ಮಡಿಕೇರಿ, ಅ. 20: ಭಾರತೀಯ ವಿದ್ಯಾಭವನ ಬೆಂಗಳೂರು ಹಾಗೂ ಕೊಡಗು ಕೇಂದ್ರಗಳು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮಹಿಳಾ ವಸತಿ ನಿಲಯಕ್ಕೆ ನೀಡಿದ ಸ್ಯಾನಿಟರಿ ನ್ಯಾಪ್‍ಕಿನ್ ಡಿಸ್ಪೆನ್ಸರ್ ಮತ್ತು ಡಿಸ್ಟ್ರಾಯರ್‍ಗಳನ್ನು ಹಿರಿಯ ವೈದ್ಯೆ ಡಾ. ಜಯಲಕ್ಷ್ಮಿ ಪಾಟ್ಕರ್ ಉದ್ಘಾಟಿಸಿದರು.

ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ, ಬಿ.ವಿ.ಬಿ.ಯ ಖಜಾಂಚಿ ಡಾ. ಮನೋಹರ್ ಪಾಟ್ಕರ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ವಹಿಸಿದ್ದರು.

ಬಿ.ವಿ.ಬಿ. ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಹಾಗೂ ಮನು ದೇವಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮಹಿಳಾ ವಸತಿ ನಿಲಯಪಾಲಕಿ ಡಾ. ನಯನ ಕಶ್ಯಪ್ ನಿರೂಪಿಸಿದರು.