ನಾಪೆÇೀಕ್ಲು, ಅ. 17: ನಗರದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಸುಮಾರು ರೂ. 1.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ಮಾಜಿ ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಬೊಪ್ಪೇರ ಕಾವೇರಪ್ಪ ಉದ್ಘಾಟಿಸಿದರು.
ಇದೇ ಸಂದರ್ಭ ಈ ನೂತನ ತಂಗುದಾಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಅರೆಯಡ ಸೋಮಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಶಿವಚಾಳಿಯಂಡ ವಿಜೂ ಪೂಣಚ್ಚ, ಸಿಬ್ಬಂದಿಯವರಾದ ಕೊಂಬಂಡ ಸೀತಾರಾಮ, ಕಲ್ಲೇಂಗಡ ಕಾರ್ಯಪ್ಪ, ಬಾಳೇಯಡ ಬೋಪಯ್ಯ, ಮತ್ತಿತರರು ಇದ್ದರು.