ಗೋಣಿಕೊಪ್ಪ ವರದಿ, ಅ. 17 : ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾದಲ್ಲಿ ಮಹಿಳೆಯರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳಾ ದಸರಾಕ್ಕೆ ಮೆರಗು ನೀಡಿದರು.
ಮ್ಯೂಸಿಕಲ್ ಚೇರ್, ಬಾಂಬ್ ಇನ್ ದ ಸಿಟಿ, ಹೂವಿನ ಅಲಂಕಾರ, ವಾಲಗತ್ತಾಟ್, ನೃತ್ಯ ಸ್ಪರ್ಧೆ, ಜಾನಪದ ಗೀತೆ, ಛದ್ಮವೇಷ, ಸೀರೆ ನಿಖರ ಬೆಲೆ, ಪಿಕ್ ಅಯಿಂಡ್ ಅಕ್ಟ್ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕೊಡಗು ಪರಿಸರ ರಕ್ಷಣೆಯಲ್ಲಿ ನಮ್ಮ ಪಾತ್ರ ಅಂದು-ಇಂದು ಎಂಬ ವಿಷಯದಲ್ಲಿ ಚರ್ಚೆಯಲ್ಲಿ ಕೊಡಗಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ ಬೆಳಕು ಚೆಲ್ಲಿದರು.
ಪ್ರಕೃತಿ ರಕ್ಷಣೆಯಲ್ಲಿ ಅಂದು- ಇಂದು ಚರ್ಚಾ ಸ್ಪರ್ಧೆಯಲ್ಲಿ ನಳಿನಿ ಕೊಡಗಿನಲ್ಲಿ ನಡೆಯುತ್ತಿರುವ ಪ್ರಕೃತಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ ಬೆಳಕು ಚೆಲ್ಲಿದರು. ಪೂರ್ವಜರ ಪ್ರಕೃತಿ ಪ್ರೀತಿ, ದೇವರಕಾಡು ಸಂರಕ್ಷಣೆ, ಕೃಷಿ ಚಟುವಟಿಕೆ, ನಂತರದ ದಿನಗಳಲ್ಲಿ ನಡೆಯುತ್ತಿರುವ ಬದಲಾವಣೆಯಿಂದ ವೈಜ್ಞಾನಿಕವಾಗಿ ಎದುರಿಸಬೇಕಾದ ಗಂಡಾಂತರವನ್ನು ಹೊರಚೆಲ್ಲಿದರು. ಉಳಿದಂತೆ ಬಹುತೇಕ ಸ್ಪರ್ಧಿಗಳು ಪ್ರಕೃತಿ ಮೇಲೆ ನಡೆಯುತ್ತಿರುವ ಮಾನವನ ಅಟ್ಟಹಾಸವನ್ನು ಪದಗಳ ಮೂಲಕ ಗಮನ ಸೆಳೆದರು.
ಜನಪದ ನೃತ್ಯದಲ್ಲಿ ಗೋಣಿಕೊಪ್ಪ ಪಿಎನ್‍ಎಂ ತಂಡ ಯರವ ಭಾಷೆಯ ಹಾಡಿಗೆ ಯರವ ಜನಾಂಗದ ಹೆಜ್ಜೆ ಹಾಕುವ ಮೂಲಕ ಉತ್ತಮ ಮನ ರಂಜನೆ ನೀಡಿದರು. ಉತ್ತಮ ರೀತಿಯಲ್ಲಿ ನೃತ್ಯ ಪ್ರದರ್ಶನ ಮಾಡಿದರು. ಸೀರೆ ನಿಖರ ಬೆಲೆ ಹೇಳಿ ಸಭಿಕರು 5 ಸೀರೆಗಳನ್ನು ಗೆದ್ದುಕೊಂಡರು.
ಫಲಿತಾಂಶ
ವಾಲಗತ್ತಾಟ್‍ನಲ್ಲಿ ಕಾಳಪಂಡ ಸುಮ (ಪ್ರ), ವಾಟೇರಿರ ದಿವ್ಯಾ (ದ್ವಿ), ಚೇಂದಂಡ ಸುಮಿ ಸುಬ್ಬಯ್ಯ (ತೃ), ಛದ್ಮವೇಶದಲ್ಲಿ ಕ್ಲಾರಾ (ಪ್ರ), ಪಾರ್ವತಿ (ದ್ವಿ), ರಮ್ಯ (ತೃ), ಫುಡ್‍ಫೆಸ್ಟ್‍ನಲ್ಲಿ ಸುಮಿ ಉತ್ತಪ್ಪ (ಪ್ರ), ಸವಿತಾ ಪೊನ್ನಪ್ಪ (ದ್ವಿ) ಸುಗುಣ ಹಾಗೂ ತಂಡ (ತೃ), ಚರ್ಚಾಸ್ಪರ್ಧೆ ನಳಿನಿ - ಪಾರ್ವತಿ (ಪ್ರ), ನಳಿನಾಕ್ಷಿ-ವಾಮನ (ದ್ವಿ), ನಸೀಮಾ-ಸೌಮ್ಯ (ತೃ), ಮ್ಯೂಸಿಕಲ್ ಚೇರ್ ಮುತ್ತಕ್ಕಿ (ಪ್ರ), ಸೆಲ್ವಿ (ದ್ವಿ), ಶೈಲಜಾ (ತೃ), ಬಾಂಬ್ ಇನ್‍ದ ಸಿಟಿಯಲ್ಲಿ ಬಿ.ಎ. ಲಾಲು (ಪ್ರ), ಅಜಿತಾ (ದ್ವಿ), ಮುತ್ತಮ್ಮ (ತೃ), ಜನಪದ ಗೀತೆ ನಳಿನಾಕ್ಷಿ ಮತ್ತು ತಂಡ (ಪ್ರ), ಸುಮಿ ಸುಬ್ಬಯ್ಯ ತಂಡ (ದ್ವಿ), ಫ್ರೆಂಡ್ಸ್ ತಂಡ (ತೃ), ನೃತ್ಯದಲ್ಲಿ ಅನುಬಂಧ (ಪ್ರ), ಪಿಎನ್‍ಎಂ ತಂಡ (ದ್ವಿ), ಪೊನ್ನಕ್ಕ ತಂಡ (ತೃ), ಪಿಕ್ ಅಯಿಂಡ್ ಆಕ್ಟ್‍ನಲ್ಲಿ ಪಾರ್ವತಿ (ಪ್ರ), (ದ್ವಿ) ಸುಗುಣ ಹಾಗೂ ತಂಡ (ತೃ), ಚರ್ಚಾಸ್ಪರ್ಧೆ ನಳಿನಿ - ಪಾರ್ವತಿ (ಪ್ರ), ನಳಿನಾಕ್ಷಿ-ವಾಮನ (ದ್ವಿ), ನಸೀಮಾ-ಸೌಮ್ಯ (ತೃ), ಮ್ಯೂಸಿಕಲ್ ಚೇರ್ ಮುತ್ತಕ್ಕಿ (ಪ್ರ), ಸೆಲ್ವಿ (ದ್ವಿ), ಶೈಲಜಾ (ತೃ), ಬಾಂಬ್ ಇನ್‍ದ ಸಿಟಿಯಲ್ಲಿ ಬಿ.ಎ. ಲಾಲು (ಪ್ರ), ಅಜಿತಾ (ದ್ವಿ), ಮುತ್ತಮ್ಮ (ತೃ), ಜನಪದ ಗೀತೆ ನಳಿನಾಕ್ಷಿ ಮತ್ತು ತಂಡ (ಪ್ರ), ಸುಮಿ ಸುಬ್ಬಯ್ಯ ತಂಡ (ದ್ವಿ), ಫ್ರೆಂಡ್ಸ್ ತಂಡ (ತೃ), ನೃತ್ಯದಲ್ಲಿ ಅನುಬಂಧ (ಪ್ರ), ಪಿಎನ್‍ಎಂ ತಂಡ (ದ್ವಿ), ಪೊನ್ನಕ್ಕ ತಂಡ (ತೃ), ಪಿಕ್ ಅಯಿಂಡ್ ಆಕ್ಟ್‍ನಲ್ಲಿ ಪಾರ್ವತಿ (ಪ್ರ), ಕಡೇಮಾಡ ಕುಸುಮ ಜೋಯಪ್ಪ, ಪ್ರಮುಖರುಗಳಾದ ಕೊಂಗಂಡ ಮಮಿತಾ, ಚೇಂದೀರ ಪ್ರಭಾವತಿ, ಕಡೇಮಾಡ ಕುಸುಮಾ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಬಹುಮಾನ ವಿತರಣೆ ಮಾಡಿದರು. ಗೀತಾನಾಯ್ಡು ನಿರೂಪಿಸಿದರು.
-ವರದಿ - ಸುದ್ದಿಪುತ್ರ