ಮಡಿಕೇರಿ, ಅ. 20: ವೀರಾಜಪೇಟೆ ತಾಲೂಕು ಗುತ್ತಿಗೆದಾರರ ಸಂಘದ ಆಡಳಿತ ಮಂಡಳಿ ಚುನಾವ ಣೆಯಲ್ಲಿ ಚೊಟ್ಟೇಕ್ಮಡ ರಾಜೀವ್ ಬೋಪಯ್ಯ ಅಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕಳ್ಳಿಚಂಡ ಜಿ. ಬೋಪಣ್ಣ (ಮಧು), ಖಜಾಂಚಿಯಾಗಿ ಕೆ.ಆರ್. ವಿಶ್ವನಾಥ್, ನಿರ್ದೇಶಕರುಗಳಾಗಿ ಅಚ್ಚಿಯಂಡ ವೇಣುಗೋಪಾಲ್, ಕೋಟೇರ ಕಿಶನ್ ಉತ್ತಪ್ಪ, ಅಪ್ಪಂಡೆರಂಡ ದಿನು, ಚೋವಂಡ ಸುಬ್ಬಯ್ಯ, ನಾಮೆರ ನವೀನ್, ಆಲೆಮಡ ಸೋಮಣ್ಣ, ಸಿ.ಸಿ. ವಿನ್ಸೆಂಟ್, ಎಂ. ರಮೇಶ್ ಹಾಗೂ ಗೌರವ ಅಧ್ಯಕ್ಷರಾಗಿ ಚಿಮ್ಮಣಮಡ ವಾಸು ಉತ್ತಪ್ಪ ಪುನರ್ ಆಯ್ಕೆ ಗೊಂಡಿದ್ದಾರೆ.