ಮಡಿಕೇರಿ, ಅ. 20: ಕೊಡಗಿನಲ್ಲಿ ಸಂಭವಿಸಿದ ದುರಂತದ ನೋವುಗಳನ್ನು ಮರೆತು ಬದುಕಿನಲ್ಲಿ ಮಡಿಕೇರಿ, ಅ. 20: ಕೊಡಗಿನಲ್ಲಿ ಸಂಭವಿಸಿದ ದುರಂತದ ನೋವುಗಳನ್ನು ಮರೆತು ಬದುಕಿನಲ್ಲಿ ಮಡಿಕೇರಿ ದಸರಾ ಸಾಂಷ್ಕøತಿಕ ಕಾರ್ಯಕ್ರಮವನ್ನು, ಗಾಂಧಿಮೈದಾನ ರಂಗಮಂದಿರದಲ್ಲಿ ನಿನ್ನೆ ಉದ್ಘಾಟಿಸಿ ಮಾತನಾಡಿದ ಅವರು, ವಿಜೃಂಭಣೆ ಯಿಂದ ನಡೆಸಬೇಕಿದ್ದರೂ, ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವಂತಾಯಿತು, ಆದರೂ ಸಮಯದ ಅಭಾವದಲ್ಲೂ ದಸರಾ ಸಮಿತಿಯವರು ವ್ಯವಸ್ಥೆಯನ್ನು ಕಲ್ಪಿಸಿರುವದು ಶ್ಲಾಘನೀಯವೆಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ಮಾತನಾಡಿ ಕೊಡಗಿನ ಜನರ ಉತ್ಸಾಹ ಮೆಚ್ಚುವಂತಾಗಿದ್ದು, ಸಮಸ್ಯೆ ಗಳನ್ನು ಮೆಟ್ಟಿ (ಮೊದಲ ಪುಟದಿಂದ) ನಿಲ್ಲುವ ಸಾಮಥ್ರ್ಯ ಇಲ್ಲಿನ ಜನರ ರಕ್ತದಲ್ಲೇ ಇದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ದರ್ಶನ್ ಅವರು ದಸರೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಮನುಷ್ಯನೊಳಗಿನ ರಾವಣನ ಸಂಹಾರವಾಗಬೇಕಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅವರು ಈ ಬಾರಿಯ ದಸರಾವನ್ನು ಮೆಲುಕು ಹಾಕಿ ಮನಸ್ಸು ಹಾಗೂ ಕನಸುಗಳು ಇಲ್ಲದ ದಸರಾ ಈ ಬಾರಿಯದು ಎಂದು ವಿಶ್ಲೇಷಿಸಿದರು. ಮಳೆ ದುರಂತದಲ್ಲಿ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರಗಳು ಶೀಘ್ರವಾಗಿ ದೊರಕುವಂತಾಗಬೇಕು ಎಂದರು.
ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಅವರು ಮುಂದಿನ ವರ್ಷಗಳಲ್ಲಿ ಪ್ರಾಕೃತಿಕ ದುರಂತಗಳು ಜಿಲ್ಲೆಯಲ್ಲಿ ಸಂಭವಿಸದಿರಲಿ ಎಂದು ಆಶಿಸಿದರು. ಸರಕಾರ 50 ಲಕ್ಷ ರೂಪಾಯಿ ಅನುದಾನ ನೀಡಿರುವದನ್ನು ಶ್ಲಾಘಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರು ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ಸಂದಿಗ್ಧ ಪರಿಸ್ಥಿತಿಯಲ್ಲೂ ದಶಮಂಟಪಗಳು ಅಚ್ಚುಕಟ್ಟಾಗಿ ಶೋಭಾಯಾತ್ರೆ ನಡೆಸಿದುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದಸರಾ ಸಮಿತಿ ಅಧ್ಯಕ್ಷೆ ಹಾಗೂ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು, ಈ ಬಾರಿಯ ನಾಲ್ಕು ಕರಗ ದೇವತೆಗಳ ಉತ್ಸವದ ವೆಚ್ಚವನ್ನು ನಗರಸಭೆಯಿಂದಲೇ ಭರಿಸಿದ್ದು, ಪ್ರಾಕೃತಿಕ ದುರಂತದಿಂದಾಗಿ ದಸರಾ ಮೇಲೆ ಬಿದ್ದ ಪರಿಣಾಮವನ್ನು ವಿವರಿಸಿದರು. ಸಂಗೀತಾ ಪ್ರಾರ್ಥನೆ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಹೆಚ್.ಟಿ. ಅನಿಲ್ ನಿರೂಪಣೆ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ ಸ್ವಾಗತ, ಖಜಾಂಚಿ ಸಂಗೀತಾ ಪ್ರಸನ್ನ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮಗಳು
ಮಡಿಕೇರಿ ಕಿಂಗ್ಸ್ ಆಫ್ ಕೂರ್ಗ್ ತಂಡದಿಂದ ಸ್ವಾಗತ ನೃತ್ಯ, ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ, ಮಂದತವ್ವ ಕೊಡವ ಸಂಘ ಕಾನೂರು ತಂಡದಿಂದ ಕೊಡವ ಸಾಂಪ್ರದಾಯಿಕ ವೈವಿಧ್ಯ, ಕುಡೆಕಲ್ ಸಂತೋಷ್ ನಿರ್ದೇಶನದಲ್ಲಿ ವೀರ ಚರಿತೆ ನೃತ್ಯ ರೂಪಕ, ಮಡಿಕೇರಿ ಮಲಯಾಳಿ ಸಂಘದಿಂದ ತಿರುವಾದಿರಾ ನೃತ್ಯ, ವಿಕ್ರಮ್ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ, ಸೋಮವಾರಪೇಟೆಯ ಗಂಧರ್ವ ಕಲಾ ತಂಡದಿಂದ ಜಾನಪದ ಗೀತೆ, ಪುತ್ತೂರಿನ ತಂಡದಿಂದ ನೃತ್ಯ ರೂಪಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಸಾರಥ್ಯದಲ್ಲಿ ಸಂಗೀತ ರಸಮಂಜರಿ, ಮಡಿಕೇರಿಯ ಗೋವಿಂದರಾಜು ಕುಶಾಲನಗರದ ಸಂವೇದಿತಾ, ಸುವೇದಿತಾ, ದೇವೇಂದ್ರ ಪತ್ತರ್, ನಿಷ್ಮಾ ಜಗದೀಶ್, ಮಡಿಕೇರಿಯ ಸಂಪತ್ ಕುಮಾರ್, ಅನನ್ಯ, ಚೋಂದಮ್ಮ ಅವರಿಂದ ಹಾಡುಗಾರಿಕೆ, ಪುತ್ತೂರಿನ ಶ್ರೀದೇವಿ ನೃತ್ಯಾಲಯ ಸಂಸ್ಥೆ ತಂಡದಿಂದ ನೃತ್ಯ ವೈವಿಧ್ಯ. ಕಾರ್ಯಕ್ರಮಗಳು ಜರುಗಿದವು.
ರಾತ್ರಿ 8ರಿಂದ ತಾ.20ರ ಮುಂಜಾನೆವರೆಗೆ ನಡೆದ ಕಾರ್ಯಕ್ರಮಗಳನ್ನು ಹೆಚ್.ಟಿ./ ಅನಿಲ್, ತೆನ್ನೀರ ಮೈನಾ, ಮಾದೇಟಿರ ಬೆಳ್ಳಿಯಪ್ಪ ಹಾಗೂ ಶ್ರೀಧರ್ ಹೂವಳ್ಳಿ ನಿರ್ವಹಿಸಿದರು.