಿಕ ರಫ್ತಿನ ಶೇ. 5.4 ಭಾರತದ ಭಾಗವಾಗಿದೆ. ಬೆಳೆಯುವ ಕಾಫಿಯ ಶೇ. 80 ರಷ್ಟನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದು, 2017-18ರಲ್ಲಿ ದೇಶದಿಂದ 395,014 ಮೆಟ್ರಿಕ್ ಟನ್ ಕಾಫಿ ರಫ್ತಾಗಿದ್ದು , ರೂ. 6210.23 ಕೋಟಿ ಆದಾಯ ದೇಶಕ್ಕೆ ದೊರೆತಿದೆ.
ನಮ್ಮ ದೇಶದಿಂದ 45 ರಾಷ್ಟ್ರಗಳಿಗೆ ಕಾಫಿ ರಫ್ತಾಗುತ್ತಿದ್ದು ಇಟಲಿ ಮೊದಲ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕಾಫಿಯನ್ನು ಮುಖ್ಯವಾಗಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬೆಳೆಸಲಾಗುತ್ತಿದ್ದು, ಈ ಪ್ರದೇಶಗಳನ್ನು ಪರಂಪರಾಗತವಾಗಿ ಕಾಫಿ ಬೆಳೆಯುವ ಪ್ರದೇಶಗಳೆಂದು ಕರೆಯುತ್ತಾರೆ. ಆಂಧ್ರ ಪ್ರದೇಶ, ಅಸ್ಸಾಂಗಳನ್ನು ಕಾಫಿ ಬೆಳೆಯುವ ಪರಂಪರಾಗತವಲ್ಲದ ಪ್ರದೇಶವೆನ್ನುತ್ತಾರೆ. ನಮ್ಮ ದೇಶದ ಈಶಾನ್ಯ ದಿಕ್ಕಿನಲ್ಲಿರುವ ಒರಿಸ್ಸಾ, ಮಿಸೋರಂ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ, ಮಣಿಪುರ ಮೊದಲಾದೆಡೆಯೂ ಕಾಫಿಯನ್ನು ಬೆಳೆಸುತ್ತಿದ್ದಾರೆ.
ನಮ್ಮ ದೇಶದಲ್ಲಿ ಕಾಫಿ ಶೇ. 74 ರಷ್ಟನ್ನು ಕರ್ನಾಟಕದಲ್ಲಿ ಬೆಳೆಸಲಾಗುತ್ತಿದೆ. ಕೇರಳದ ಭಾಗ ಶೇ. 7 ತಮಿಳುನಾಡು ಶೇ. 1.8 ಬೆಳೆಸುತ್ತಿದೆ. ಕರ್ನಾಟಕದಲ್ಲಿ ಕೊಡಗು ಮೊದಲ ಸ್ಥಾನದಲ್ಲಿದ್ದು ಅನಂತರ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದ ಭಾಗಗಳಲ್ಲಿ ಬೆಳೆಯಲಾಗುತ್ತಿದೆ.ಕಾಫಿಯಲ್ಲಿ ಅರೇಬಿಕ ಮತ್ತು ರೋಬಸ್ಟಾ ಎಂಬ ಎರಡು ತಳಿಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಒಟ್ಟಾಗಿ ರೋಬಸ್ಟಾವನ್ನು ಹೆಚ್ಚಾಗಿ ಬೆಳೆಯುತ್ತಿದ್ದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಒಟ್ಟಾಗಿ ಅರೇಬಿಕಾವನ್ನು ಹೆಚ್ಚಾಗಿ ಬೆಳೆಯುತ್ತಿವೆ.
ನಮ್ಮ ದೇಶದಲ್ಲಿ 3 ಲಕ್ಷದ 72 ಸಾವಿರ ಹಿಡುವಳಿದಾರರಿದ್ದಾರೆ. ಇವರಲ್ಲಿ 3 ಲಕ್ಷದ 50 ಸಾವಿರ ಹಿಡುವಳಿದಾರರು ಸಣ್ಣ ಹಿಡುವಳಿದಾರರು. 6 ಲಕ್ಷ ಜನರು ಈ ಬೆಳೆಯನ್ನವಲಂಬಿಸಿ ಜೀವಿಸುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ. ಈ ಬೆಳೆಗಾರರಲ್ಲಿ ಶೇ. 98.5 gಷ್ಟು ಸಣ್ಣ ಬೆಳೆಗಾರರಿದ್ದಾರೆ. ಅವರಲ್ಲೂ ಶೇ. 87 ರಷ್ಟು 2 1/2 ಹೆಕ್ಟೆರ್ ಮತ್ತು ಅದಕ್ಕಿಂತ ಕಡಿಮೆ ಹಿಡುವಳಿ ಇರುವವರಾಗಿದ್ದಾರೆ.
ಸಣ್ಣ ಬೆಳೆಗಾರರ ಸಂಖ್ಯೆ
ಚಿಕ್ಕಮಗಳೂರು - 20,513, ಹಾಸನ - 13,751, ಕೊಡಗು - 42,696. ಒಟ್ಟು ಕರ್ನಾಟಕದಲ್ಲಿ- 76,960. ಕೇರಳ - 77,370 ಪರಂಪರಾಗತವಲ್ಲದ ಪ್ರದೇಶಗಳು - 1,71,936. ತಮಿಳುನಾಡು - 17,656, ಈಶಾನ್ಯ ಪ್ರದೇಶದ ರಾಜ್ಯಗಳು - 10,477.
ಇದು ಈ ರಂಗದಲ್ಲಿ ಬಹುಸಂಖ್ಯಾಕರಾಗಿರುವ ಸಣ್ಣ ಬೆಳೆಗಾರರ ಮೇಲಾಗುತ್ತಿರುವ ಶೋಷಣೆಯ ಅಗಾಧತೆಯನ್ನು ಎತ್ತಿತೋರುತ್ತಿದೆ. ಇದಲ್ಲದೆ ಬೆಳೆಗಾರರು ಆನೆ ಮತ್ತಿತರ ವನ್ಯ ಜಂತುಗಳಿಂದ ನಿರಂತರ ಹಾವಳಿ, ತೆರಿಗೆ ಹೆಚ್ಚಳ ಎಂದು ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶೇ. 98 ರಷ್ಟು ಬರುವ ಮತ್ತು ಕಾಫಿ ರಂಗದ ಆಧಾರಸ್ತಂಭವಾಗಿರುವ ಸಣ್ಣ ಬೆಳೆಗಾರರ ಮೇಲಿನ ಶೋಷಣೆ ಮತ್ತು ಅವರು ಅನುಭವಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಕಾರಣದಿಂದ ಇಂದು ಕಾಫಿ ಬೆಳೆಯಲ್ಲಿ ಭಾರತ ಜಾಗತಿಕ ರಂಗದಲ್ಲಿ ನಾಲ್ಕನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಇಳಿದಿದೆ.
ಸಣ್ಣ ಬೆಳೆಗಾರರು ಎದುರಿಸುತ್ತಿರುವ ಹಲವಾರು ಗಂಭೀರ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಂಡು, ರೂಪಿಸಿ ಅವುಗಳ ಪರಿಹಾರಕ್ಕಾಗಿ ನಿರಂತರ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಈ ದೇಶದಲ್ಲಿ ಅತ್ಯಂತ ದೊಡ್ಡ ಮತ್ತು ಹೋರಾಟ ಪರಂಪರೆ ಇರುವ ಅಖಿಲ ಭಾರತ ಸಂಘಟನೆಯಾದ ಆಲ್ ಇಂಡಿಯಾ ಕಿಸಾನ್ ಸಭಾದ ಆಶ್ರಯದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಹಯೋಗದೊಂದಿಗೆ ತಾ. 22 ರಂದು (ಇಂದು) ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಎಸ್.ಸಿ.ಎಂ. ಹೌಸ್‍ನಲ್ಲಿ ಒಂದು ದಿನದ ಸಮಾವೇಶ ಸಂಘಟಿಸಲಾಗುತ್ತಿದ್ದು, ಆ ಕಾರ್ಯಕ್ರಮವನ್ನು ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷ ಹನನ್ ಮುಲ್ಲಾರವರು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.
ಈ ಸಮಾವೇಶದಲ್ಲಿ ಕಾಫಿ ಬೆಳೆಯುವ ಪ್ರದೇಶಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತಿತರ ಪ್ರದೇಶಗಳಿಂದ ಬೆಳೆಗಾರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ “ಕಾಫಿ ಮೌಲ್ಯ ವರ್ಧನೆ, ಸಂಸ್ಕರಣೆ, ಮಾರುಕಟ್ಟೆ” ಎಂಬ ವಿಷಯದ ಮೇಲೆ ವಿಶೇಷ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಕಾಫಿ ಮಂಡಳಿಯ ಡಾ. ಬಸವರಾಜ್ ಮತ್ತು ಎ.ಐ.ಕೆ.ಎಸ್.ನ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟದ ಮುಖಂಡರುಗಳು ಮಾತನಾಡಲಿದ್ದಾರೆ.
- ದುರ್ಗಾ ಪ್ರಸಾದ್, ಸಂಚಾಲಕ, ಕರ್ನಾಟಕ ಪ್ರಾಂತ ರೈತ ಸಂಘ, (ಎ.ಐ.ಕೆ.ಎಸ್.)