ಚೆಟ್ಟಳ್ಳಿ, ಅ 20: ಸುಂಟಿಕೊಪ್ಪ ಸಮೀಪದ ಗರಗಂದೂರು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇವರ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ” ಎಂಬ ವಿಷಯದ ಕುರಿತು ಯೂನಿಟ್ ಸಮ್ಮೇಳನ ನಡೆಯಿತು.
ಜಮಾಅತ್ ಅಧ್ಯಕ್ಷ ಹನೀಫ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಪ್ರಭಾಷಣವನ್ನು ಮಶ್ಹೂದ್ ಸಖಾಫಿ, ಹಾಗೂ ಶಾಫಿ ಸಹದಿ ಮಾಡಿದರು. ವೇದಿಕೆಯಲ್ಲಿ ಹನೀಫ್ ಸಖಾಫಿ, ಮುಸ್ತಫಾ ಸಖಾಫಿ, ಮುಸ್ತಫಾ ಸಖಾಫಿ, ಹಾಗೂ ಮದರಸ ಅಧ್ಯಾಪಕರು ಇದ್ದರು.
ಕೊಟ್ಟಮುಡಿ: ಹೊದವಾಡ ಕೊಟ್ಟಮುಡಿ ಆಜಾದ್ ನಗರ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಶಾಖೆ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ” ಎಂಬ ವಿಷಯದ ಕುರಿತು ತಾ. 22 ಮತ್ತು 23 ರಂದು ಯೂನಿಟ್ ಸಮ್ಮೇಳನ ನಡೆಯಲಿದೆ.
ತಾ. 22 ರಂದು ರಾತ್ರಿ 9 ಗಂಟೆಗೆ ರಾತೀಬ್ ಕಾರ್ಯಕ್ರಮ ನಡೆಯಲಿದ್ದು, ಇದರ ನೇತೃತ್ವವನ್ನು ಮುಹ್ಸಿನ್ ತಂಙಲ್ ವಹಿಸಲಿದ್ದಾರೆ. ತಾ. 23 ರಂದು ಮತ ಪ್ರವಚನವನ್ನು ರಾಶಿದ್ ಬುಖಾರಿ ಮಾಡಲಿದ್ದಾರೆ ಎಂದು ಆಝಾದ್ ನಗರ ಎಸ್.ಎಸ್.ಎಫ್. ಪದಾಧಿಕಾರಿಗಳು ತಿಳಿಸಿದ್ದಾರೆ.