ಮಡಿಕೇರಿ, ಅ. 20: ಕೊಡಗು ಧ್ವನಿ ವಾರಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮ ತಾ. 21ರಂದು (ಇಂದು) ಸಂಜೆ 7 ಗಂಟೆಗೆ ಗೋಣಿಕೊಪ್ಪಲುವಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆರಂಭಗೊಳ್ಳಲಿದೆ. ಇದರ ಅಂಗವಾಗಿ ವಿಶೇಷ ಸಂಚಿಕೆಯನ್ನು ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವದು. ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಪತ್ರಿಕಾ ಸಂಪಾದಕ ಜಗದೀಶ್ ಹೆಚ್.ಕೆ. ತಿಳಿಸಿದ್ದಾರೆ.