ಸಿದ್ದಾಪುರ, ಅ. 20: ರಸ್ತೆ ಅಪಘಾತವೊಂದರಲ್ಲಿ ಮಹಿಳಾ ಪೊಲೀಸ್ ಈರ್ವರು ಗಂಭೀರವಾಗಿ ಗಾಯಗೊಂಡು, ಒಬ್ಬಾಕೆ ದಾರುಣವಾಗಿ ಮೃತಪಟ್ಟಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಶಾಂತಮ್ಮ (27) ಎಂಬವರು ಪೊಲೀಸ್ ಠಾಣೆಯಲ್ಲಿ ಆಯುಧಪೂಜೆಯಲ್ಲಿ ಪಾಲ್ಗೊಂಡು ನಂತರ ಮಡಿಕೇರಿಗೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದರು. ಕರ್ತವ್ಯ ಮುಗಿಸಿ ಸಂಜೆ ಮೇಲಾಧಿಕಾರಿಯವರ ಅನುಮತಿ ಪಡೆದು ಹಬ್ಬಕ್ಕೆಂದು ತನ್ನ ಊರಾದ ಹುಣಸೂರಿನ ಕಟ್ಟೆಮಳವಳ್ಳಿ ಗ್ರಾಮಕ್ಕೆ ತೆರಳಿದ್ದರು ಎನ್ನಲಾಗಿದೆ.
ಈ ಸಂದÀರ್ಭದಲ್ಲಿ ಹಬ್ಬಕ್ಕೆಂದು ತೆರಳುವ ಸಂದÀರ್ಭ ತನ್ನ ಜೊತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಾಪುರ ಠಾಣೆಯ ಮಹಿಳಾ ಪೇದೆ ಗೌರಮ್ಮ ಭಾರದ್ವಜ್ ಎಂಬವರು ಕೂಡ ಶಾಂತಮ್ಮಳೊಂದಿಗೆ ತೆರಳಿದರು.ಹುಣಸೂರು ತಲುಪಿದ ಬಳಿಕ ಈರ್ವರು ಆಟೋ ರಿಕ್ಷಾವೊಂದರಲ್ಲಿ ಮನೆಯ ಕಡೆ ಪ್ರಯಾಣ ಮಾಡುವ ಸಂದÀರ್ಭ ಮೃತ ಶಾಂತಮ್ಮಳ ಸಹೋದರ ಪರಮೇಶ್ವರ್ ಎಂಬಾತ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮನೆಯತ್ತ (ಕಟ್ಟೆಮಳವಳ್ಳಿ) ತೆರಳುತ್ತಿದ್ದ ಸಂದÀರ್ಭ
(ಮೊದಲ ಪುಟದಿಂದ) ಎದುರು ಮುಖವಾಗಿ ಬಂದÀ ಬೈಕೊಂದು ಶಾಂತಮ್ಮ ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮಗುಚಿದ್ದು ಶಾಂತಮ್ಮಳ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಬೈಕಿನಲ್ಲಿದ್ದ ಸವಾರ ಪರಮೇಶ್ವರ್ ಹಾಗೂ ಇನ್ನೋರ್ವ ಮಹಿಳಾ ಪೇದೆ ಗಂಭೀರಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಎದುರಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಕೂಡ ಮೃತಪಟ್ಟಿದ್ದಾನೆ. ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಬನಿ ಮಿಡಿದ ಪೊಲೀಸರು: ಕಳೆದ ಒಂದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದ ಶಾಂತಮ್ಮ ಸಿದ್ದಾಪುರ ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಈಕೆ ಮೃದು ಸ್ವಭಾವದವಳಾಗಿದ್ದು, ಸಿಬ್ಬಂದಿಗಳೊಂದಿಗೆ ಅನ್ಯೋನ್ಯವಾಗಿದ್ದರು. ಈಕೆಯ ಅಗಲುವಿಕೆಯ ನೋವು ಎಲ್ಲರನ್ನು ಕಾಡಿತ್ತು. ಘಟನೆ ನಡೆದ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ತೆರಳಿ ಮೃತಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು.