ಸಿದ್ದಾಪುರ, ಅ. 20: ಪಾಲಿಬೆಟ್ಟ ಆಟೋ ಚಾಲಕ ಹಾಗೂ ಮಾಲಿಕರ ಸಂಘದ ವತಿಯಿಂದ ಪಾಲಿಬೆಟ್ಟದಲ್ಲಿ ಆಯುಧಪೂಜೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಆಟೋಚಾಲಕರ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ವಿಜು ಸುಬ್ರಮಣಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ದೂಜಾ ವೇಗಸ್, ದೀಪಕ್ ಗಣಪತಿ, ಕುಟ್ಟಂಡ ರಂಜಿತ್, ಚುಮ್ಮಿರೈ, ಮೈಕಲ್, ವಿಜೇಶ್,ರಾಜಪ್ಪ ,ನಾರಾಯಣ ಇನ್ನಿತರರು ಹಾಜರಿದ್ದರು.