ಸೋಮವಾರಪೇಟೆ, ಅ. 17: ಇಲ್ಲಿನ ಸೋಮೇಶ್ವರ ದೇವಾಲಯ ದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪಾರ್ವತಿ ದೇವಿಗೆ ಅರ್ಧನಾರೀಶ್ವರ ಅಲಂಕಾರ ಮಾಡಲಾಗಿತ್ತು.

ನಂತರ ದೇವಾಲಯದಲ್ಲಿ ಅಕ್ಷರಾಭ್ಯಾಸ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ನಡೆದವು.