ಮಡಿಕೇರಿ, ಆ. 17: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಮಡಿಕೇರಿ ವತಿಯಿಂದ ಅಂಗನವಾಡಿ ದಿನಾಚರಣೆ, ಪೋಷಣ್ ಮಾಸ ಅಭಿಯಾನದಡಿ ಸೀಮಂತ ಕಾರ್ಯಕ್ರಮ, ಅನ್ನ ಪ್ರಾಸನ ಕಾರ್ಯಕ್ರಮ, ಮಾತೃಪೂರ್ಣ ಅನುಷ್ಠಾನ ಮಾಡಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಕಾರ್ಯಕ್ರಮದ ಉದ್ದೇಶ ಮತ್ತು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು. ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸಾಲ ಸೌಲಭ್ಯಗಳನ್ನು ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕಾಗಿ ತಿಳಿಸಿದರು.

ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ತಿಳಿಸಿದರು. ಎಲ್ಲಾ ಕೇಂದ್ರಗಳಲ್ಲಿ ಕೈತೋಟ ಮತ್ತು ಮಕ್ಕಳ ಹೆಸರಿನ ತರಕಾರಿ ಪಾಟ್ ಮಾಡಿಸಲು ಮೊದಲ ಆದ್ಯತೆ ನೀಡಬೇಕಾಗಿ ತಿಳಿಸಿದರು. ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಂದ ಸೀಮಂತ ಕಾರ್ಯಕ್ರಮ, ಅನ್ನ ಪ್ರಾಸನ, ಮಾತೃಪೂರ್ಣ ಅನುಷ್ಠಾನ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಶ್ಮಿ, ಹಾಜರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಜಾನಕಿ, ಪರಮೇಶ್ವರ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ರಮಾದೇವಿ, ಪವಿತ್ರ, ಶಿಕ್ಷಕರಾದ ಭಾರತಿ, ಮಮತ ಹಾಜರಿದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ದಮಯಂತಿ, ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮ್ಮ, ನಳಿನಿ ಪಾರ್ವತಿ, ಮನೋಹರಿ, ವಾರಿಜ, ಕುಸುಮ, ಸರಿತ ಯಮುನಾವತಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.