ಸೋಮವಾರಪೇಟೆ, ಅ. 16: ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಸರಸ್ವತಿ ಪೂಜೆ ಹಾಗೂ ಅಕ್ಷರಭ್ಯಾಸ ನಡೆಯಿತು.

ವಿದ್ಯಾದೇವತೆ ಸರಸ್ವತಿ ಪೂಜೆ ಅಂಗವಾಗಿ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ದೇವಾಲಯದ ಅರ್ಚಕ ಪ್ರಸನ್ನ ಕುಮಾರ್ ಭಟ್ ಪುರೋಹಿತ್ಯದಲ್ಲಿ ಬೆಳಗ್ಗಿನಿಂದ ವಿಶೇಷ ಪೂಜೆ ನೆರವೇರಿತು. ನಂತರ 25 ಮಕ್ಕಳಿಂದ ಸರಸ್ವತಿ ಪೂಜೆ ಮತ್ತು ಅಕ್ಷರಭ್ಯಾಸ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಶ್ಯಾಂಪ್ರಸಾದ್, ರಾಜೇಶ್, ರವಿಶಂಕರ್, ಚಿತ್ರ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.