ನಾಪೆÇೀಕ್ಲು, ಅ. 18: ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ವತಿಯಿಂದ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಜಿಲ್ಲೆಯ ಬಾಲಕಿಯರ ತಂಡ ಮೈಸೂರು ತಂಡವನ್ನು 3-2 ಗೋಲಿನ ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಈ ತಂಡದಲ್ಲಿದ್ದ ಸುಶ್ಮಿತ, ವಿನ್ಯಶ್ರೀ, ಲಿಖಿತಾ, ದೀಪ್ತಿ, ಪಾರ್ವತಿ, ಯುಕ್ತಾ, ಶಯಾ ಕಾವೇರಮ್ಮ, ಲೀಲಾವತಿ, ಅರ್ಪಿತ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಕೊಡಗು ತಂಡ ಬೆಂಗಳೂರು ತಂಡದೊಂದಿಗೆ ಪರಾಭವಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ತೀರ್ಪುಗಾರರಾಗಿ ಹಾಕಿ ಕೂರ್ಗ್‍ನ ಕುಪ್ಪಂಡ ದಿಲನ್ ಬೋಪಣ್ಣ, ಕರವಂಡ ಅಪ್ಪಣ್ಣ, ಕುಮ್ಮಂಡ ಬೋಸ್ ಚಂಗಪ್ಪ, ಅನ್ನಾಡಿಯಂಡ ಪೆÇನ್ನಣ್ಣ ಕರ್ತವ್ಯ ನಿರ್ವಹಿಸಿದರು.