ಆಲೂರುಸಿದ್ದಾಪುರ ಅ.17: ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ತಾ. 15ರಂದು ಚುನಾವಣೆ ನಡೆಯಿತು. ಈ ಸಂಘದಲ್ಲಿ 12 ಮಂದಿ ನಿರ್ದೇಶಕರನ್ನು ಒಳಗೊಂಡಿರುವ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ, ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ 5 ಅಭ್ಯರ್ಥಿಗಳು ಜಯಗಳಿಸಿದರೆ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ 2 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿ.ಸಿ.ಎಂ. ಕ್ಷೇತ್ರದಿಂದ ಇಬ್ಬರು, ಎಸ್‍ಸಿ ಕ್ಷೇತ್ರದಿಂದ ಒಬ್ಬರು ಹಾಗೂ ಎಸ್‍ಟಿ ಕ್ಷೇತ್ರದಿಂದ ಒಬ್ಬರು ಜಯಗಳಿಸಿದ್ದಾರೆ. ಸಾಲಗಾರ ಅಲ್ಲದ ಕ್ಷೇತ್ರದಿಂದ ಒಬ್ಬರು ಜಯಗಳಿಸಿದ್ದಾರೆ.

ಸಾಲಗಾರ ಕ್ಷೇತ್ರದಿಂದ 5 ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ 38 ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಈ ಪೈಕಿ ಚುನಾವಣೆಯಲ್ಲಿ ಎಚ್.ಎಸ್. ಸುಂದರೇಶ್ (508 ಮತ, ಪಿ.ಕೆ.ಭರತ್ ಕುಮಾರ್(3940, ಎಸ್.ಜೆ.ಪ್ರಸನ್ನಕುಮಾರ್ (383), ಕಾವೇರಪ್ಪ (338), ಸಿ.ಕೆ.ದೇವಯ್ಯ (334) ಮತ ಪಡೆದು ಆಯ್ಕೆಗೊಂಡರೆ, ಸಾಮಾನ್ಯ ಮಹಿಳಾ ಸ್ಥಾನದಿಂದ ಜಾನ್ವಿ ರಮೇಶ್ (396) ಮತ್ತು ಯಶೋಧ ತಿಮ್ಮಯ್ಯ (369) ಮತ ಪಡೆದು ಆಯ್ಕೆಗೊಂಡಿದ್ದಾರೆ. ಬಿ.ಸಿ.ಎಂ.ಎ ಸ್ಥಾನದಿಂದ ಎ.ಜಿ.ವಿಜಯ್ (489) ಮತ್ತು ಟಿ.ಪಿ.ವಿಜಯ್ (476) ಮತ ಪಡೆದು ಜಯಗಳಿಸಿದ್ದಾರೆ. ಎಸ್‍ಸಿ ಸ್ಥಾನದಿಂದ ಮಲ್ಲೇಶ್ (490) ಮತಗಳಿಸಿ ಜಯಗಳಿಸಿದ್ದರೆ, ಎಸ್‍ಟಿ ಸ್ಥಾನದಿಂದ ಧರ್ಮಪ್ಪ (493) ಮತ ಪಡೆದು ಜಯಗಳಿಸಿದ್ದಾರೆ.

ಸಾಲಗಾರ ಅಲ್ಲದ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಈ ಪೈಕಿ ವೀಣಾ (28) ಮತ ಪಡೆದು ಆಯ್ಕೆಗೊಂಡಿದ್ದಾರೆ.