ಮೂರ್ನಾಡು, ಅ. 16: ಇಲ್ಲಿನ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜು ವೆಬ್‍ಸೈಟ್ ಅನ್ನು ಅನಾವರಣ ಗೊಳಿಸಲಾಯಿತು. ಇಂದು ಎಲ್ಲರನ್ನು ಎಲ್ಲವನ್ನು ಸುಲಭವಾಗಿ ಹಾಗೂ ಆಕರ್ಷಕವಾಗಿ ತಲಪಬಲ್ಲ ಮಾಧ್ಯಮವೆಂದರೆ ಅದು ಅಂತರ್‍ಜಾಲವಾಗಿದ್ದು ವೆಬ್‍ಸೈಟ್‍ನ ಅನಾವರಣದಿಂದ ಕಾಲೇಜಿನ ಸಮಸ್ತ ಬೆಳವಣಿಗೆಯನ್ನು, ಸಾಧನೆಯನ್ನು ದಾಖಲಿಸುವ ಮತ್ತು ಜಗತ್ತಿಗೆ ನಮ್ಮನ್ನು ನಾವು ಪರಿಚಯಿಸುವ ಒಂದು ವಿಧಾನವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವೆಬ್‍ಸೈಟ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು ಇಂದಿನ ತಾಂತ್ರಿಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗೊಳ್ಳುವದು ತುಂಬಾ ಮುಖ್ಯವಾಗಿದ್ದು ಕಾಲೇಜಿನ ಸರ್ವತೋಮುಖವಾದ ಬೆಳವಣಿಗೆಗೆ ಇದು ಬಹಳ ಪ್ರಯೋಜನಕಾರಿ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ

ಗಳಾದ ಚೌರೀರ ಪೆಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯನ್ನು ಮಾಡುವದರ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಕಾಲೇಜಿನ ವೆಬ್‍ಸೈಟ್‍ಅನ್ನು ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಅರ್ಪಿತ ಸಿದ್ಧಗೊಳಿ ಸಿದ್ದು ಉತ್ತಮವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ಮಿಸಿದ ಇವರ ಕಾರ್ಯವನ್ನು ಶ್ಲಾಘಿಸ ಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕರು ಹಾಗೂ ಆಂತರಿಕ ಮೌಲ್ಯಮಾಪನ ಸಮಿತಿಯ ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ವೆಬ್‍ಸೈಟ್ ತಿತಿತಿ.mesಜegಡಿee. siಠಿsಟಿiಣಥಿಚಿ.iಟಿನಲ್ಲಿ ವೀಕ್ಷಿಸ ಬಹುದೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಅರ್ಪಿತ ಸ್ವಾಗತಿಸಿ, ಉಪನ್ಯಾಸಕಿ ಕಲ್ಪನ ನಿರೂಪಿಸಿ, ಉಪನ್ಯಾಸಕ ನಾಟೋಳಂಡ ನವೀನ್ ವಂದಿಸಿದರು.