ಶನಿವಾರಸಂತೆ, ಅ. 17: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಹಿರಿಯರಿಗೆ 2018-19ನೇ ಸಾಲಿನ ನ್ಯಾಷನಲ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ಥಳೀಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಮಹಿಳೆಯರ ಓಟದ ಸ್ಪರ್ಧೆಗೆ ಆಯ್ಕೆಯಾಗಿರುವ ತಾಳೂರು ಗ್ರಾಮದ ಮಹಿಳಾ ಕ್ರೀಡಾಪಟು ಕಮಲಮ್ಮ ಸುರೇಶ್, ಮುಳ್ಳೂರು ಗ್ರಾಮ ಜೈನ ಬಸದಿ ಕೇಂದ್ರದ ಮಾರ್ಗದರ್ಶಕ ಯೋಗ ಶಿಕ್ಷಕ ಕುಮಾರಸ್ವಾಮಿ ಹಾಗೂ ನಿಡ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಸಿ.ಕೆ. ದಿನೇಶ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಮುಖ್ಯ ಅತಿಥಿ ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ಡಾ. ಪ್ರಶಾಂತ್ ಹಾಗೂ ಸನ್ಮಾನಿತೆ ಕಮಲಮ್ಮ ಮಾತನಾಡಿದರು. ರೋಟರಿ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ಶನಿವಾರಸಂತೆ ಸಂಸ್ಥೆ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ಹೆಚ್.ವಿ. ದಿವಾಕರ್, ಯಶ್ವಂತ್, ಶ್ವೇತಾ, ಬೀನಾ ಉಪಸ್ಥಿತರಿದ್ದರು.