ಚೆಟ್ಟಳ್ಳಿ, ಅ. 16: ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕೊಂಡಂಗೇರಿಯ ಎಲಿಯಂಗಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ನಟರಾಜ್ ಹಾಗೂ ಶಾಲಾ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಬ್ರಮಣಿ ಅವರಿಗೆ ಎಲಿಯಂಗಾಡು ಯುವಕ ಸಂಘ ಹಾಗೂ ಶಾಲಾ ಎಸ್.ಡಿ.ಎಂ.ಸಿ. ಸಹಯೋಗದಲ್ಲಿ ಜಂಟಿಯಾಗಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಂಸ ವಹಿಸಿದ್ದರು. ಈ ಸಂದರ್ಭ ಎಲಿಯಂಗಾಡು ಯುವಕ ಸಂಘದ ವತಿಯಿಂದ ಶಾಲೆಗೆ ಗ್ಯಾಸ್ ಸ್ಟೌವ್ ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷ ಅಂದಾಯಿ, ಒಂಟಿಯಂಗಡಿ ವಲಯ ಸಿ.ಆರ್.ಪಿ. ಸುಶ್ಮಾ, ಪಂಚಾಯಿತಿ ಸದಸ್ಯ ಲೋಕೇಶ್, ಮುಖ್ಯ ಶಿಕ್ಷಕ ಸುಬ್ರಮಣಿ, ಕೊಂಡಂಗೇರಿ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್, ಗ್ರಾಮಸ್ಥರಾದ, ಸಮದ್, ಮುಸ್ತಫಾ, ಆಲಿ, ಸಾಫಿ, ಷಂಶುದ್ದೀನ್ ಉಪಸ್ಥಿತರಿದ್ದರು.