ಕೂಡಿಗೆ, ಅ. 17: ಹೆಬ್ಬಾಲೆ ಗ್ರಾ.ಪಂ.ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮೀಪದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತೂಗು ಸೇತುವೆಯು ಪ್ರಕೃತಿ ವಿಕೋಪ ಸಂದರ್ಭ ಕಾವೇರಿ ನದಿಗೆ ಹೆಚ್ಚು ನೀರು ಬಂದ ಪರಿಣಾಮ ತೂಗು ಸೇತುವೆ ದುರಸ್ತಿಗೊಂಡಿತ್ತು. ಇದರಿಂದ ಪಿರಿಯಾಪಟ್ಟಣ ತಾಲೂಕಿನ ಹತ್ತು ಗ್ರಾಮದ ಗ್ರಾಮಸ್ಥರು ಕೂಡಿಗೆ ಕುಶಾಲನಗರ ಪ್ರದೇಶಗಳ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಇದನ್ನು ಮನಗಂಡ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಥಳ ಪರಿಶೀಲಿಸಿ ಶಾಸಕರ ಅನುದಾನದಲ್ಲಿ ದುರಸ್ತಿ ಮಾಡಲು ಆದೇಶಿಸಿದ್ದರು. ಅದರಂತೆ ದುರಸ್ತಿ ಮಾಡಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತಿರುಗಾಡಲು ಮುಕ್ತ ಅವಕಾಶವಾಗಿದೆ. ಈ ಭಾಗದ ಸಾವಿರಾರು ಕಾರ್ಮಿಕರಿಗೆ ಅನುಕೂಲವಾಗಿದೆ ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವೆಂಕಟೇಶ್, ಶಿವರುದ್ರಪ್ಪ, ಮಂಜಳಾ ಹಾಗೂ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.