ಮಡಿಕೇರಿ, ಅ. 20: ಅರ್ಜೆಂಟೈನಾದಲ್ಲಿ ನಡೆದ ಯೂತ್ ಒಲಂಪಿಕ್ಸ್‍ನಲ್ಲಿ ಪಾಲ್ಗೊಂಡಿದ್ದ (ಫೈವ್ ‘ಎ’ ಸೈಡ್) ಹಾಕಿ ಪಂದ್ಯಾವಳಿಯಲ್ಲಿ ಭಾರತ ಹಾಕಿ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿದೆ. ಭಾರತ ತಂಡದ ಮುಖ್ಯ ತರಬೇತು ದಾರರಾಗಿ ಕೊಡಗಿನವರಾದ ಹಾಕಿ ತರಬೇತುದಾರ ಬೊಳ್ಳೆಪಂಡ ಜೆ. ಕಾರ್ಯಪ್ಪ ಕಾರ್ಯ ನಿರ್ವಹಿಸಿದ್ದರು. ಹಲವಾರು ಪಂದ್ಯಾವಳಿಗಳಲ್ಲಿ ಭಾರತ ಹಾಕಿ ತಂಡದ ಕೋಚ್ ಆಗಿದ್ದ ಕಾರ್ಯಪ್ಪ ಅವರ ಗರಡಿಯಲ್ಲಿ ಭಾರತ ತಂಡ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿತ್ತು. ತಾ. 18ರಂದು ನಡೆದ ಫೈನಲ್‍ನಲ್ಲಿ ಭಾರತ ಮಲೇಷಿಯಾ ಎದುರು ಪರಾಭವಗೊಂಡರೂ ರನ್ನರ್ಸ್ ಪ್ರಶಸ್ತಿಯ ಸಾಧನೆ ಮಾಡಿದೆ.