ಸೋಮವಾರಪೇಟೆ, ಅ. 17: ಅತೀವೃಷ್ಟಿ, ಭೂಕುಸಿತದಿಂದ ಸಂತ್ರಸ್ತರಾಗಿರುವ ತಾಲೂಕಿನ ಕೂತಿ ಹಾಗೂ ಮಲ್ಲಳ್ಳಿ ಗ್ರಾಮದ 9 ಮಂದಿ ಕೃಷಿಕರಿಗೆ ಇಲ್ಲಿನ ಆಲೇಕಟ್ಟೆ ರಸ್ತೆಯಲ್ಲಿರುವ ರಿವರ್ಸೈಡ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಧನ ಸಹಾಯ ವಿತರಿಸಲಾಯಿತು. ಮಹಾ ಮಳೆಯಿಂದ ಕೂತಿಗ್ರಾಮದ ಡಿ.ಜೆ. ರಾಜಪ್ಪ, ಡಿ.ಎ. ಗಣಪತಿ, ಡಿ.ಪಿ. ಮೊಗಪ್ಪ, ಕೆ.ಪಿ. ಅಪ್ಪಯ್ಯ, ಈರಪ್ಪ, ಲೋಕೇಶ್, ಮಲ್ಲಳ್ಳಿ ಗ್ರಾಮದ ದೊಡ್ಡಯ್ಯ, ವೆಂಕಟೇಶ್, ಸುದೀಪ್ ಅವರುಗಳಿಗೆ ಕ್ಲಬ್ನ ವತಿಯಿಂದ ಧನ ಸಹಾಯ ನೀಡಲಾಯಿತು. ಈ ಸಂದರ್ಭ ಕ್ಲಬ್ನ ಅಧ್ಯಕ್ಷ ವಿ.ಸಿ. ಲೋಕೇಶ್, ಕಾರ್ಯದರ್ಶಿ ಬಿ.ಎನ್. ಗಣೇಶ್, ಖಜಾಂಚಿ ಸಿ.ಪಿ. ಬೆಳ್ಳಿಯಪ್ಪ, ಬಿ.ಎಂ. ಗುರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.