ನ. 1 ರಂದು ಕಕ್ಕಬೆಯಲ್ಲಿ ನಿಗದಿ

ಮಡಿಕೇರಿ, ಅ. 20: ಕೊಡಗಿನ ಆದಿಕವಿ, ಕೊಡವ ಭಾಷೆಯ ವರಕವಿ, ಕೊಡಗಿನ ಕಾಳಿದಾಸ ಎಂಬ ಖ್ಯಾತಿಗೊಳಪಟ್ಟ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವವನ್ನು ಜಿಲ್ಲಾಮಟ್ಟದಲ್ಲಿ ನವೆಂಬರ್ 1 ರಂದು ಕಕ್ಕಬೆಯಲ್ಲಿ ಆಚರಿಸಲಾಗುವದು.

ತಿರಿಬೊಳ್‍ಚ ಕೊಡವ ಸಂಘ ಮಡಿಕೇರಿ, ಕೊಡವ ಮಕ್ಕಡ ಕೂಟ ಮಡಿಕೇರಿ, ಜನಮನ ಕಲಾ ಸಂಘ ಬಲ್ಲಮಾವಟಿ, ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆ ಕಕ್ಕಬೆ, ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ಕಕ್ಕಬೆ ಈ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅಪ್ಪಚ್ಚ ಕವಿಯ 150ನೇ ಹುಟ್ಟುಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಸಾಂಸ್ಕøತಿಕ ಮೆರವಣಿಗೆ, ಸಾಹಿತ್ಯಕ ಸ್ಪರ್ಧೆಗಳು, ಕಿರುಪುಸ್ತಕ ಬಿಡುಗಡೆ, ತರಾವರಿ ಪ್ರದರ್ಶನ, ಹರಿಕಥೆ, ನಾಟಕ, ಕೊಡವ ಆರ್ಕೆಸ್ಟ್ರಾ ಇತ್ಯಾದಿ ನಡೆಯಲಿದೆ.

ವಿವಿಧ ಸ್ಪರ್ಧೆಗಳು

ಕೊಡವ ಗಾಯನ ಸ್ಪರ್ಧೆ: ಹರದಾಸ ಅಪ್ಪಚ್ಚ ಕವಿ ರಚಿಸಿದ, ಹಾಡಿದ ಯಾವದಾದರೊಂದು ಕೊಡವ ಭಾಷೆಯ ಗೀತೆಯನ್ನು 3 ನಿಮಿಷ ಸಮಯದೊಳಗೆ ಹಾಡುವದು. ಶಾಲಾ-ಕಾಲೇಜು, ಸಾರ್ವಜನಿಕ ಎಂಬ 3 ವಿಭಾಗಕ್ಕೆ ತಲಾ ರೂ. 300, 200, 100 ಗಳ 1ನೇ, 2ನೇ, 3ನೇ ಬಹುಮಾನ ನೀಡಲಾಗುವದು.

ಕೊಡವ ನಾಟಕ ಸ್ಪರ್ಧೆ: ಅಪ್ಪಚ್ಚ ಕವಿ ರಚಿಸಿದ ಯಾವದಾದರೊಂದು ಕೊಡವ ನಾಟಕದ ಯಾವದಾದರೊಂದು ಭಾಗದ ದೃಶ್ಯಾವಳಿಯನ್ನು 30 ನಿಮಿಷ ಅವಧಿಯೊಳಗೆ ನಾಟಕ ಪ್ರದರ್ಶಿಸಬೇಕು. ಮುಕ್ತಾವಕೋಶದ ಈ ಸ್ಪರ್ಧೆಗೆ ರೂ. 3,000, 2,000, 1,000 ಗಳ 1ನೇ, 2ನೇ, 3ನೇ ಬಹುಮಾನ ನೀಡಲಾಗುವದು.

ಕೊಡವ ಪ್ರಬಂಧ ಸ್ಪರ್ಧೆ: ಅಪ್ಪಚ್ಚ ಕವಿಯ ಬಾಳು-ಬದುಕು, ಸಾಹಿತ್ಯ ಸೇವೆ, ಸಾಹಿತ್ಯ, ಸಾಧನೆಯ ಮಹತ್ವವನ್ನು ಕೊಡವ ಭಾಷೆಯಲ್ಲಿ 500 ಶಬ್ದಗೊಳಪಟ್ಟು ನಿರೂಪಿಸಿ, ‘ನಾನರಿಂಜ ಅಪ್ಪಚ್ಚ ಕವಿ’ ಎಂಬ ಪ್ರಬಂಧವನ್ನು ಯಾರು ಬೇಕಾದರೂ ಕಾಗದ, ಪೆನ್ನು ಬಳಸಿ ಬರೆದು ಈಗಲೇ ಕಳುಹಿಸಬಹುದಾಗಿದೆ. ರೂ. 600, ರೂ. 400, ರೂ. 300 ಗಳ 1ನೇ, 2ನೇ, 3ನೇ ಬಹುಮಾನ ನೀಡಲಾಗುವದು.

ಛದ್ಮವೇಷ ಸ್ಪರ್ಧೆ: ಅಪ್ಪಚ್ಚ ಕವಿಯಂತೆ ವೇಷ ಭೂಷಣ ತೊಟ್ಟು, ಕವಿಯ ಬಗ್ಗೆ 1 ವಾಕ್ಯ ಹೇಳಿ, ಸಭೆಗೆ ಮುಖ ತೋರಿಸಿ ನಿರ್ಗಮಿಸುವದು, ಮುಕ್ತ ಅವಕಾಶದ ಈ ಸ್ಪರ್ಧೆಗೆ ಒಟ್ಟು ರೂ. 2000 ಗಳ ಉತ್ತೇಜನ ಬಹುಮಾನವಿದೆ.

ಡ್ಯಾನ್ಸ್ ಸ್ಪರ್ಧೆ: ಅಪ್ಪಚ್ಚ ಕವಿ ರಚಿಸಿದ ಯಾವದಾದರೊಂದು ಕೊಡವ ಹಾಡಿಗೆ 10 ನಿಮಿಷ ಸಮಯ ಅವಧಿಯಲ್ಲಿ ಡ್ಯಾನ್ಸ್ ಪ್ರದರ್ಶಿಸಬೇಕು. ಮೆಚ್ಚುಗೆ ಪಡೆಯುವ ಡ್ಯಾನ್ಸ್‍ಗೆ ವಿಶೇಷ ಉತ್ತೇಜನ ಬಹುಮಾನ ನೀಡಲಾಗುವದು.

ಮಿಮಿಕ್ರಿ ಪ್ರದರ್ಶನ: ಯಾವದೇ ವಿಷಯದಲ್ಲಿ 3 ನಿಮಿಷ ಸಮಯಕೊಳಪಟ್ಟು ಉತ್ತಮ ಮಿಮಿಕ್ರಿ ಪ್ರದರ್ಶನ ನೀಡಿದವರಿಗೆ ವಿಶೇಷ ಉತ್ತೇಜಕ ಬಹುಮಾನ ನೀಡಲಾಗುವದು.

ಒಂಟಿನಟನೆ ಪ್ರದರ್ಶನ (ಏಕಪಾತ್ರಾಭಿನಯ): ಅಪ್ಪಚ್ಚ ಕವಿಯ ಯಾವದಾದರೊಂದು ನಾಟಕ ದೃಶ್ಯದ ಯಾವದಾದರೊಂದು ಪುಟ್ಟ ಘಟನೆಯನ್ನು ಕೇವಲ 2 ನಿಮಿಷಕೊಳಪಟ್ಟ ಅವಧಿಯಲ್ಲಿ ಒಂಟಿನಟನೆ (ಏಕಪಾತ್ರಾಭಿನಯ) ಮೂಲಕ ಪ್ರದರ್ಶಿಸುವದು. ಮೆಚ್ಚುಗೆ ಪಡೆಯುವ ಪ್ರದರ್ಶನಕ್ಕೆ ವಿಶೇಷ ಉತ್ತೇಜಕ ಬಹುಮಾನ ನೀಡಲಾಗುವದು.

ಹರಿಕಥೆ ಪ್ರದರ್ಶನ: ಹರದಾಸ ಅಪ್ಪಚ್ಚ ಕವಿಯ ಯಾವದೇ ನಾಟಕ, ಕಥೆ, ಘಟನೆಯನ್ನು ಕೊಡವ ಭಾಷೆಯ ಮಿನಿ ಹರಿಕಥೆ ರೂಪದಲ್ಲಿ 10 ನಿಮಿಷ ಸಮಯಾವಧಿಯಲ್ಲಿ ಪ್ರದರ್ಶಿಸುವದು. ಆಯ್ದ ಹರಿಕಥೆಗೆ ವಿಶೇಷ ಉತ್ತೇಜಕ ಬಹುಮಾನ ನೀಡಲಾಗುವದು.

ಕೊಡವ ಆರ್ಕೆಸ್ಟ್ರಾ: ಅಪ್ಪಚ್ಚ ಕವಿ ವಿರಚಿತ ಹಾಡುಗಳು ಸೇರಿದಂತೆ ಇತರ ಕೊಡವ ಭಾಷೆಯ ಹಾಡುಗಳ ಗಾನಗೋಷ್ಠಿ, ಆರ್ಕೆಸ್ಟ್ರಾವನ್ನು ಶಾಸ್ತ್ರೀಯವಾಗಿ 60 ನಿಮಿಷ ಅವಧಿಯೊಳಗೆ ನೀಡುವದು. ಆಯ್ದ ತಂಡಕ್ಕೆ ಉತ್ತಮ ಗೌರವ ಸಂಭಾವನೆ ನೀಡಲಾಗುವದು.

ಕೊನೆಯ ದಿನಾಂಕ: ಎಲ್ಲಾ ಸ್ಪರ್ಧೆ, ಪ್ರದರ್ಶನಗಳಿಗೆ ಹೆಸರು, ವಿವರ ನೋಂದಾಯಿಸಲು ತಾ. 26 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಹೆಸರು ನೋಂದಾಯಿಸಲು ಅಪ್ಪಚ್ಚ ಕವಿ 150ನೇ ಜನ್ಮೋತ್ಸವ, ಬ್ರಹ್ಮಗಿರಿ ವಾರಪತ್ರಿಕೆ, ಸೌಹಾರ್ಧ ಸಂಘ, ಮುಖ್ಯರಸ್ತೆ, ಮಡಿಕೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 08272-228898, 9845097500, 9481929519, 9880778047, 9448504568, 9611652367 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

ಮನವಿ: ಕಕ್ಕಬೆ ಪ್ರೌಢಶಾಲಾ ಆವರಣದಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 9 ರಿಂದ ಸಂಜೆ 5.30 ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ ಎಂದು ತಿರಿಬೊಳ್‍ಚ ಸಂಘಟನೆಯ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ತಿಳಿಸಿದ್ದಾರೆ.