ಮಡಿಕೇರಿ, ಅ. 17: ವಿ ಫ್ರೆಂಡ್ಸ್ ವೀರಾಜಪೇಟೆ ವತಿಯಿಂದ 23ನೇ ವರ್ಷದ ಶ್ರೀ ಕಾವೇರಿ ತೀರ್ಥ ವಿತರಣಾ ಕಾರ್ಯಕ್ರಮ ತಾ. 18 ರಂದು (ಇಂದು) ಬೆಳಿಗ್ಗೆ 6 ಗಂಟೆಯಿಂದ ವೀರಾಜಪೇಟೆ ನಗರದ ದೇವಸ್ಥಾನಗಳಲ್ಲಿ ಮತ್ತು ಆಶ್ರಮದಲ್ಲಿ ನಡೆಯಲಿದೆ. ಸತತವಾಗಿ 22 ವರ್ಷದಿಂದ ಶ್ರೀ ಕಾವೇರಿ ತೀರ್ಥವನ್ನು ವೀರಾಜಪೇಟೆಯ ಮುಖ್ಯ ಬೀದಿಗಳಲ್ಲಿ ವಿತರಿಸ ಲಾಗುತ್ತಿತ್ತು. ಆದರೆ ಈ ವರ್ಷ ಪ್ರಕೃತಿ ವಿಕೋಪದ ಹಿನ್ನೆಲೆ ಶ್ರೀ ಕಾವೇರಿ ತೀರ್ಥವನ್ನು ನಗರದಲ್ಲಿರುವ ಆಶ್ರಮ ಮತ್ತು ದೇವಸ್ಥಾನಗಳಲ್ಲಿ ವಿತರಿಸಲಾಗುವದು.
ತೀರ್ಥ ವಿತರಿಸುವ ಸ್ಥಳಗಳು: ಗಣಪತಿ ದೇವಾಲಯ, ಶ್ರೀ ಕಾವೇರಿ ಆಶ್ರಮ, ಶ್ರೀ ವಿಷ್ಣು ದುರ್ಗಿ ದೇವಾಲಯ ಶಿವಕೇರಿ, ಆಂಜನೇಯ ದೇವಸ್ಥಾನ ಚಿಕ್ಕಪೇಟೆ, ಮುತ್ತಪ್ಪ ದೇವಸ್ಥಾನ ಮೀನುಪೇಟೆ, ತುಳಸಿ ಮಾರಿಯಮ್ಮ ಸುಣ್ಣದ ಬೀದಿ, ಬಸವನ ಗುಡಿ, ಅಂಗಳಮ್ಮ, ಮಾರಿಯಮ್ಮ ದೇವಸ್ಥಾನ ತೆಲುಗರ ಬೀದಿ, ಗಾಂಧಿ ನಗರ, ಗಣಪತಿ ಪೆಂಡಾಲ್ ಮತ್ತು ಭದ್ರಕಾಳಿ ದೇವಸ್ಥಾನ ಕುಕ್ಲೂರು ಇಲ್ಲಿಂದ ತೀರ್ಥವನ್ನು ಪಡೆದುಕೊಳ್ಳಬಹುದೆಂದು ವಿ ಫ್ರೆಂಡ್ಸ್ ವೀರಾಜಪೇಟೆ ಕಾರ್ಯದರ್ಶಿ ಸಂಪಿ ಪೂಣಚ್ಚ ತಿಳಿಸಿದ್ದಾರೆ.