ಗೋಣಿಕೊಪ್ಪ ವರದಿ, ಅ. 17 : ಮುನಿದ ಪ್ರಕೃತಿ ಮತ್ತೆ ಕೊಡಗನ್ನು ಕಾಪಾಡು ಎಂಬ ಬೇಡಿಕೆಯ ಕವನಸಾಲುಗಳು ಕಾವೇರಿ ದಸರಾ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗೋಣಿಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಅಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ವ್ಯಕ್ತವಾದವು. ಪ್ರಕೃತಿ ರುದ್ರನರ್ತನದಿಂದ ಬದುಕು ಕಳೆದುಕೊಂಡಿರುವ ಕೊಡಗು ಮತ್ತೆ ಪುಟಿದೇಳಲಿ ಎಂಬ ಸಂದೇಶ ಗೋಣಿಕೊಪ್ಪ ವರದಿ, ಅ. 17 : ಮುನಿದ ಪ್ರಕೃತಿ ಮತ್ತೆ ಕೊಡಗನ್ನು ಕಾಪಾಡು ಎಂಬ ಬೇಡಿಕೆಯ ಕವನಸಾಲುಗಳು ಕಾವೇರಿ ದಸರಾ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗೋಣಿಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಅಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ವ್ಯಕ್ತವಾದವು. ಪ್ರಕೃತಿ ರುದ್ರನರ್ತನದಿಂದ ಬದುಕು ಕಳೆದುಕೊಂಡಿರುವ ಕೊಡಗು ಮತ್ತೆ ಪುಟಿದೇಳಲಿ ಎಂಬ ಸಂದೇಶ ಬರಹಗಳ ಮೂಲಕ ವ್ಯಕ್ತವಾಯಿತು.
ಮುನಿದ ಪ್ರಕೃತಿಯನ್ನು ಬೇಡಿದ ಕವನ ಸಾಲುಗಳು
ಪ್ರಕೃತಿ ಮುನಿಸಿಗೆ ಮಾನವನೇ ಕಾರಣ ಎಂಬದನ್ನು
(ಮೊದಲ ಪುಟದಿಂದ) ಅರ್ಥಗರ್ಭಿತ ವಾಗಿ ಕವನದ ಮೂಲಕ ವ್ಯಕ್ತಪಡಿಸಿ ಕೊನೆಯದಾಗಿ ಕಾಪಾಡು ಕೊಡಗು, ಮತ್ತೆ ಇಂತಹ ದುಸ್ಥಿತಿ ತರಬೇಡ ಎಂಬ ಕೋರಿಕೆಯನ್ನು ಕೊಡಗಿನ ಜನರ ಪರವಾಗಿ ಪ್ರಕೃತಿಯನ್ನು ಬೇಡಿಕೊಂಡ ಕವನಗಳು ಅಕ್ಷರ ರೂಪದಲ್ಲಿ ಹೊರಹೊಮ್ಮಿದವು. ಕಿಗ್ಗಾಲು ಗಿರೀಶ್ ಅವರಿಂದ ಪ್ರಕೃತಿ ಮುನಿದ ವಿಷಯದಲ್ಲಿ ವರುಣನ ಮುಷ್ಟಿ ಏಟು ಬದುಕು ಬಡಿಯಿತು ಎಂದು ಭೂಕುಸಿತದಿಂದ ಬದುಕು ಕಳೆದುಕೊಂಡವರ ಸ್ಥಿತಿಯನ್ನು ತೋರಿಸಿತು. ಉಳುವಂಗಡ ಕಾವೇರಿ, ಕೊಡವ ಭಾಷೆಯಲ್ಲಿ ಸೃಷ್ಟಿಗೆ ಕಾಲ ಬೇಕು, ನಾಶಕ್ಕೆ ಕ್ಷಣ ಸಾಕು ಎಂದು ಕೊಡಗಿನ ಘಟನೆ ನೆನೆಸಿದರು. ನಲುಗಿದ ನನ್ನ ನಾಡು ಕರವ ಚಾಚುವಂತಾಯಿತು ಎಂದು ಟಾಮಿ ಥೋಮಸ್ ಹಂಚಿಕೊಂಡರು.
ಮಾನವನ ಅತಿಯಾಸೆ ದುರ್ಘಟನೆಗೆ ಕಾರಣವಾಯಿತು ಎಂದು ಮಂಜುನಾಥ್ ಅತಿಯಾಸೆ ಮಡಿಲು ಕೊರೆಯಿತೇ ಎಂದು ಕಾವೇರಿ ನಾಡಿಗೆ ಆದ ನೋವು ಹೊರ ತಂದರು. ನಳಿನಾಕ್ಷಿ ಕೊಡವ ಭಾಷೆಯಲ್ಲಿ ಕಾಲ ಬದಲಾಗಲಿಲ್ಲ, ನಾವು ಬದಲಾಗಿದ್ದೇವೆ ಎಂಬದನ್ನು ಅಂದು ಮಹಿಳೆ ಮಗುವಿಗೆ ಜನ್ಮ ನೀಡುತ್ತಿದ್ದಳು, ಇಂದೂ ಕೂಡ ಮಹಿಳೆ ಮಗುವಿಗೆ ಜನ್ಮ ನೀಡುತ್ತಿದ್ದಾಳೆ ಎಂದು ಕಾಲ ಬದಲಾಗಲಿಲ್ಲ ಎಂಬ ಸಂದೇಶ ನೀಡಿದರು. ವಿನೋದ್ ಮೂಡಗದ್ದೆ ಅವರು ಧರ್ಮದ ಹೆಸರಲ್ಲಿ ಕಚ್ಚಾಟ,, ಎಲ್ಲಾ ಧರ್ಮಿಯರು ಒಂದಾಗಿ ಗಂಜಿ ಉಂಡರು ಎಂದು ಧರ್ಮಗಳಿಗಾಗಿ ಕಚ್ಚಾಡಿ ಕಷ್ಟ ಬಂದಾಗ ಒಂದಾಗಿ ಗಂಜಿ ಉಂಡರು ಎಂಬ ಕವನ ಪ್ರಸ್ತುತಪಡಿಸಿದರು. ನಾಯಕಂಡ ಬೇಬಿ ಚಿಣ್ಣಪ್ಪ ಅವರ ಕಾವೇರಿನ ಬೋಡನಾ, ನಳಿನಿ ಬಿಂದು ಅವರ ಆರದ ವೇದನೆ, ವಾತ್ಸಲ್ಯ ಅವರ ಕೋಮು ಮಾನವ, ರೇವತಿ ಪೂವಯ್ಯ ಅವರ ಮಾಪ್ಮಾಡ್ ಮಳೆದೇವ, ಜಗದೀಶ್ ಅವರ ಪ್ರಳಯದ ಮೆಲುಕು, ರವಿ ಸುಬ್ಬಯ್ಯ ಅವರ ತಾಯಿ ಕಾವೇರಿ, ರಂಜಿತಾ ಕಾರ್ಯಪ್ಪ ಅವರ ಅನಿವಾರ್ಯ ಕವನ ವಾಚನ ಗೊಂಡವು. ಬಿ.ಬಿ. ಕಿಶೋರ್ಕುಮಾರ್ ಅವರ ಮಗುವಾದೆನು, ವೈಲೇಶ್ ಅವರು ಧರ್ಮದ ಹೆಸರಲ್ಲಿ ಕಚ್ಚಾಟ,, ಎಲ್ಲಾ ಧರ್ಮಿಯರು ಒಂದಾಗಿ ಗಂಜಿ ಉಂಡರು ಎಂದು ಧರ್ಮಗಳಿಗಾಗಿ ಕಚ್ಚಾಡಿ ಕಷ್ಟ ಬಂದಾಗ ಒಂದಾಗಿ ಗಂಜಿ ಉಂಡರು ಎಂಬ ಕವನ ಪ್ರಸ್ತುತಪಡಿಸಿದರು. ನಾಯಕಂಡ ಬೇಬಿ ಚಿಣ್ಣಪ್ಪ ಅವರ ಕಾವೇರಿನ ಬೋಡನಾ, ನಳಿನಿ ಬಿಂದು ಅವರ ಆರದ ವೇದನೆ, ವಾತ್ಸಲ್ಯ ಅವರ ಕೋಮು ಮಾನವ, ರೇವತಿ ಪೂವಯ್ಯ ಅವರ ಮಾಪ್ಮಾಡ್ ಮಳೆದೇವ, ಜಗದೀಶ್ ಅವರ ಪ್ರಳಯದ ಮೆಲುಕು, ರವಿ ಸುಬ್ಬಯ್ಯ ಅವರ ತಾಯಿ ಕಾವೇರಿ, ರಂಜಿತಾ ಕಾರ್ಯಪ್ಪ ಅವರ ಅನಿವಾರ್ಯ ಕವನ ವಾಚನ ಗೊಂಡವು. ಬಿ.ಬಿ. ಕಿಶೋರ್ಕುಮಾರ್ ಅವರ ಮಗುವಾದೆನು, ವೈಲೇಶ್