ಕುಶಾಲನಗರ, ಅ. 20: ಕುಶಾಲನಗರ ಪ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳಲ್ಲಿ ಇಬ್ಬರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು, 64 ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. 16 ವಾರ್ಡ್‍ಗಳಿಗೆ ಒಟ್ಟು 66 ಮಂದಿ ನಾಮಪತ್ರ ಸಲ್ಲಿಸಿದ್ದು ಶನಿವಾರ 15ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿನಾರಾಯಣ ಮತ್ತು 16ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಶಾಹಿದ ತಮ್ಮ ನಾಮಪತ್ರ ವಾಪಾಸ್ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.