*ಗೋಣಿಕೊಪ್ಪ, ಅ. 18: ಅರವತ್ತೋಕ್ಲು ಕಾಡ್ಲಯ್ಯಪ್ಪ ಸ್ಪೋಟ್ರ್ಸ್, ಕಲ್ಚರಲ್, ಅಂಡ್ ರಿಕ್ರೀಯೇಷನ್ ಅಸೋಸಿಯೇಷನ್ ಸಂಸ್ಥೆಯ ವತಿಯಿಂದ ಗೋಣಿಕೊಪ್ಪಲು ದಸರಾ ನಾಡ ಹಬ್ಬದ ಪ್ರಯುಕ್ತ ಕೇರಂ ಪಂದ್ಯಾಟ ನಡೆಯಿತು.

ಗೋಣಿಕೊಪ್ಪಲು ವೃತ್ತ ನಿರಿಕ್ಷಕ ದಿವಾಕರ್ ಕೇರಂ ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಮನೆಯಪಂಡ ದೀನಾ ಅಯ್ಯಣ್ಣ ಅವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ಯುವ ದಸರಾ ಸಮಿತಿ ಅಧ್ಯಕ್ಷ ಜೆ.ಕೆ. ಸೋಮಣ್ಣ, ಅರವತ್ತೋಕ್ಲು ಕಾಡ್ಲಯ್ಯಪ್ಪ ದಸರಾ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಕಾಡ್ಲಯ್ಯಪ್ಪ ಅಸೋಸಿಯೇಷನ್ ಸಂಸ್ಥೆಯ ನಿರ್ದೇಶಕರಾದ ಕೊಡಂಗರ ಪ್ರವೀಣ್ ಗಣಪತಿ, ಮನೆಯಪಂಡ ಸೋಮಣ್ಣ, ಜಮ್ಮಡ ಹ್ಯಾರಿ ಉತ್ತಪ್ಪ, ಜಮ್ಮಡ ವಿನು ಉತ್ತಯ್ಯ, ನೂರೇರ ರವೀಂದ್ರ, ಜಮ್ಮಡ ಗಿಲ್ ಮತ್ತಿತರರು ಹಾಜರಿದ್ದರು.

ಕೇರಂ ಪಂದ್ಯಾಟದ ಡಬ್ಬಲ್ಸ್ ವಿಭಾಗದಲ್ಲಿ ಸಂತೋಷ್ ಪಿಟ್ಟೆ ಹಾಗೂ ಸುಜೇಶ್ ಜೋಡಿ ಪ್ರಥಮ ಕೆ.ಎಂ. ಸಕೀರ್, ಬಿ.ಬಿ. ಭರತ್ ಕುಮಾರ್ ಜೋಡಿ ದ್ವಿತಿಯ ಬಹುಮಾನವನ್ನು ಕೇರಂ ಸಿಂಗಲ್ಸ್ ವಿಭಾಗದಲ್ಲಿ ಸಂತೋಷ್ ಪಿಟ್ಟೆ ಪ್ರಥಮ ಹಾಗೂ ನೂರೇರ ರವೀಂದ್ರ ದ್ವಿತಿಯ ಬಹುಮಾನವನ್ನು ಪಡೆದುಕೊಂಡರು. ಪಂದ್ಯಾಟದ ತೀರ್ಪುಗಾರರಾಗಿ ಎನ್.ಎಸ್. ಕಂದಾ ದೇವಯ್ಯ, ಎನ್.ಪಿ. ರವಿ, ಸಕೀರ್, ಎಂ.ಆರ್. ವಿಜು ಇವರು ಕಾರ್ಯನಿರ್ವಹಿಸಿದರು.