ಗೋಣಿಕೊಪ್ಪ ವರದಿ, ಅ. 20: ಸಾಂಪ್ರದಾಯಿಕವಾಗಿ ಶೋಭಾಯಾತ್ರೆ ಯಲ್ಲಿ ಪಾಲ್ಗೊಂಡ ದಶಮಂಟಪಗಳ ಮೆರವಣಿಗೆ ಮೂಲಕ ಸರಳ ದಸರಾ ಹೆಸರಿನಲ್ಲಿ ಆಚರಿಸಿದ 40 ನೇ ವರ್ಷದ ಗೋಣಿಕೊಪ್ಪ ದಸರಾ ತೆರೆ ಕಂಡಿತು. ಧಾರ್ಮಿಕ ವಿಧಿ-ವಿಧಾನದಂತೆ ಚಾಮುಂಡೇಶ್ವರಿ ದೇವಿ ವಿಸರ್ಜನೆಯೊಂದಿಗೆ ದೇವಿಯನ್ನು ಪ್ರಾರ್ಥಿಸಿಕೊಳ್ಳಲಾಯಿತು.

ಸಂಪ್ರದಾಯಿಕ ಆಚರಣೆಯಂತೆ ಕಾವೇರಿ ದಸರಾ ಸಮಿತಿ ವತಿಯಿಂದ ಸ್ಥಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದರೊಂದಿಗೆ ಭಗವತಿ ದಸರ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ಕಾವೇರಿ ದಸರಾ ಸಮಿತಿ ವತಿಯಿಂದ ಸ್ಥಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದರೊಂದಿಗೆ ಭಗವತಿ ದಸರ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ಅನಾವರಣಗೊಳಿಸಿತು. ನವಚೇತನಾ ಸಮಿತಿ ದೇವಿಯ ಕೈಯಿಂದ ನೀರು ಚಿಮ್ಮುವ ಕಲಾಕೃತಿ ಮೂಲಕ ಗಮನ ಸೆಳೆಯಿತು. ಯುವ ದಸರಾ ಸಮಿತಿಯು ಕಲಾಕೃತಿ ಮೂಲಕ ಕಲಾಭಿಮಾನಿಗಳನ್ನು ಸೆಳೆಯಿತು. ಸಂಹಾರದ ಚಿತ್ರಗಳು ಆರ್ಭಟಿಸಿದವು. ಎತ್ತರದ ಮಂಟಪದೊಂದಿಗೆ ಸಾಗಿತು.

ಸರ್ವರ ದಸರಾ ಸಮಿತಿ ವಿವಿಧ ಕಲಾಕೃತಿಯೊಂದಿಗೆ ಸಾಗಿ, ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತು. ತೇರು ಅನಾವರಣ ಸಂದರ್ಭ ಪ್ರಾಕೃತಿಕ ವಿಕೋಪದ ಸಂತ್ರಸ್ತರ 4 ಮಕ್ಕಳಿಂದ ಹಾಗೂ ಸಂತ್ರಸ್ತ ತಿಮ್ಮಯ್ಯ ಅವರಿಂದ ಉದ್ಘಾಟಿಸಿ ವಿಶೇಷತೆ ಮೆರೆದರು. ಈ ಸಂದÀರ್ಭ ಸರ್ವರ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು, ಉದ್ಯಮಿ ಅಜಿತ್ ಅಯ್ಯಪ್ಪ, ಅನೀಶ್ ಮಾದಪ್ಪ, ಸ್ಥಳೀಯ ಸಮ್ಮದ್ ಉಪಸ್ಥಿತರಿದ್ದರು.

ಸ್ನೇಹಿತರ ಬಳಗ ಹೆಚ್ಚು ಕಲಾಕೃತಿಗಳನ್ನು ಅನಾವರಣಗೊಳಿಸಿ, ಎತ್ತರದ ಮಂಟಪದೊಂದಿಗೆ ಗಮನ ಸೆಳೆಯಿತು. ಕಾಡ್ಲಯ್ಯಪ್ಪ, ನಮ್ಮ ದಸರಾ ಸಮಿತಿ ಹಾಗೂ ಶಾರದಾಂಭ ಸಮಿತಿ ತೇರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಬಹುಮಾನವಿಲ್ಲದೆ ಕೇವಲ ಪ್ರದರ್ಶನಕ್ಕಾಗಿ ಮಂಟಪಗಳು ಪಾಲ್ಗೊಂಡವು.

ಮಾರುಕಟ್ಟೆಯಿಂದ ಬಂದ ನವಚೇತನಾ, ಯುವ ದಸರಾ ಹಾಗೂ ಸರ್ವರ ದಸರ ಸಮಿತಿ ತೇರುಗಳೊಂದಿಗೆ ಹೆಚ್ಚು ಕಲಾಭಿಮಾನಿಗಳು ಕುಣಿದುಕೊಂಡು ಸಾಗಿದರು.

ಕಳೆದೆರಡು ವರ್ಷಗಳಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದ ಜನರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂತು. ಬಸ್ ನಿಲ್ದಾಣ ಸಮೀಪ ವೇದಿಕೆಯಲ್ಲಿ ನಡೆಯುತ್ತಿದ್ದ ರಸಮಂಜರಿ ವ್ಯಾಪ್ತಿ ಬಿಟ್ಟಿರೆ ಎಲ್ಲಿಯೂ ಹೆಚ್ಚಾಗಿ ಕಲಾಭಿಮಾನಿಗಳು ಕಾಣ ಸಿಗಲಿಲ್ಲ. ಸರಳ ದಸರಾದಲ್ಲಿ ಜನರು ಕೂಡ ವಿರಳ ಎಂಬಂತಾಯಿತು.

ಪರಿಣಾಮ ವ್ಯಾಪಾರಿಗಳಿಗೂ ಕೂಡ ನಿರೀಕ್ಷಿಸಿದ ಮಟ್ಟದಲ್ಲಿ ವ್ಯಾಪಾರ ನಡೆಯಲಿಲ್ಲ. ರಸ್ತೆ ಬದಿಗಳಲ್ಲಿ, ಕಾಫಿ, ಟೀ, ಖಾರ ತಿಂಡಿ, ಐಸ್‍ಕ್ರೀಂ, ಆಟಿಕೆ ವಸ್ತುಗಳ ವ್ಯಾಪಾರಿಗಳು ಕೂಡ ನಿರಾಸೆ ಅನುಭವಿಸಿದರು.

ಜನರ ಸಂಖ್ಯೆ ಕಡಿಮೆ ಇದ್ದ ಕಾರಣ ವಾಹನ ದಟ್ಟಣೆ ಕೂಡ ಉಂಟಾಗಲಿಲ್ಲ. ಪೊಲೀಸ್ ವ್ಯವಸ್ತೆ ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿತು. ತೇರುಗಳು ಮುಖ್ಯರಸ್ತೆಗೆ ಸೇರಿದ ನಂತರ ವಾಹನ ಸಾಗಲು ಅನುವು ಮಾಡಿಕೊಡಲಾಯಿತು. ಪಟ್ಟಣದ ಸಮೀಪ ರಸ್ತೆ ಬದಿಗಳಲ್ಲಿ ಕೂಡ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ರಸಮಂಜರಿಯಲ್ಲಿ ಕುಣಿದ ಅಭಿಮಾನಿಗಳು

ಬಸ್ ನಿಲ್ದಾಣದಲ್ಲಿನ ವೇದಿಕೆಯಲ್ಲಿ ಸರಿಗಮಪ ಸೆಲೆಬ್ರೆಟಿ ತಂಡದ ನೃತ್ಯ ಹಾಗೂ ಹಾಡಿನ ಮೂಲಕದ ಸಂಗೀತ ನೆರೆದಿದ್ದವನ್ನು ಕುಣಿಯುವಂತೆ ಮಾಡಿದರು. ಸರಿಗಮಪ ಖ್ಯಾತಿಯ ಚೆನ್ನಪ್ಪ ವಿಶೇಷ ಆಕರ್ಷಣೆಯಾದರು.

ಹಿನ್ನೆಲೆ ಗಾಯಕ ಸಂತೋಷ್ ವೆಂಕಿ, ಶರ್ಮ ಇವರುಗಳು ಪಾಲ್ಗೊಂಡಿದ್ದರು. ಹಾಡುಗಳಿಗೆ ನೃತ್ಯ ಪ್ರದರ್ಶನ ಗೊಂಡವು. ಹಾಡಿಗೆ ಹುಚ್ಚೆದ್ದು ಕುಣಿದರು. ಮುಂಜಾನೆವರೆಗೂ ರಸಮಂಜರಿ ನಡೆಯಿತು.

ಸುದ್ದಿಪುತ್ರ/ದಿನೇಶ್