ಮೂರ್ನಾಡು, ಅ. 18 : ಇಲ್ಲಿನ ನವಚೇತನ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಆಯುಧ ಪೂಜೆ ಪ್ರಯುಕ್ತ ಆಟೋಗಳಿಗೆ ಸಾಮೂಹಿಕ ಪೂಜೆ ನಡೆಯಿತು.
ಮೂರ್ನಾಡು ವಿದ್ಯಾಸಂಸ್ಥೆಯ ಬಾಚ್ಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಸಾಮೂಹಿಕ ಪೂಜೆ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಆಟೋಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್. ಸತೀಶ್, ಕಾರ್ಯದರ್ಶಿ ಎ.ಎನ್. ಪ್ರಶಾಂತ್, ಉಪಾಧ್ಯಕ್ಷ ಆಸೀಫ್, ಖಜಾಂಚಿ ವೇಣು ಗೋಪಾಲ್, ಸಹ ಕಾರ್ಯದರ್ಶಿ ಸಿ.ಜಿ. ಗಣೇಶ್, ನಿರ್ದೇಶಕರುಗಳಾದ ಬೋಜ, ರಘು, ಶಿವಪ್ಪ, ವಸಂತ, ತೌಫಿಕ್, ಚಂದ್ರ, ಗಿಣಿ ಅವರುಗಳು ಹಾಜರಿದ್ದರು.