ಸುಂಟಿಕೊಪ್ಪ, ಅ. 17: ಪ್ರತಿಯೊಬ್ಬ ನಾಗರಿಕನು ಸ್ವಚ್ಛತೆಯ ಬಗ್ಗೆ ಅರಿವು ಬೆಳೆಸಿಕೊಳ್ಳುವ ದಿಸೆಯಲ್ಲಿ ಸ್ವಚ್ಛತಾ ಆಂದೋಲನ ವನ್ನು ಕಾರ್ಯರೂಪಕ್ಕೆ ತರಲು ವಾರ್ತಾ ಇಲಾಖೆಯ ಬೀದಿ ನಾಟಕ ತಂಡದ ಕಲಾವಿದರು ಹಾಡುಗಾರಿಕೆ
ಹಾಗೂ ನಾಟಕವನ್ನು ಸುಂಟಿಕೊಪ್ಪ ಪಟ್ಟಣದಲ್ಲಿ ನಡೆಸಿದರು.
ಪ್ರತಿಯೊಬ್ಬ ನಿವಾಸಿಯೂ ಮನೆಯಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಯಲ್ಲಿ ಉತ್ಪತಿ ಗೊಳ್ಳುವ ಕಸವನ್ನು ಹಸಿ ಹಾಗೂ ಒಣಕಸವಾಗಿ ವಿಂಗಡಿಸ ಬೇಕು ಗ್ರಾಮದ ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ವಿದ್ಯಾಸಾಗರ ಕಲಾ ತಂಡದ ವತಿಯಿಂದ ನಾಟಕ ಪ್ರದರ್ಶಿಸಿ ಜನರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಪಂಚಾಯಿತಿ ಪಿಡಿಓ ಮೇದಪ್ಪ, ಸದಸ್ಯ ಎ. ಶ್ರೀಧರ್ಕುಮಾರ್, ಕಾರ್ಯದರ್ಶಿ ಶ್ರೀಧರ್, ಪಂಚಾಯಿತಿ ಸಿಬ್ಬಂದಿ ಗಳಾದ ಪುನೀತ್ ಕುಮಾರ್, ಶ್ರೀನಿವಾಸ ಮತ್ತಿತರರು ಇದ್ದರು.