ಮಡಿಕೇರಿ, ಅ. 17: ಹಾರಂಗಿ ಹಿನ್ನೀರಿನ್ನು ದಾಟುತ್ತಿದ್ದ ವೇಳೆ ತೆಪ್ಪ ಮುಳುಗಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿ ಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಎ.ಪಿ. ವಿಶ್ವನಾಥ ಎಂಬವರ ಪುತ್ರ ಎ.ವಿ. ಸುಜಿತ್ (26) ಜಲಸಮಾಧಿ ಯಾಗಿರುವ ನತದೃಷ್ಟ ಯುವಕ ನಾಗಿದ್ದಾನೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಶ್ವರ ದೇವಾಲಯದ ಮುಂಭಾಗದಲ್ಲಿ ಹಾರಂಗಿ ಹಿನ್ನೀರು ಹರಿಯುತ್ತಿದ್ದು, ಆಚೆ ದಡದ ನಿವಾಸಿಗಳು ಈಚೆ ದಂಡೆಯ ಕಡೆಗೆ ಹೋಗಿ ಬರಲು ತೆಪ್ಪವನ್ನು ಅವಲಂಭಿಸಿದ್ದಾರೆ. ಅದೇ ರೀತಿ ತಾ.15ರಂದು ಬೆಳಿಗ್ಗೆ 10.30ರ ಸಮಯದಲ್ಲಿ ಮನೆಯಿಂದ ಕಾರ್ಯನಿಮಿತ್ತ ಕಾನ್‍ಬೈಲ್ ಪಂಚಾಯಿತಿಗೆ ಏಕಾಂಗಿಯಾಗಿ ಹಾರಂಗಿ ಹಿನ್ನೀರಿನಲ್ಲಿ ತೆಪ್ಪದಲ್ಲಿ ಬರುತ್ತಿದ್ದ ಎನ್ನಲಾಗಿದೆ. ಹಿನ್ನೀರಿನ ಮಧ್ಯಭಾಗದಲ್ಲಿ ಆಯ ತಪ್ಪಿದ ತೆಪ್ಪ ಮಗುಚಿಕೊಂಡಿದೆ. ಇದರಿಂದ ನೀರಿಗೆ ಮಡಿಕೇರಿ, ಅ. 17: ಹಾರಂಗಿ ಹಿನ್ನೀರಿನ್ನು ದಾಟುತ್ತಿದ್ದ ವೇಳೆ ತೆಪ್ಪ ಮುಳುಗಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿ ಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಎ.ಪಿ. ವಿಶ್ವನಾಥ ಎಂಬವರ ಪುತ್ರ ಎ.ವಿ. ಸುಜಿತ್ (26) ಜಲಸಮಾಧಿ ಯಾಗಿರುವ ನತದೃಷ್ಟ ಯುವಕ ನಾಗಿದ್ದಾನೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಶ್ವರ ದೇವಾಲಯದ ಮುಂಭಾಗದಲ್ಲಿ ಹಾರಂಗಿ ಹಿನ್ನೀರು ಹರಿಯುತ್ತಿದ್ದು, ಆಚೆ ದಡದ ನಿವಾಸಿಗಳು ಈಚೆ ದಂಡೆಯ ಕಡೆಗೆ ಹೋಗಿ ಬರಲು ತೆಪ್ಪವನ್ನು ಅವಲಂಭಿಸಿದ್ದಾರೆ. ಅದೇ ರೀತಿ ತಾ.15ರಂದು ಬೆಳಿಗ್ಗೆ 10.30ರ ಸಮಯದಲ್ಲಿ ಮನೆಯಿಂದ ಕಾರ್ಯನಿಮಿತ್ತ ಕಾನ್‍ಬೈಲ್ ಪಂಚಾಯಿತಿಗೆ ಏಕಾಂಗಿಯಾಗಿ ಹಾರಂಗಿ ಹಿನ್ನೀರಿನಲ್ಲಿ ತೆಪ್ಪದಲ್ಲಿ ಬರುತ್ತಿದ್ದ ಎನ್ನಲಾಗಿದೆ. ಹಿನ್ನೀರಿನ ಮಧ್ಯಭಾಗದಲ್ಲಿ ಆಯ ತಪ್ಪಿದ ತೆಪ್ಪ ಮಗುಚಿಕೊಂಡಿದೆ.