ಕೂಡಿಗೆ, ಅ. 18: ಕೂಡಿಗೆಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಬೆಂಗಳೂರಿನ ವುಮೆನ್ಸ್ ಕಾಫಿ ಅಲೆಯನ್ಸ್ ಇಂಡಿಯಾ ಚಾಪ್ಟರ್ ಇವರು ಕುಶಾಲನಗರ ಟಾಟಾ ಕಾಫಿ ವಕ್ರ್ಸ್ನ ಮುಖಾಂತರ ಸುಮಾರು ರೂ. 1 ಲಕ್ಷ ವೆಚ್ಚ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.
ಈ ಸಂದರ್ಭ ಪಾಲಿಬೆಟ್ಟ ಟಾಟಾ ಕಾಫಿ ವಕ್ರ್ಸ್ನ ಸೀನಿಯರ್ ಜನರಲ್ ಮ್ಯಾನೇಜರ್ ಎಂ.ಬಿ. ಗಣಪತಿ, ಕುಶಾಲನಗರ ಟಾಟಾ ಕಾಫಿ ವಕ್ರ್ಸ್ನ ಜನರಲ್ ಮ್ಯಾನೇಜರ್ ರಿಕ್ಕಿ ಅಯ್ಯಪ್ಪ, ಮ್ಯಾನೇಜರ್ ಸ್ಮರಣ್ ಭೀಮಯ್ಯ, ಸಿಬ್ಬಂದಿಗಳಾದ ನಳಿನಿ ಗಣೇಶ್ ಇದ್ದರು.