ನಾಪೆÇೀಕ್ಲು, ಅ. 17: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಲಯನ್ಸ್ ಕ್ಲಬ್ ನಾಪೆÇೀಕ್ಲು ಮತ್ತು ಸ್ಥಳೀಯ ಅಂಕುರ್ ಪಬ್ಲಿಕ್ ಸ್ಕೂಲ್‍ನ ಸಂಯುಕ್ತಾಶ್ರಯದಲ್ಲಿ ಹಳೇ ತಾಲೂಕಿನಿಂದ ನಾಪೆÇೀಕ್ಲು ಮಾರುಕಟ್ಟೆಯವರೆಗೆ ಪಟ್ಟಣ ಸೇರಿದಂತೆ ರಸ್ತೆಗಳಲ್ಲಿ ಸ್ವಚ್ಚತಾ ಕೆಲಸ ನಿರ್ವಹಿಸಲಾಯಿತು.
ಈ ಸಂದರ್ಭ ನಾಪೆÇೀಕ್ಲು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಮುಕ್ಕಾಟಿರ ವಿನಯ್, ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಹಾಗೂ ಲಯನ್ಸ್ ಕ್ಲಬ್‍ನ ಪದಾಧಿಕಾರಿ ಕೇಟೋಳಿರ ರತ್ನಾ ಚರ್ಮಣ್ಣ, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮಾಲತಿ ಯು.ಸಿ, ರೋಹಿಣಿ ಎ.ಡಿ, ಅಂಕುರ್ ಶಾಲೆಯ ಶಿಕ್ಷಕರು, ಲಯನ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.