ಸುಂಟಿಕೊಪ್ಪ, ಅ. 18: ಇಲ್ಲಿಗೆ ಸಮೀಪದ ಹರದೂರು ಪಂಚಾಯಿತಿ ಹೊಸತೋಟ ಗ್ರಾಮದ ಆಟೋ ಚಾಲಕನಾಗಿz್ದÀ ದಿವಂಗತ ಗಣೇಶ ಅವರು ಲಾರಿ ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ಹಿಂದೆ ಮೃತರಾಗಿದ್ದರು. ಇವರಿಗೆ 3 ಹೆಣ್ಣು ಮಕ್ಕಳಿದ್ದು ಇಬ್ಬರು ಮಕ್ಕಳು ಪಾಶ್ರ್ವವಾಯು ಖಾಯಿಲೆಗೆ ತುತ್ತಾಗಿದ್ದರು.
ಈ ಕುಟುಂಬ ಜೀವನ ನಿರ್ವಹಣೆಗೆ ಕಷ್ಟ ಪಡುವದನ್ನು ಮನಗಂಡು ಈ ಕುಟುಂಬಕ್ಕೆ ಮೈಸೂರಿನ ಅಷ್ಟಾಂಗ ಮಾರ್ಗ ಧ್ಯಾನ ಮಂದಿರದ ಸಂಸ್ಥಾಪಕರಾದ ಭಂತೇ ಭೋದಿ ದತ್ತ ಬಿಕ್ಕು ಅವರು ರೂ. 10 ಸಾವಿರ ಧನ ಸಹಾಯ ಮತ್ತು ಆಹಾರ ಕಿಟ್ ವಿತರಿಸಿದ ಅವರು ಮೈತ್ರಿ ಧ್ಯಾನದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಮುಂದಿನ 6 ತಿಂಗಳ ನಂತರ ಪಾಶ್ರ್ವವಾಯು ಪೀಡಿತ ಮಕ್ಕಳನ್ನು ಮೈಸೂರಿ ಚಿಗುರು ಆಶ್ರಮಕ್ಕೆ ಸ್ಥಳಾಂತರಿಸಿ ಅವರಿಗೆ ಪುನರ್ವಸತಿ ಕಲ್ಪಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭ ಸ್ವಸ್ಥ ಪುನರ್ವಸತಿ ಕೇಂದ್ರದ ಸಂಯೋಜಕ ಮುರುಗೇಶ್, ವಿಕಾಶ್ ಜನ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ, ಸುಂಟಿಕೊಪ್ಪ ಸಮಾಜ ಸೇವಕರಾದ ಶಿವ (ಪುಲಿ) ಮತ್ತು ಪ್ರಮೋದ್ ಹಾಜರಿದ್ದರು.