ಸೋಮವಾರಪೇಟೆ, ಅ. 16: ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವದಕ್ಕೆ ಕೃಷಿಕರು ಹೆಚ್ಚಿನ ಗಮನ ಹರಿಸಬೇಕು ಎಂದು ಮಡಿಕೇರಿ ನಬಾರ್ಡ್ ಬ್ಯಾಂಕ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಂ.ಸಿ. ನಾಣಯ್ಯ ಕರೆ ನೀಡಿದರು. ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸೋಮವಾರಪೇಟೆ ತಾಲೂಕು ಭುವನಮಂದಾರ ರೈತ ಉತ್ಪಾದಕರ ಕಂಪೆನಿಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿಕರು ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು. ಕೃಷಿಗೆ ಪೂರಕ ವಾತಾವರಣವಿರುವ ಪ್ರಪಂಚದ 10 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಆದರೂ ದೇಶದಲ್ಲಿ ಉತ್ಪಾದನೆ ಯಾಗುವ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಒಂದಷ್ಟು ಹಿನ್ನಡೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಪದಾಧಿಕಾರಿ ಗಳಾದ ಖಾಲಿಸ್ತಾ ಡಿಸಿಲ್ವಾ, ಪಿ.ಡಿ. ಮೋಹನ್‍ದಾಸ್, ಕೆ.ಪಿ. ರಮೇಶ್, ಎನ್.ಎ. ಚಂದ್ರಶೇಖರ್, ಕೆ.ಸಿ. ಸೂರ್ಯಕುಮಾರ್, ಪಿ.ಜೆ. ವಿನ್ಸೆಂಟ್, ಎಂ.ಡಿ. ಲೋಕೇಶ್, ಕೆ.ಜಿ. ಗುಂಡಪ್ಪ, ಕವಿತಾ ವಿರೂಪಾಕ್ಷ, ಚಂದ್ರಿಕಾ ಕುಮಾರ್, ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ದಯಾನಂದ್ ಉಪಸ್ಥಿತರಿದ್ದರು.